ಇತಿಹಾಸ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜಾತ್ರೋತ್ಸವ ಹಿನ್ನಲೆ: ದೈವಸ್ಥಾನದಲ್ಲಿ ಆಗಿನದ ಕುದಿ ಸಂದರ್ಭ ನಡೆ ಮುಂದೆ ತೆಂಗಿನ ಗಡಿ ಉರುಳಿ ಶುಭ ಸೂಚನೆ !

0

ಪುತ್ತೂರು: ಪುತ್ತೂರಿನ 2 ನೇ ಅತಿ ದೊಡ್ಡ ಇತಿಹಾಸ ಪ್ರಸಿದ್ದ ಜಾತ್ರೋತ್ಸವ ಎಂದೇ ಕರೆಯಲ್ಪಡುವ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.4 ರಂದು ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಜ.26ರಂದು ದೈವಸ್ಥಾನದಲ್ಲಿ ಆಗಿನದ ಕುದಿ ಇಡುವ ಮೂಲಕ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ತೆಂಗಿನ ಕಾಯಿ ಒಡೆಯುವಾಗ ಒಂದು ತೆಂಗಿನ ಗಡಿ ಉರುಳಿ ಶ್ರೀ ಕಲ್ಕುಡ ದೈವಸ್ಥಾನದ ನಡೆ ಮುಂದೆ ನಿಂತು ಜಾತ್ರೋತ್ಸಕ್ಕೆ ದೈವ ಸೂಚನೆ ನೀಡಿದೆ.

 
ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜೀತ್ ಕುಮಾರ್ ಜೈನ್ ಪ್ರಾರ್ಥನೆ ಮಾಡಿ ತೆಂಗಿನ ಕಾಯಿ ಒಡೆಯುವ ಮೂಲಕ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಿದರು. ಅವರು ಒಡೆದ ತೆಂಗಿನ ಕಾಯಿಯ ಗಡಿಯೊಂದು ನೇರ ಉರುಳಿ ಕೊಂಡು ಹೋಗಿ ಶ್ರೀ ಕಲ್ಕುಡ ದೈವಸ್ಥಾನದ ನಡೆ ಮುಂದೆ ನಿಂತಿರುವುದನ್ನು ಕಂಡ ನೆರೆದ ಭಕ್ತರು ಇದೊಂದು ದೈವದಿಂದ ಸಿಕ್ಕಿದ ಶುಭ ಸೂಚನೆ ಎಂದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ ಕಲ್ಲೇಗ, ಮೀನಾಕ್ಷಿ ಗೌಡ, ಸುನಿತ, ಪ್ರಶಾಂತ್ ಎಸ್, ರಾಘವೇಂದ್ರ ಪ್ರಭು, ಮಾಧವ ಪೂಜಾರಿ ಪಟ್ಲ, ಪ್ರಸಾದ್ ಬೀಡಿಗೆ, ಬಿ.ರವಿಕಿರಣ ಮತ್ತು ಕಲ್ಕುಡ ದೈವದ ನರ್ತಕ ವಸಂತ, ಕಲ್ಲುರ್ಟಿ ದೈವದ ನರ್ತಕ ಚೋಮ ಸೇರಿದಂತೆ ಊರಿನ ಹಿರಿಯರಾದ ಚಂದ್ರಶೇಖರ್ ಗೌಡ ಕಲ್ಲೇಗ, ನಾರಾಯಣ ಗೌಡ ಕಲ್ಲೇಗ, ಗಿರೀಯಪ್ಪ ಗೌಡ ಪೋಳ್ಯ, ಮುರಳಿ ಕಲ್ಲೇಗ, ಮನೋಹರ್ ಕಲ್ಲೇಗ, ಸತೀಶ್ ಶೆಟ್ಟಿ, ಲೋಕೇಶ್ ಅಜೇಯನಗರ, ನಾರಾಯಣ ಮೊಗೇರ, ಗಿರಿಯಪ್ಪ ಗೌಡ, ಕೃಷ್ಣಪ್ಪ ಗೌಡ, ದಿವಾಕರ, ಶಶಿಧರ್ ಪೋಳ್ಯ ಸಹಿತ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here