ಪುತ್ತೂರಿನ ಪತ್ರಿಕಾ ಭವನ ಯಾರಿಗೆ ಸೇರಿದ್ದು? ಪತ್ರಕರ್ತರಿಗೆ ಗೌರವದಿಂದ ಪುಕ್ಕಟೆಯಾಗಿ ನೀಡಿದ ಪತ್ರಿಕಾ ಭವನ ಜನರಿಗೆ ನೆರವಾಗ್ತಿದ್ಯಾ?

0
  • ಪುತ್ತೂರಿನ ಸ್ಯಾಂಟ್ರೋ ರವಿ… ಅನೀಶ್‌ನ ತಂಡದ ಅಡ್ಡೆಯ ತಾಣ ಈ ಪತ್ರಿಕಾ ಭವನ
  • ಆ ತಾಣದಿಂದ ಅನೀಶ್‌ನ ತಂಡವನ್ನು ಹೊರಹಾಕಲು ಶಾಸಕರಿಂದ, ಅಧಿಕಾರಿಗಳಿಂದ, ಪತ್ರಿಕಾ ಸಂಘದವರಿಂದ ಸಾಧ್ಯವಿಲ್ಲವೇ…

 

ಪತ್ರಿಕಾ ಭವನ.. ನಾಗರಿಕರ ಕಷ್ಟಗಳನ್ನು ಹೇಳಿಕೊಳ್ಳುವ ತಾಣ…ಪತ್ರಕರ್ತರಿಗೆ ಮಾಹಿತಿ ಕಲೆ ಹಾಕಲು ಸರ್ಕಾರವೇ ಒದಗಿಸಿಕೊಟ್ಟ ಕೋಟ್ಯಾಂತರ ರೂ. ಬೆಲೆಯ ವಿಶಾಲವಾದ ಕಟ್ಟಡ..ಅದೂ ಕೂಡ ಪುತ್ತೂರಿನ ಪತ್ರಿಕಾ ಭವನ ನಗರದ ಹೃದಯ ಭಾಗದಲ್ಲಿದೆ.. ಟೌನ್ ಹಾಲ್, ಮಿನಿ ವಿಧಾನ ಸೌಧ, ಕೋರ್ಟ್, ತಾಲೂಕು ಪಂಚಾಯತ್, ಸರ್ಕಾರಿ ಆಸ್ಪತ್ರೆ ಎಲ್ಲದ್ದಕ್ಕೂ ಕೂಗಳತೆ ದೂರದಲ್ಲಿರುವ ಕೋಟ್ಯಾಂತರ ರೂಪಾಯಿ ಮೌಲ್ಯದ ಪತ್ರಿಕಾ ಭವನದ ಒಡೆತನ ಯಾರ ಕೈಯಲ್ಲಿದೆ. ಅಲ್ಲಿಯ ಲಕ್ಷಾಂತರ ರೂಪಾಯಿಯ ಸಂಪಾದನೆಗೆ, ಅಲ್ಲಿಯ ವ್ಯವಹಾರಗಳಿಗೆ, ಅವ್ಯವಹಾರಗಳಿಗೆ ಜವಾಬ್ದಾರಿ ಯಾರು? ಅನ್ನುವುದು ಈಗಿರುವ ಪ್ರಶ್ನೆಯಾಗಿದೆ.


