ಏಣಿತ್ತಡ್ಕ : ತೆಪ್ಪ ಮಗುಚಿ ಮಹಿಳೆ ಸಾವು

0

ಕಡಬ: ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಏಣಿತ್ತಡ್ಕ ಎಂಬಲ್ಲಿ ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ . ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಮೃತಪಟ್ಟ ಮಹಿಳೆ. ಕುಮಾರಧಾರ ನದಿಯ ಇನ್ನೊಂದು ಮಗ್ಗುಲಲ್ಲಿರುವ ಅರೆಲ್ತಡ್ಕ ಎಂಬಲ್ಲಿಂದ ಹುಲ್ಲು ಸಂಗ್ರಹಿಸಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿಕೊಂಡು ತೆಪ್ಪದ ಮೂಲಕ  ನದಿಯ ಮದ್ಯ ಭಾಗಕ್ಕೆ ಬಂದಾಗ ಜೋರಾಗಿ ಬೀಸಿದ ಗಾಳಿಗೆ  ತೆಪ್ಪ ಮಗುಚಿ ಬಿದ್ದಿದೆ. ತೆಪ್ಪದಲ್ಲಿದ್ದ ಇನ್ನಿಬ್ಬರು ಮಹಿಳೆಯರು ಹುಲ್ಲು ತುಂಬಿದ್ದ ಗೋಣಿ ಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ. ಆದರೆ ಗೀತಾ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದು ನೀರಿಗಿಳಿದ ಸ್ಥಳೀಯರಾದ ರಾಮಕೃಷ್ಣ, ನೇತ್ರಾಕ್ಷ ಮತ್ತಿತರರು ಹುಡುಕಾಡಿ ಗೀತಾ ಅವರನ್ನು ರಕ್ಷಿಸುವ ಪ್ರಯತ್ನ ಪಟ್ಟರಾದರೂ ಅದಾಗಲೇ ಗೀತಾ ಉಸಿರು ಚೆಲ್ಲಿದ್ದರು.

  ಕಡಬ. ಠಾಣಾ ಎ.ಎಸ್ ಐ ಶಿವರಾಮ, ಕಾನ್ಸ್ ಟೇಬಲ್ ಚಂದನ್ ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.ಮೃತರು ಇಬ್ಬರು ಪುತ್ರರು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here