ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಆರ್ದ್ರಾ ನಕ್ಷತ್ರದಂದು ನಡೆಯುವ ಮೃತ್ಯುಂಜಯ ಹೋಮ ಜ.6ರಂದು ಜರುಗಲಿದೆ.
ಮೃತ್ಯುಂಜಯ ಹೋಮ ಸೇವೆ ಮಾಡಿಸುವ ಭಕ್ತರು ದೇವಳದ ಕೌಂಟರ್ನಲ್ಲಿ ಸೇವಾ ರಶೀದಿ ಪಡೆಯುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ತಿಳಿಸಿದ್ದಾರೆ.