ಮಂಗಳೂರು:ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು, ಹಿಂದೂ ಸಮುದಾಯದವರಲ್ಲಿ ಆತಂಕ ಹುಟ್ಟಿಸಲೆಂದೇ ಹತ್ಯೆ ಮಾಡಲಾಗಿತ್ತು ಎಂದು ನ್ಯಾಯಾಲಯಕ್ಕೆ ಎನ್ಐಎ ತಿಳಿಸಿದೆ.ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 20 ಮಂದಿ ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಎನ್ಐಎ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ಎಂದು ದೋಷಾರೋಪಣಾ ಪಟ್ಟಿಯಲ್ಲಿ ತಿಳಿಸಿದೆ.
ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ಹೊಂದಿದ್ದ ಪ್ರವೀಣ್ ನೆಟ್ಟಾರು ಅವರನ್ನು ಕಳೆದ ಜುಲೈ ೨೬ರಂದು ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.ಬೈಕೊಂದರಲ್ಲಿ ಬಂದಿದ್ದ ಆರೋಪಿಗಳು ಪ್ರವೀಣ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.ತೀವ್ರ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದರು.ಬೆಳ್ಳಾರೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.ಬಳಿಕ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು.ತನಿಖೆ ಪೂರ್ಣಗೊಳಿಸಿರುವ ಎನ್ಐಎ ೨೪೦ ಸಾಕ್ಷಿಗಳ ಹೇಳಿಕೆ ಇರುವ, ಒಟ್ಟು ೧೫೦೦ ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ೧೪ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೦ ಬಿ, ೧೫೩ ಎ, ೩೦೨, ಮತ್ತು ೩೪, ೧೯೬೭ರ ಕಾನೂನುಬಾಹಿರ ಚಟುವಟಿಕೆ ತಡೆ(ಯುಎಪಿ) ಕಾಯ್ದೆಯ ಸೆಕ್ಷನ್ ೧೬, ೧೮ ಮತ್ತು ೨೦ ಮತ್ತು ಸಶಸ್ತ್ರ ಕಾಯ್ದೆಯ ಸೆಕ್ಷನ್ ೨೫ (೧) (ಎ) ಅಡಿ ಮೊಕದ್ದಮೆಗಳನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಇದೀಗ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.
ಆರೋಪಿಗಳು: ೧.ಮಹಮ್ಮದ್ ಸಯ್ಯದ್ ಬಿನ್ ಮಹಮ್ಮದ್ ಸಾಜಿದ್,ಸುಳ್ಯ, ದಕ್ಷಿಣ ಕನ್ನಡ.೨.ಅಬ್ದುಲ್ ಬಷೀರ್(೨೯ ವ.)ಬಿನ್ ಮಹಮ್ಮದ್ ಕುಂಞಿ ಯೆತ್ತಿನಹೊಳೆ, ಎಲಿಮಲೆ ಸುಳ್ಯ.೩.ರಿಯಾಜ್(೨೮ ವ.)ಬಿನ್ ಅಬ್ದುಲ್ ಲತೀಫ್, ಅಂಕತಡ್ಕ, ಪಾಲ್ತಾಡಿ ಗ್ರಾಮ.೪.ಮುಸ್ತಾಫ ಪೈಚಾರ್ ಅಲಿಯಾಸ್ ಮಹಮ್ಮದ್ ಮುಸ್ತಾಫ ಎಸ್.(೪೮ ವ.)ಬಿನ್ ಉಮರ್, ಶಾಂತಿನಗರ ಸುಳ್ಯ.೫.ಮಸೂದ್ ಕೆ.