ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಜ. 28, 29ರಂದು ನಡೆಯಲಿರುವ ಜೋಡುಕರೆ ಕಂಬಳದ ಪೂರ್ವಭಾವಿ ಸಭೆಯು ದೇವಳದ ಗದ್ದೆಯಲ್ಲಿ ನಡೆಯಿತು. ಸಭೆಯ ಮೊದಲು ಪ್ರಾಯೋಗಿಕವಾಗಿ ಕುದಿಕಂಬಳ ನಡೆಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡು ವಿವಿಧ ಸಮಿತಿಗಳಿಗೆ ಸದಸ್ಯರನ್ನು ನೇಮಿಸಿ ಜವಾಬ್ದಾರಿ ನೀಡಿ ಕಂಬಳ ಯಶಸ್ಸುಗೊಳಿಸುವಂತೆ ವಿನಂತಿಸಿದರು. ಕಂಬಳದ ಅಂಗವಾಗಿ ಹೊರತರಲಿರುವ ವಿಶೇಷ ಸಂಚಿಕೆಗೆ ಜಾಹೀರಾತು ನೀಡಲು ಯಾರಾದರೂ ಇದ್ದಲ್ಲಿ ತಕ್ಷಣ ನೀಡುವಂತೆ ಕೋರಲಾಯಿತು.
ಸಮಿತಿ ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಕಂಬಳದ ರೂಪುರೇಷೆ ತಿಳಿಸಿದರು. ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ. ಸ್ವಾಗತಿಸಿ ಖಜಾಂಜಿ ಈಶ್ವರ ಭಟ್ ಪಂಜಿಗುಡ್ಡೆ ವಂದಿಸಿದರು. ಕಂಬಳ ಸಮಿತಿ ಪದಾಧಿಕಾರಿಗಳಾದ ಭಾಸ್ಕರ ಗೌಡ ಕೋಡಿಂಬಾಳ, ಸುದರ್ಶನ್ ನಾಯ್ಕ್, ಜಿನ್ನಪ್ಪ ಪೂಜಾರಿ, ಶಿವರಾಮ ಆಳ್ವ, ರೋಷನ್ ರೈ ಬನ್ನೂರು, ಪ್ರೇಮಾನಂದ ನಾಯ್ಕ್, ಮುರಳೀಧರ ರೈ ಮಠಂತಬೆಟ್ಟು, ಪ್ರವೀಣ್‌ಚಂದ್ರ ಆಳ್ವ, ಮಾತನಾಡಿ ಸಲಹೆ ಸೂಚನೆ ನೀಡಿದರು. ಸುಧಾಕರ ಶೆಟ್ಟಿ ಮಿತ್ತೂರು, ಶಶಿಕಿರಣ್ ರೈ ನೂಜಿಬೈಲು, ಖಾದರ್ ಪೋಳ್ಯ, ಕೃಷ್ಣಪ್ರಸಾದ್ ಆಳ್ವ, ಲೋಕೇಶ್ ಪಡ್ಡಾಯೂರು, ರಾಜೇಶ್ ಪುತ್ತೂರು, ಸತೀಶ್ ನಾಯ್ಕ್ ಸುಳ್ಯ, ಉಮೇಶ್ ಕೆಮ್ಮಾಯಿ, ಸನ್ಮಿತ್ ರೈ, ಹರ್ಷ ಶೆಟ್ಟಿ, ವಿಕ್ರಂ ಶೆಟ್ಟಿ ಅಂತರ, ಹಸೈನಾರ್ ಬನಾರಿ, ಚಂದ್ರಶೇಖರ್ ರೈ ನೇಲ್ಯಾಜೆ, ಅಶ್ವತ್ಥ್ ಕೆ.ಎಸ್., ಶಶಿಕುಮಾರ್ ನೆಲ್ಲಿಕಟ್ಟೆ, ಪ್ರವೀಣ್ ಶೆಟ್ಟಿ ಅಳಕೆಮಜಲು, ಯೋಗೀಶ್ ಸಾಮಾನಿ, ವಿಜಯ್ ಕುಮಾರ್ ಚೀಮುಳ್ಳು, ಗಣೇಶ್ ಶೆಟ್ಟಿ ಬಿಳಿಯೂರು, ರಾಜೇಶ್ ನಾಯ್ಕ್, ಪ್ರಶಾಂತ್ ಮುರ, ವಿಲ್ರೆಡ್ ಫೆರ್ನಾಂಡೀಸ್ ಉರ್ಲಾಂಡಿ, ವಿನಯ ಸವಣೂರು, ಸಂತೋಷ್ ಯುನಿಮನಿ ಪುತ್ತೂರು, ಪದ್ಮನಾಭ ಪಕ್ಕಳ, ರಮೇಶ್ ಪೂಜಾರಿ ಬನ್ನೂರು, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಉಮೇಶ್ ಕರ್ಕೇರ, ರಂಜಿತ್ ಬಂಗೇರ, ರಕ್ಷಿತ್ ರೈ, ಅಶ್ರಫ್ ಉಜಿರೋಡಿ, ಜೋಕಿಂ ಡಿಸೋಜ, ಕಿರಣ್ ಡಿಸೋಜ, ಕೃಷ್ಣ ನಾಯ್ಕ್, ಸಂತೋಷ್ ಪರ್ಲಡ್ಕ, ಶರತ್ ಕೇಪುಳು, ಜಯಪ್ರಕಾಶ್ ಬದಿನಾರು, ಯಕ್ಷಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.