ಸರ್ಕಾರದ ಪತ್ರಿಕಾ ಭವನ ಯಾರ ಕಂಟ್ರೋಲ್‌ನಲ್ಲಿದೆ? ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿದ್ಯಾ ಭವನ? ಹಿಂದಿನ ಪುತ್ತೂರು ತಾಲೂಕು ಸಂಘಕ್ಕೆ ಇನ್ನೂ ಅಸ್ತಿತ್ವ ಇದೆಯಾ?
ಸರ್ಕಾರದ ವಾರ್ತಾ ಇಲಾಖೆಗೆ ಸೇರಿರುವ ಪತ್ರಿಕಾ ಭವನದ ಮೇಲೆ ಅಧಿಪತ್ಯ ಸಾಧಿಸುವವರು ಯಾರು ಅನ್ನುವುದು ಈಗಿರುವ ಪ್ರಶ್ನೆಯಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದಿಂದ ಇತ್ತೀಚೆಗೆ ಚುನಾಯಿತರಾದ ಮಂಡಳಿಯು ಭವನವನ್ನು ಉಪಯೋಗಿಸುತ್ತಿದೆಯೋ ಅಥವಾ ಹಿಂದೆ ಇದ್ದ ಪುತ್ತೂರು ತಾಲೂಕು ಸಂಘದ ಅಸ್ತಿತ್ವದಲ್ಲೇ ಇನ್ನೂ ಇದ್ಯಾ ಪತ್ರಿಕಾಗೋಷ್ಠಿಗಳಿಂದ ಸಂಪಾದನೆಯಾಗುವ ಲಕ್ಷಾಂತರ ರೂ. ಹಣ ಸರಿಯಾಗಿ ಉಪಯೋಗವಾಗುತ್ತಿದೆಯೇ? ದುರುಪಯೋಗವಾಗುತ್ತಿದೆಯೇ? ಉಚಿತವಾಗಿ, ಯಾವುದೇ ಬಾಡಿಗೆ ಇಲ್ಲದೆ ಕಟ್ಟಡವನ್ನು ನೀಡಿರುವ ಸರಕಾರಕ್ಕೆ ಅದರಲ್ಲಿ ಪಾಲು ಹೋಗುತ್ತಿದೆಯೇ? ಅಲ್ಲಿಯ ಲೆಕ್ಕ ಪತ್ರದಲ್ಲಿ ಇಲ್ಲಿಯವರೆಗೆ ಆಗಿರುವ ಗೋಲ್‌ಮಾಲ್‌ಗೆ ಹೊಣೆ ಯಾರು? ಅನ್ನುವುದು ಈಗ ಪ್ರಶ್ನೆಯಾಗಿದೆ.

