ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಮೃದುಕೌಶಲ್ಯ ತರಬೇತಿ ಹಾಗೂ ಕೌಶಲ್ಯ ಜೋಡಣೆ ಕಾರ್‍ಯಾಗಾರ

0

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯದ ಬಗ್ಗೆ ಒಂದು ದಿನದ ಮಾಹಿತಿ ಕಾರ್‍ಯಾಗಾರವನ್ನು ನಡೆಸಲಾಯಿತು.

ಈ ಕಾರ್‍ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ತರಬೇತಿ ಅಧಿಕಾರಿ ರೋಹಿತ್ ಮತ್ತು “ನಾಂದಿ ಪೌಂಡೇಶನ್”ನ ತರಬೇತುದಾರರು ಶ್ರೀನಿವಾಸ್‌ ಕುಲಕರ್ಣಿ ಸಂಪನ್ಮೂಲ ವ್ಯಕ್ತಿಯಾಗಿ  ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿಯನ್ನು ನೀಡಿದರು.


ಕಾರ್‍ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಮಾತನಾಡುತ್ತಾ “ಸಂಪನ್ಮೂಲದ ಸದುಪಯೋಗ ಪಡಿಸಲು ಕೌಶಲ್ಯ ತರಬೇತಿಯನ್ನು ಪಡೆದ ಮಾನವನ ಅವಶ್ಯಕತೆ ಒಂದು ಕ್ಷೇತ್ರದ ಹಾಗೂ ರಾಜ್ಯದ ಅಭಿವೃದ್ದಿಗೆ ಅವಶ್ಯ. ಕೌಶಲ್ಯವನ್ನು ಹೊಂದಿ ಉಳಿದವರಿಗಿಂತ ನಾವು ಭಿನ್ನರಾದಾಗ ಅವಕಾಶಗಳು ಹೆಚ್ಚು. ಆದ್ದರಿಂದ ಇಂತಹ ತರಬೇತಿಯನ್ನು ಪಡೆದು ನೀವು ಉತ್ತಮ ಭವಿಷ್ಯ ಹೊಂದಿ” ಎಂದು ಶುಭ ಹಾರೈಸಿದರು.

ಈ ಕಾರ್‍ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಅಧ್ಯಕ್ಷ ವಿಶ್ವೇಶ್ವರ್ ಭಟ್ ಬಂಗಾರಡ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ”ನೀವು ಕೌಶಲ್ಯವನ್ನು ಹೆಚ್ಚಿಸಿಕೊಂಡಲ್ಲಿ ಜೀವನದಲ್ಲಿ ಮುಂದೆ ಬರಲು ಹೆಚ್ಚು ಅವಕಾಶಗಳಿವೆ. ಪಾಠದ ಜೊತೆಗೆ ಇಂತಹ ಮೌಲ್ಯವರ್ಧಕಗಳನ್ನು ಹೊಂದಿಸಿಕೊಂಡಲ್ಲಿ ಹೆಚ್ಚಿನ ಸಾಮರ್ಥ್ಯವಂತರಾಗುತ್ತೀರಿ. ಇಂತಹ ಕಾರ್‍ಯಕ್ರಮಗಳು ನಿಮಗೆ ಲಾಭದಾಯಕವಾಗಿರಲಿ” ಎಂದು ನುಡಿದರು.

ಈ ಕಾರ್‍ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಈಶ್ವರಚಂದ್ರ ,ರವಿ ಮುಂಗ್ಲಿಮನೆ ಮತ್ತು ಉಷಾ ಮುಳಿಯ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರು.ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಪುಷ್ಪಾಬಿ.ಎನ್. ವಂದನಾರ್ಪಣೆಗೈದರು. ಉದ್ಯೋಗ ಮಾಹಿತಿ ಕೇಂದ್ರದ ನಿಯೋಜನ ಅಧಿಕಾರಿ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕಿ  ಉಷಾಕಿರಣ್.ಎಸ್.ಎಂ. ಕಾರ್‍ಯಕ್ರಮದ ನಿರೂಪಿಸಿದರು.

LEAVE A REPLY

Please enter your comment!
Please enter your name here