ಕಡಬ: ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಡನ್ -ವಿದ್ಯಾರ್ಥಿಗಳಿಗೆ ಬಣ್ಣಗಳ ದಿನ

0

ಕಡಬ: ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಡನ್, ಮಕ್ಕಳಿಗೆ ಡಿ.12 ರಿಂದ ಡಿ.17 ರ ವರೆಗೆ ಒಂದು ವಾರ ವಿವಿಧ ಬಣ್ಣಗಳನ್ನು ಪರಿಚಯಿಸುವ ಸಲುವಾಗಿ ಬಣ್ಣಗಳ ದಿನವನ್ನು ಹಮ್ಮಿಕೊಳ್ಳಲಾಯಿತು. ಮೊದಲ ದಿನ ಪಿಂಕ್ ಬಣ್ಣ, ಈ ದಿನದಂದು ವಿವಿಧ ಬಗೆಯ ಹಣ್ಣುಗಳನ್ನು ತಂದು ಅದನ್ನು ಪರಿಚಯಿಸಿ ವಿವಿಧ ರೀತಿಯಲ್ಲಿ ಅಲಂಕರಿಸಲಾಗಿತ್ತು.


ಎರಡನೇಯ ದಿನ ಹಳದಿ ಬಣ್ಣ, ಈ ದಿನದಂದು ವಿವದ ರೀತಿಯ ಹೂವುಗಳನ್ನು ಪೋಷಕರು ಅಲಂಕರಿಸಿ ಕೊಡುವಂತೆ ಸೂಚಿಸಲಾಗಿತ್ತು, ಹೂವುಗಳನ್ನು ಪರಿಚಯಿಸಿ, ಅದನ್ನು ಪ್ರದರ್ಶಿಸಲಾಯಿತು.


ಮೂರನೇ ದಿನ ನೀಲಿ ಬಣ್ಣ, ವಿವಿಧ ಬಗೆಯ ತರಕಾರಿಗಳನ್ನು ತರುವಂತೆ ಸೂಚಿಸಲಾಗಿತ್ತು ಅದನ್ನು ಪರಿಚಯಿಸಿ ಪ್ರದರ್ಶಿಸಲಾಯಿತು.
ನಾಲ್ಕನೆಯ ದಿನ ಹಸಿರು ಬಣ್ಣ , ಪ್ರಕೃತಿಯ ಬಗ್ಗೆ ಕಾಳಜಿ ಹಾಗೂ ಪ್ರೀತಿ ಮೂಡಿಸುವ ಸಲುವಾಗಿ ಮಕ್ಕಳನ್ನು ಸಾಲುಮರದ ತಿಮ್ಮಕ್ಕ ವೃಂದಾವನಕ್ಕೆ ಹೊರ ಸಂಚಾರ ಕರೆದುಕೊಂಡು ಹೋಗಲಾಯಿತು.


ಐದನೇಯ ದಿನ ಕೆಂಪು ಬಣ್ಣ , ಮಕ್ಕಳಿಗೆ ಧಾನ್ಯಗಳನ್ನು ಪರಿಚಯಿಸಿ ಪ್ರದರ್ಶಿಸಲಾಯಿತು. ಹಾಗೂ ಎಲ್ಲಾ ದಿನಗಳಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಪ್ರಾಂಶುಪಾಲರು ಮಾತನಾಡಿ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡುವುದು ನಮ್ಮ ಗುರಿ, ಈ ರೀತಿಯ ಚಟುವಟಿಕೆಗಳು ಮಕ್ಕಳನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಈ ಬಣ್ಣಗಳ ದಿನಗಳು ಯಶಸ್ವಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here