ಜ.26 ಪ್ರಜಾಪ್ರಭುತ್ವ ದಿನ ನಮ್ಮೆಲ್ಲರ, ಕೃಷಿಕರ ಸ್ವಾತಂತ್ರ್ಯಕ್ಕಾಗಿ; ಪ್ರತಿ ಊರಲ್ಲೂ ಪ್ರಜಾಪ್ರಭುತ್ವದ ನಡಿಗೆ, ಸ್ವಾತಂತ್ರ್ಯದ ಘೋಷಣೆಯಾಗಲಿ; ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ಸ್ವೀಕಾರ ನಡೆಯಲಿ

0

ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಕಳೆದ ವರ್ಷ ಜನವರಿ 26 – ಪ್ರಜಾಪ್ರಭುತ್ವ ದಿನದಂದು ತಾಲೂಕಿನಾದ್ಯಂತ ಪ್ರತೀ ಗ್ರಾಮಗಳಲ್ಲಿ ಪಂಚಾಯತ್, ಸೊಸೈಟಿ, ಕಚೇರಿಗಳಲ್ಲಿ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ ಎಂಬ ನೆಲೆಯಲ್ಲಿ ಪ್ರಜಾಪ್ರಭುತ್ವದ ನಡಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಲಾಗಿತ್ತು. ಈ ಜನಾಂದೋಲನ ನಿತ್ಯ ನಿರಂತರವಾಗಿರಬೇಕು ಅದಕ್ಕಾಗಿ ಇದೇ 26.1.2023 ರಂದು ‘ಈ ಊರು ನಮ್ಮದು ಇಲ್ಲಿಯ ನೆಲ, ಜಲ, ವಾಯು, ಸಂಪತ್ತು (ಕಟ್ಟಡ, ಶಾಲೆ, ಸೊಸೈಟಿ, ರಸ್ತೆ, ಸಂಕ), ಆಡಳಿತ ಎಲ್ಲವೂ ನಮ್ಮದೇ, ನಮಗಾಗಿ ಇರುವಂತದ್ದು. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮವರು, ನಮ್ಮ ಸೇವೆಗಾಗಿ ಇರುವವರು. ಇದು ಯಾವುದೇ ಪಕ್ಷದ ಸ್ವಾತಂತ್ರ್ಯವಲ್ಲ. ನಮ್ಮ ಜನರ ಸ್ವಾತಂತ್ರ್ಯ, ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲಿ’ ಎಂಬ ಸ್ವಾತಂತ್ರ್ಯದ ಘೋಷಣೆಯಾಗಲಿ.

ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ಜಿಲ್ಲೆ (ದ.ಕ.), ರಾಜ್ಯ, ದೇಶ ನಮ್ಮದಾಗಲಿ ಎಂಬ ಘೋಷಣೆಯೊಂದಿಗೆ ಪುತ್ತೂರು ತಾಲೂಕಿನ ಪ್ರತೀ ಗ್ರಾಮ, ಊರು ಮನೆಗಳಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕಾರ ನಡೆಯಲಿ.

ಪ್ರತೀ ಗ್ರಾಮದಲ್ಲಿ ಗ್ರಾಮ ಪಂಚಾಯತು ಸಹಕಾರಿ ಸಂಘಗಳು ಮತ್ತು ಗ್ರಾಮದ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೇರಿಕೊಂಡು ನಮ್ಮೆಲ್ಲರ ಮತ್ತು ಕೃಷಿಕರ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಈ ಮೇಲಿನ ಕಾರ್ಯಕ್ರಮಗಳನ್ನು ತಮಗೆ ಅನಿಸಿದ ರೀತಿಯಲ್ಲಿ ಏರ್ಪಡಿಸ ಬೇಕಾಗಿ ವಿನಂತಿ.

-ಡಾ|ಯು.ಪಿ.ಶಿವಾನಂದ, ಸಂಚಾಲಕರು, ಸುದ್ದಿ ಜನಾಂದೋಲನ ವೇದಿಕೆ ಪುತ್ತೂರು

LEAVE A REPLY

Please enter your comment!
Please enter your name here