ಸರ್ವೆ: ಕಲ್ಪಣೆಯಲ್ಲಿ ಧರ್ಮಸ್ಥಳ ಗ್ರಾ.ಯೋ. ಸರ್ವೆ ಎ ಒಕ್ಕೂಟದ 20 ನೇ ವಾರ್ಷಿಕೋತ್ಸವ, ಕ್ರೀಡಾಕೂಟ-ಬಹುಮಾನ ವಿತರಣೆ

0

ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಕ್ರೀಡಾ ಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷ ವಿಶ್ವಂಭರ ಶೆಟ್ಟಿ ಹಾಗೂ ಎಲಿಯ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ ಶುಭ ಹಾರೈಸಿದರು.

ಕೆಮ್ಮಿಂಜೆ ವಲಯ ಮೇಲ್ವಿಚಾರಕಿ ಮೋಹಿನಿ ಉಪಸ್ಥಿತರಿದ್ದರು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸರ್ವೆ ಕಲ್ಪಣೆ ಸ.ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಹಾಗೂ ನವಜೀವನ ಸಮಿತಿಯ ಸದಸ್ಯ ಅಣ್ಣಪ್ಪ ಸೊರಕೆ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಸರ್ವೆ ಎ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ಸ್ವಾಗತಿಸಿದರು. ಕೃತಿ ಬಲ್ಯಾಯ ಪ್ರಾರ್ಥಸಿದರು. ಸವಿತಾ ವಂದಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಸರ್ವೆ `ಎ’ ಒಕ್ಕೂಟದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.

ತ್ರೈ ಮಾಸಿಕ ಸಭೆ
ನಂತರ ತ್ರೈಮಾಸಿಕ ಸಭೆ ನಡೆಯಿತು. ಸರ್ವೆ ಎ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಯೋಜನಾಧಿಕಾರಿ ಆನಂದ.ಕೆ ಅವರು ಒಕ್ಕೂಟದ ಕುರಿತು ಮಾಹಿತಿ ನೀಡಿದರು.ಸರ್ವೆ ಎ ಒಕ್ಕೂಟದ ಸೇವಾಪ್ರತಿನಿಧಿ ರೇಖಾ ರೈ, ಬಿಎಲ್‌ಎ ನಳಿನಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಓಂ ಶಕ್ತಿ ಸಂಘದ ಸದಸ್ಯರು ಸಭೆ ನಿರ್ವಹಿಸಿದರು. ಕ್ರೀಡಾಕೂಟದ ಸಂಚಾಲಕ ರಾಧಾಕೃಷ್ಣ ರೈ ರೆಂಜಲಾಡಿ ಉಪಸ್ಥಿತರಿದ್ದರು. ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಓಂ ಶಕ್ತಿ ಸಂಘದ ಸದಸ್ಯ ವಸಂತ ರೈ ಸ್ವಾಗತಿಸಿದರು. ರಾಮಚಂದ್ರ ಸೊರಕೆ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here