ವಿಟ್ಲ: ಆಟೋ ರಿಕ್ಷಾವೊಂದರಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ವಿಟ್ಲ ಠಾಣಾ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯ ಮೇಗಿನಪೇಟೆಯಲ್ಲಿ ಸಾಲೆತ್ತೂರು ಭಾಗದಿಂದ ಬಂದ ಆಟೋ ರಿಕ್ಷಾವೊಂದನ್ನು ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರೂ ಆಟೋ ಚಾಲಕ ಅಲ್ಪ ಮುಂದೆ ರಿಕ್ಷಾವನ್ನು ನಿಲ್ಲಿಸಿ ಪರಾರಿಯಾಗಿದ್ದ. ಪೊಲೀಸರು ರಿಕ್ಷಾವನ್ನು ಪರಿಶೀಲನೆ ನಡೆಸಿದಾಗ ಅದರೊಳಗೆ ಪ್ಲಾಸ್ಟಿಕ್ ಕವರ್ ನಲ್ಲಿ 25 ಕಿಲೋ ದನದ ಮಾಂಸ ಪತ್ತೆಯಾಗಿದೆ.
ದನದ ಮಾಂಸ ಮತ್ತು ಆಟೋವನ್ನು ಪೊಲೀಸರು ವಶಕ್ಕೆ ಪಡೆದು, ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಐತ್ತಕುಮೇರು ನಿವಾಸಿ ಮೊಹಮ್ಮದ್ ರವರ ಪುತ್ರ ಅಬೂಬಕ್ಕರ್ ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.