ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ : ಸೌಮ್ಯ ಸುಬ್ರಹ್ಮಣ್ಯ
ಪುತ್ತೂರು: ಕಲಿಕಾ ಚೇತರಿಕಾ ವರ್ಷ 2022, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಿಯಡ್ಕ, ಹಿರಿಯ ವಿದ್ಯಾರ್ಥಿ ಸಂಘ ಅರಿಯಡ್ಕ ಇದರ ಆಶ್ರಯದಲ್ಲಿ ಚಿಣ್ಣರ ಕಲರವ 2022 ದ.17 ರಂದು ನಡೆಯಿತು.
ಬೆಳಿಗ್ಗೆ ಪಯಂದೂರು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಅರಿಯಡ್ಕ ಎ.ಕೆ ರೈಯವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಸಾಂಸ್ಕೃತಿಕ ವೈವಿಧ್ಯಗಳು ನಡೆದು ಮಧ್ಯಾಹ್ನ ಸಹಭೋಜನ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯ ಸುಬ್ರಹ್ಮಣ್ಯರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ನಿರ್ಮಾಣ ಮಾಡಿಕೊಡುವುದು ಶಾಲಾ ಶಿಕ್ಷಕರ ಮತ್ತು ಪೋಷಕರ ಹಾಗೂ ಶಿಕ್ಷಣ ಪ್ರೇಮಿಗಳ ಕರ್ತವ್ಯವಾಗಿದೆ. ಮಕ್ಕಳ ಪ್ರತಿಭೆಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶಾಲಾ ಶರ ಸಂಭ್ರಮ ಆಚರಣೆ ಸಂದರ್ಭದಲ್ಲಿ ಗ್ರಾಪಂನಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಗುಂಡ್ಯಡ್ಕ ವಾಸು ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹಿರಿಯ ವಿದ್ಯಾರ್ಥಿಯಾದ ನಾನು ಮುಂದಿನ ದಿನಗಳಲ್ಲಿ ನನ್ನ ಸಂಪೂರ್ಣ ಸಹಕಾರದೊಂದಿಗೆ ಸಂಸ್ಥೆಯ ಜೊತೆ ಕೈಜೋಡಿಸುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂಬ್ರ ಮರ್ಕಝುಲ್ ಹುದಾ ವ್ಯುಮೆನ್ಸ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ಮಾತನಾಡಿ, ಸಂಸ್ಕೃತಿ, ಸಂಸ್ಕಾರದ ಶಿಕ್ಷಣ ಇಂದಿನ ಮಕ್ಕಳಿಗೆ ಅಗತ್ಯವಿದೆ. ಇದು ಶಾಲೆ ಮತ್ತು ಮನೆಯಿಂದಲೂ ಮಕ್ಕಳಿಗೆ ಸಿಗುವಂತಾಗಬೇಕು ಎಂದರು.
ಕಾವು ಕ್ಲಸ್ಟರ್‌ನ ಸಿಆರ್‌ಪಿ ಪ್ರಸಾದ್ ಕಾವು, ಸರಕಾರಿ ಪ್ರೌಢ ಶಾಲೆ ಪಾಪೆಮಜಲು ಇದರ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿ,ಕುಂಬ್ರ ಮಾತೃಶ್ರೀ ಅರ್ಥ್ ಮೂವರ್‍ಸ್‌ನ ಮಾಲಕ ಮೋಹನ್‌ದಾಸ್ ರೈ ಕುಂಬ್ರ, ಪಂಚಾಯತ್ ಸದಸ್ಯೆ ರೇಣುಕಾ ಸತೀಶ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಕೊಡಗು ಅಗ್ನಿ ಶಾಮಕ ದಳದ ಸಿಬ್ಬಂದಿ ಈಶ್ವರ ಪಿ ರವರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಸನ್ಮಾನ ಕಾರ್ಯಕ್ರಮ