ಪತ್ರಿಕಾ ಭವನ ರಾತ್ರಿಯಿಡೀ ತೆರೆದಿಡಬಹುದೇ? ರಾತ್ರಿ ಪತ್ರಿಕಾ ಭವನದಲ್ಲಿ ಯಾರಿರುತ್ತಾರೆ,ಏನು ಮಾಡ್ತಾರೆ
ಪುತ್ತೂರಿನ ಪತ್ರಿಕಾ ಭವನ ವಾರದ ಕೆಲ ದಿನಗಳಲ್ಲಿ ಸಂಜೆ ಆರು ಗಂಟೆಯ ನಂತರವೂ ತೆರೆದಿರುತ್ತದೆ. ರಾತ್ರಿ ೧೦, ೧೧ರ ನಂತರವೂ ಅಲ್ಲಿ ಜನರಿರುತ್ತಾರೆ, ಕೆಲವೊಮ್ಮೆ ಅಲ್ಲಿಯೇ ತಂಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದ್ರೆ ಸಂಜೆ ೫.೩೦ರ ನಂತರ ಪತ್ರಿಕಾ ಭವನದಲ್ಲಿ ಪ್ರೆಸ್ ಮೀಟ್ ಮಾಡುವವರು ಯಾರು? ಯಾರಿಗಾಗಿ,ಯಾರ ಹಿತಾಸಕ್ತಿಗಾಗಿ ಪತ್ರಿಕಾ ಭವನ ತೆರೆದಿಡಲಾಗುತ್ತದೆ. ಇಲ್ಲಿ ರಾತ್ರಿ ತಂಗುವವರು ಇದ್ದಾರಾ? ಹಿಂದಿನಂತೆ ಈಗಲೂ ಗುಂಡು ತುಂಡು ಪಾರ್ಟಿ ಇಲ್ಲಿ ನಡೆಯುತ್ತಿದ್ಯಾ? ಡೀಲ್ ಮಾಸ್ಟರ್ ಗಳಿಗೆ ಈಗಲೂ ಬ್ರೇಕ್ ಹಾಕೋದಕ್ಕೆ ಸರ್ಕಾರಕ್ಕೆ, ವಾರ್ತಾ ಇಲಾಖೆಗೆ, ಪತ್ರಕರ್ತರ ಸಂಘಗಳಿಗೆ ಸಾಧ್ಯವಾಗಿಲ್ವಾ ಅನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ.
ಪತ್ರಿಕಾ ಭವನ ಯಾರಿಗೆ ಸೇರಿದ್ದು ಎಂದು ಘೋಷಿಸಲಿ ಸರ್ಕಾರ ಬಾಡಿಗೆ ಇಲ್ಲದೇ, ಕೇವಲ ಕರೆಂಟ್ ಬಿಲ್ ಕಟ್ಟಿದ್ರೆ ಮುಗೀತಾ?
ಪಾರ್ಕಿಂಗ್ ವ್ಯವಸ್ಥೆಯುಳ್ಳ, ಉತ್ತಮವಾದ ಕಟ್ಟಡವನ್ನು ಯಾವುದೇ ಬಾಡಿಗೆ ಸಹಿತ ಇಲ್ಲದೆ ಸರ್ಕಾರ ಕಟ್ಟಿಕೊಟ್ಟಿದೆ. ಇಂತಹ ಭವ್ಯ ಪತ್ರಿಕಾ ಭವನ ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು. ಅಲ್ಲಿಯ ವ್ಯವಹಾರಗಳಿಗೆ ಸರಿಯಾದ ಜವಾಬ್ದಾರಿ ಇರಬೇಕು. ಅದಕ್ಕಾಗಿ ಸರ್ಕಾರದ ವಾರ್ತಾ ಇಲಾಖೆ ಪುತ್ತೂರು ಪತ್ರಿಕಾ ಭವನ ಯಾರಿಗೆ ಸೇರಿದ್ದು ಅಂತ ಘೋಷಿಸಬೇಕಿದೆ. ತಾಲೂಕಿನಲ್ಲಿರುವ ಎಲ್ಲಾ ಪತ್ರಕರ್ತರಿಗೆ ತಮ್ಮ ಕಾರ್ಯಕ್ರಮಗಳ ಆಯೋಜನೆಗೆ ಈ ಪತ್ರಿಕಾ ಭವನವನ್ನು ಮೀಸಲಿಡಬೇಕಾಗಿದೆ. ಇದು ಸಾಧ್ಯನಾ.. ಅಥವಾ ಯಾವುದಾದರೂ ಒಂದು ಸಂಘಕ್ಕೆ ಸೇರಿದ್ದಾ ಅನ್ನುವುದು ಇನ್ನೂ ಕೂಡ ಕನ್ಫ್ಯೂಶನ್‌ಗೆ ಕಾರಣವಾಗಿದೆ.
ಡೀಲ್, ಪಾರ್ಟಿ, ಗಮ್ಮತ್ತಿನ ತಾಣವಾಗಿಯೇ ಇರುತ್ತಾ ಭವನ?