ಎ. (೪೦ ವ.)ಬಿನ್ ಅಬೂಬಕ್ಕರ್ ಕೆ.ಎ.ಅಂಗಡಿ ಹೌಸ್, ೩೪ ನೆಕ್ಕಿಲಾಡಿ.೬.ಕೊಡಾಜೆ ಮಹಮ್ಮದ್ ಶರೀಫ್(೫೩ ವ.)ಬಿನ್ ಅದ್ದ ಕೊಡಾಜೆ, ಬಂಟ್ವಾಳ.೭.ಅಬೂಬಕ್ಕರ್ ಸಿದ್ದಿಕ್(೩೮ ವ.)ಬಿನ್ ಅಲಿ ಕುಂಞಿ, ಬೆಳ್ಳಾರೆ.೮.ನೌಫಾಲ್ ಎಂ(೩೮ ವ.)ಬಿನ್ ಮೊಹಮ್ಮದ್ ಟಿ.ಎ.ತಂಬಿನಮಕ್ಕಿ ಹೌಸ್, ಬೆಳ್ಳಾರೆ.೯.ಇಸ್ಮಾಯಿಲ್ ಶಾಫಿ ಕೆ. ಬಿನ್ ಆದಂ ಕುಂಞಿ ಕೆ. ಕುಂಞಿಗುಡ್ಡೆ, ಬೆಳ್ಳಾರೆ.೧೦.ಕೆ.ಮಹಮ್ಮದ್ ಇಕ್ಬಾಲ್ ಬಿನ್ ಆದಂ ಕುಞಿ ಕೆ.ಕುಂಞಿಗುಡ್ಡೆ, ಬೆಳ್ಳಾರೆ.೧೧.ಶಹೀದ್ ಎಂ(೩೮ ವ.)ಬಿನ್ ಅಬ್ದುಲ್ ಕರಿಂಗಾಡ್ ಕಲ್ಕಟ್ಟ ಮಂಗಳಂತಿ, ಮಂಜನಾಡಿ.೧೨.ಮಹಮ್ಮದ್ ಶಫೀಕ್ (೨೮ ವ.)ದರ್ಖಾಸ್ ಹೌಸ್, ಸುಳ್ಯ.೧೩.ಉಮರ್ ಫಾರೂಕ್ ಎಂ.ಆರ್.(೨೨ವ.)ಬಿನ್ ರಫೀಕ್ ಎಂ.ಆರ್.ಕಲ್ಲುಮುಟ್ಲು ಹೌಸ್, ಸುಳ್ಯ.೧೪.ಅಬ್ದುಲ್ ಕಬೀರ್ ಸಿ.ಎ.(೩೩ವ.)ಬಿನ್ ಅಬ್ಬಾಸ್ ಜಟ್ಟಿಪಳ್ಳ ಹೌಸ್, ಮಸೀದಿ ಬಳಿ, ಸುಳ್ಯ.೧೫.ಮುಹಮ್ಮದ್ ಇಬ್ರಾಹಿಂ ಷಾ(೨೩ವ.)ಬಿನ್ ಮುಹಮ್ಮದ್ ಎಂ.ಎ. ಜೀರ್ಮುಖಿ ಹೌಸ್, ನೆಲ್ಲೂರು ಕೆಮ್ರಾಜೆ, ಸುಳ್ಯ.೧೬.ಸೈನುಲ್ ಆಬೀದ್(೨೩ವ.) ಬಿನ್ ಯಾಕೂಬ್ ಗಾಂಧಿನಗರ ಹೌಸ್, ನಾವೂರು, ಸುಳ್ಯ.೧೭.ಶೇಖ್ ಸದ್ದಾಂ ಹುಸ್ಸೇನ್ (೨೮ ವ.)ಬಿನ್ ಶೇಖ್ ಅಬ್ದುಲ್ ರಷೀದ್, ಬೀಡು ಹೌಸ್, ಬೆಳ್ಳಾರೆ.೧೮.ಝಾಕೀರ್ ಎ (೩೦ ವ.)ಬಿನ್ ಹನೀಫ್, ಅತ್ತಿಕೆರೆ ಸವಣೂರು, ಪುತ್ತೂರು.೧೯.ಎನ್.ಅಬ್ದುಲ್ ಹ್ಯಾರಿಸ್ (೪೦ ವ.)ಬಿನ್ ಎನ್.ಇಸ್ಮಾಯಿಲ್ ಬೂಡು ಹೌಸ್, ಬೆಳ್ಳಾರೆ, ಸುಳ್ಯ.೨೦.ತುಫಾಯಿಲ್ ಎಂ.ಎಚ್.(೩೬ ವ.)ಬಿನ್ ಬೆಹಂದ್,ಗದ್ದಿಗೆ, ಮಡಿಕೇರಿ.
ತಲೆ ಮರೆಸಿಕೊಂಡಿರುವ ಆರು ಮಂದಿ ಆರೋಪಿಗಳು
ದೋಷಾರೋಪಣಾ ಪಟ್ಟಿಯಲ್ಲಿ ಹೆಸರಿಸಲಾಗಿರುವ ೨೦ ಆರೋಪಿಗಳ ಪೈಕಿ ೧೪ ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.ಉಳಿದಂತೆ, ನಾಲ್ಕನೇ ಆರೋಪಿ ಮುಸ್ತಾಫಾ ಪೈಚಾರು, ಆರನೇ ಆರೋಪಿ ಕೊಡಾಜೆ ಮೊಹಮ್ಮದ್ ಷರೀಫ್, ಐದನೇ ಆರೋಪಿ ನೆಕ್ಕಿಲಾಡಿಯ ಮಸೂದ್ ಕೆ.ಎ, ಏಳನೇ ಆರೋಪಿ ಬೆಳ್ಳಾರೆ ಅಬೂಬಕ್ಕರ್ ಸಿದ್ದಿಕ್,೧೩ನೇ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ಕಲ್ಲುಮುಟ್ಟು ಹಾಗೂ ೨೦ನೇ ಆರೋಪಿ ತುಫಾಯಿಲ್ ಎಂ.ಎಚ್.ಮಡಿಕೇರಿ ತಲೆಮರೆಸಿಕೊಂಡಿದ್ದಾರೆ.ಇವರ ಕುರಿತು ಸುಳಿವು ನೀಡಿದವರಿಗೆ ಎನ್ಐಎ ಈಗಾಗಲೇ ಬಹುಮಾನ ಘೋಷಣೆ ಮಾಡಿದೆ.