ಸಂಸ್ಥೆಯ ಹಿರಿಯ ವಿದ್ಯಾರ್ಥಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಇಬ್ರಾಹಿಂರವರನ್ನು ಮತ್ತು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿರುವ ಮುಖ್ಯ ಶಿಕ್ಷಕಿ ಶಶಿಪ್ರಭಾರವರನ್ನು ಈ ಸಂದರ್ಭದಲ್ಲಿ ಪೇಟಾ,ಶಾಲು,ಸ್ಮರಣಿಕೆ,ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪ್ರ.ಕಾರ್ಯದರ್ಶಿ ಇಬ್ರಾಹಿಂ ಎ.ಆರ್, ಉಪಾಧ್ಯಕ್ಷ ದಿನೇಶ್ ಕುಮಾರ್ ಮಡ್ಯಂಗಳ, ಕೋಶಾಧಿಕಾರಿ ಸುಕುಮಾರ್ ಮಡ್ಯಂಗಳ, ಇಕ್ಬಾಲ್ ಹುಸೇನ್ ಕೌಡಿಚ್ಚಾರು,ಸಂಶುದ್ದೀನ್ ಎಂ.ಆರ್, ಗಣೇಶ್ ರೈ ಪಾಲ್ಗುಣಿ, ಗಣೇಶ್ ಶೇಖಮಲೆ, ಉಮೇಶ್ ಯು.ಎಸ್ ಶೇಖಮಲೆ, ಶರತ್ ಮಡ್ಯಂಗಳ, ಎಸ್.ಡಿಎಂಸಿ ಉಪಾಧ್ಯಕ್ಷೆ ದುರ್ಗಾವತಿ, ಗುರುವಪ್ಪ ಶೇಖಮಲೆ, ಮಹಮ್ಮದ್ ಬೊಳ್ಳಾಡಿ, ಪ್ರಮೋದ್ ರೈ ಪನೆಕ್ಕಳ, ಶಿಕ್ಷಕರಾದ ಕಮಲಾಕ್ಷಿ, ಜ್ಯೋತಿ ರೆಬೆಲ್ಲೋ, ರೆಜಿನಾ ಡಿ’ಸೋಜಾ, ಮಾಲತಿ ಕೆ, ಗಂಗಾಧರ ನಾಯ್ಕ ಎ ಅಲ್ಲದೆ ಹರೀಶ್ ಪ್ರಸಾದ್ ಶೇಖಮಲೆ, ಅಶೋಕ್ ಬೊಳ್ಳಾಡಿ, ವಿದ್ಯಾರ್ಥಿ ನಾಯಕಿ ಆಯಿಷತ್ ಸಂಸೀನಾ, ನಿತಿನ್ ರೈ ಮಡ್ಯಂಡಳ,ಸುದರ್ಶನ್ ರೈ ಪನೆಕ್ಕಳ, ಕಿರಣ್ ಮಡ್ಯಂಗಳ, ಶಾಲಾ ಎಸ್‌ಡಿಎಂಸಿ ಸದಸ್ಯರುಗಳು, ಅಂನವಾಡಿ ಕಾರ್ಯಕರ್ತೆಯರು ಸಹಕರಿಸಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ರೈ ಜಾರತ್ತಾರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್ ಹನೀಫ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಶಾಲಾ ಮುಖ್ಯಗುರು ಜಯಂತಿ ಎಸ್. ವರದಿ ವಾಚಿಸಿದರು. ಹಿರಿಯ ವಿದ್ಯಾರ್ಥಿ ಬಶೀರ್ ಕೌಡಿಚ್ಚಾರು ವಂದಿಸಿದರು. ಪಟ್ಟೆ ಪ್ರತಿಭಾ ಪ್ರೌಢ ಶಾಲೆಯ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.
ಚಿಣ್ಣರ ಕಲರವ, ಸಾಂಸ್ಕೃತಿಕ ವೈವಿಧ್ಯ
ಬೆಳಿಗ್ಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಸಹಭೋಜನ,ಅಪರಾಹ್ನ ಅಂಗನವಾಡಿ ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಶ್ರೀವಾರಿ ಮ್ಯೂಸಿಕಲ್ಸ್ ಬದಿಯಡ್ಕ ಇವರಿಂದ ಸಂಗೀತ ರಸಮಂಜರಿ ಮನರಂಜಿಸಿತು.
` 2025 ಕ್ಕೆ ಶಾಲಾ ಶತ ಸಂಭ್ರಮ ಆಚರಿಸಲಾಗುತ್ತಿದೆ. ನಾವೆಲ್ಲರೂ ಒಟ್ಟುಗೂಡಿ ಸಂಭ್ರಮ ಪಡುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸೋಣ. ಶತ ಸಂಭ್ರಮದ ಯಶಸ್ವಿಗೆ ಸರ್ವರ ಸಹಕಾರ ಬಯಸುತ್ತೇವೆ.’
ಹರೀಶ್ ರೈ ಜಾರತ್ತಾರು, ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