ಪುತ್ತೂರಿನಲ್ಲಿರುವುದು ಪತ್ರಿಕಾ ಭವನವೋ..ಡೀಲ್, ಪಾರ್ಟಿಗಳ ತಾಣವೋ ಅನ್ನುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರ ಜೊತೆ ತನ್ನ ದುರ್ವರ್ತನೆ, ದುಶ್ಚಟ, ಡೀಲ್‌ಗಳಿಂದಲೇ ಪತ್ರಿಕಾ ಭವನದ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ್ದ, ಹಿಂದೊಮ್ಮೆ ತನ್ನ ಪತ್ರಿಕಾ ಭವನದಲ್ಲಿ ನಡೆಸಿದ ಅವ್ಯವಹಾರಕ್ಕಾಗಿ ಸಂಘದಿಂದ ಉಚ್ಛಾಟನೆಗೊಂಡಿದ್ದ ಅನೀಶ್ ಕುಮಾರ್ ತನ್ನ ತಂಡದೊಂದಿಗೆ ಮತ್ತೆ ಪತ್ರಿಕಾ ಭವನದಲ್ಲಿ ತನ್ನ ಆಟಾಟೋಪ ಶುರುವಿಟ್ಟುಕೊಂಡಿದ್ದಾನಂತೆ, ತಾನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯನಾಗಿರದಿದ್ದರೂ ತನ್ನ ನೇತೃತ್ವದ ತಂಡ ಪತ್ರಿಕಾ ಭವನದಲ್ಲಿ ಆಡಳಿತ ನಡೆಸುತ್ತಿದೆ ಎಂದು ತನ್ನದೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದಾನಂತೆ. ಅದು ಹೌದಾಗಿದ್ದರೆ ಬೆಂಗಳೂರಿನಲ್ಲಿ ಸ್ಯಾಂಟ್ರೋ ರವಿಗೆ ರಕ್ಷಣೆ ದೊರಕಿದಂತೆ ಇಲ್ಲಿ ಅನೀಶ್‌ಗೆ ಸಾಥ್ ನೀಡುತ್ತಿರುವುದು ಯಾರು, ಹೊಸ ಸಂಘದ ಅಧ್ಯಕ್ಷ,ಕಾರ್ಯದರ್ಶಿ, ಸದಸ್ಯರೋ ಅಥವಾ ಹಳೆಯ ಸಂಘದವರ ಕೃಪಾ ಕಟಾಕ್ಷವೋ, ಅಥವಾ ಅನೀಶನಿಂದ ಬೀಡ ತರಿಸುವ, ನ್ಯೂಸ್ ಮಾಡಿಸುವ, ಎಲ್ಲಾ ಚಾಕರಿ ಮಾಡಿಸುವವರೋ, ಪತ್ರಿಕಾಭವನದ ಜವಾಬ್ದಾರಿ ಯಾರು ಎಂಬ ಪ್ರಶ್ನೆಗೆ ಈಗಿನ ಸಂಘದ ಪದಾಧಿಕಾರಿಗಳು, ಹಳೇ ಸಂಘದವರು ಉತ್ತರ ನೀಡಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟವರು ಉತ್ತರ ನೀಡಬೇಕಾಗಿದೆ.
ನಗರದ ಪ್ರಾಮುಖ್ಯ ಸ್ಥಳದಲ್ಲಿರುವ, ಪತ್ರಕರ್ತರ ಸೇವೆಗೆಂದೇ ಸರಕಾರ ಗೌರವಪೂರ್ಣವಾಗಿ ಉಚಿತವಾಗಿ ನೀಡಿರುವ ಸುಸಜ್ಜಿತ ಪತ್ರಿಕಾ ಭವನ ಅವ್ಯವಹಾರ ನಡೆಸುವವರ, ಕುಡುಕರ, ಬ್ಲ್ಯಾಕ್‌ಮೇಲ್ ಮಾಡುವ ಪತ್ರಕರ್ತರ ಪಾಲಾಗದಿರಲಿ ಜನರಿಗೆ ಕಂಟಕಪ್ರಾಯವಾಗದಿರಲಿ. ಸಮಾಜಕ್ಕೆ ಕೊಡುಗೆ ಕೊಡುವ ಉತ್ತಮ ಪತ್ರಕರ್ತರ ಪಾಲಾಗಲಿ. ಊರಿಗೆ ಅದರಿಂದ ಪ್ರಯೋಜನವಾಗಲಿ. ಆ ದಿಕ್ಕಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು, ಅಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಇತರ ಪತ್ರಕರ್ತರ ಸಂಘದವರು, ಸಾರ್ವಜನಿಕರು ಜವಾಬ್ದಾರಿ ವಹಿಸಿಕೊಳ್ಳಲಿ ಎಂಬ ಆಶಯ ನಮ್ಮೆಲ್ಲರದ್ದು.

LEAVE A REPLY

Please enter your comment!
Please enter your name here