ಹೋಂಡಾ ಆಕ್ಟಿವಾ ಸ್ಮಾರ್ಟ್ ಆಗುತ್ತಿದೆ ಈಗ ಸ್ಮಾರ್ಟ್ ಕೀ ಸಿಸ್ಟಮ್‌ನೊಂದಿಗೆ

0

ಪುತ್ತೂರು ತಿರುಮಲ ಹೋಂಡಾದಲ್ಲಿ ಬುಕ್ಕಿಂಗ್ ಆರಂಭಗೊಂಡಿದೆ

ಹೋಂಡಾ…ದ್ವಿಚಕ್ರ ವಾಹನದ ಇತಿಹಾಸದಲ್ಲೇ ಹೊಸ ಭಾಷ್ಯ ಬರೆದ ಕಂಪೆನಿಯಾಗಿದೆ. ಹೊಸ ವರ್ಷದಲ್ಲಿ ಹೊಸತೇನಾದರೂ ಸ್ಕೂಟರ್ ಖರೀದಿಸಬೇಕು ಎಂಬ ಯೋಚನೆಯಲ್ಲಿದ್ದರೆ ಹೋಂಡಾ ಕಂಪೆನಿ ತನ್ನೆಲ್ಲಾ ಗ್ರಾಹಕರಿಗೆ ಹೊಸ ಸ್ಕೂಟರ್ ಪರಿಚಯಿಸಿದೆ. ಅದುವೇ ಸ್ಮಾರ್ಟ್ ಕೀ ಹೊಂದಿರುವ ಹೋಂಡಾ ಆಕ್ಟೀವಾ ಎಚ್.ಸ್ಮಾರ್ಟ್ ಸ್ಕೂಟರ್. ಈಗಾಗಲೇ ಹೋಂಡಾ ಆಕ್ಟೀವಾ ಹೆಚ್ ಸ್ಮಾರ್ಟ್ 6ಜಿ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು ದೈನಂದಿನ ಬಳಕೆಗೆ ಎಲ್ಲಾ ವಿಧದಲ್ಲೂ ಒಂದು ಉತ್ತಮ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದ್ವಿಚಕ್ರ ವಾಹನ ಮಾರಾಟ ಮತ್ತು ಸರ್ವೀಸ್‌ನಲ್ಲಿ ಗ್ರಾಹಕರಿಂದ ನಂಬರ್ 1 ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಪುತ್ತೂರಿನ ತಿರುಮಲ ಹೋಂಡಾದಲ್ಲಿ ಆಕ್ಟಿವಾ ಸ್ಮಾರ್ಟ್ ಸ್ಕೂಟರ್‌ನ ಬುಕ್ಕಿಂಗ್ ಆರಂಭಗೊಂಡಿದ್ದು ಗ್ರಾಹಕರು ಈ ಕೂಡಲೇ ಬುಕ್ಕಿಂಗ್ ಮಾಡಬಹುದಾಗಿದೆ.

ಹೋಂಡಾ ಆಕ್ಟಿವಾದ ಈ ಪುನರಾವರ್ತನೆಯು ಮೂರು ರೂಪಾಂತರಗಳಲ್ಲಿ (ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್) ಮತ್ತು 6 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ (ಪರ್ಲ್ ಸೈರನ್ ಬ್ಲೂ ನ್ಯೂ, ಡಿಸೆಂಟ್ ಬ್ಲೂ ಮೆಟಾಲಿಕ್, ರೆಬೆಲ್ ರೆಡ್ ಮೆಟಾಲಿಕ್, ಬ್ಲಾಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್). ಈ ಸ್ಕೂಟರ್‌ಗೆ ಹಲವು ಹೊಸ ತಾಂತ್ರಿಕ ಅಪ್ಲಿಕೇಶನ್‌ಗಳನ್ನು ಸೇರಿಸಲಾಗಿದ್ದು ಇದರೊಂದಿಗೆ ಹೋಂಡಾ ಸ್ಮಾರ್ಟ್ ಕೀ ತಂತ್ರಜ್ಞಾನವನ್ನು ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್‌ನಲ್ಲಿ ನೀಡಲಾದ ಅತಿದೊಡ್ಡ ನವೀಕರಣವೆಂದರೆ ರಿಮೋಟ್ ಆಗಿರುವ ಅದರ ಸ್ಮಾರ್ಟ್ ಕೀ. ಈ ಸ್ಮಾರ್ಟ್ ರಿಮೋಟ್ ಕೀ ಮೂಲಕ ಕೀ ಬಳಸದೆಯೇ ಸ್ಕೂಟರ್ ಲಾಕ್ ಮಾಡಬಹುದು, ಅನ್ಲಾಕ್ ಮಾಡಬಹುದು, ಸ್ಟಾರ್ಟ್ ಮಾಡಬಹುದು ಮತ್ತು ಆಫ್ ಮಾಡಬಹುದಾಗಿದೆ. ಇದರೊಂದಿಗೆ ಈ ಸ್ಮಾರ್ಟ್ ಕೀ ಮೂಲಕ ಪೆಟ್ರೋಲ್ ತುಂಬಿಸಲು ಇಂಧನ ಟ್ಯಾಂಕ್ ಕ್ಯಾಪ್ ಅನ್ನು ಸಹ ಅನ್ಲಾಕ್ ಮಾಡಬಹುದು. ಈ ಸ್ಮಾರ್ಟ್ ರಿಮೋಟ್ ಎರಡು ಮೀಟರ್ ತ್ರಿಜ್ಯದಲ್ಲಿ ಕೆಲಸ ಮಾಡುತ್ತದೆ.‌

ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ ನಲ್ಲಿ ಕಂಪೆನಿಯು ಆಕ್ಟಿವಾ 6ಜಿಯಂತೆಯೇ ಅದೇ ಎಂಜಿನ್ ನೀಡಿದೆ. ಇದು 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು ಅದು ಏರ್-ಕೂಲ್ಡ್ ತಂತ್ರಜ್ಞಾನವನ್ನು ಆಧರಿಸಿದೆ. ಈ ಎಂಜಿನ್ 7.73 ಪಿಎಸ್ ಪವರ್ ಮತ್ತು 7.68 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ 60 ಕಿ.ಮೀ/ಲೀ ಇಂಧನ ದಕ್ಷತೆಯನ್ನು ಹೊಂದಿದೆ. ಇದು ದೈನಂದಿನ ಪ್ರಯಾಣಿಕರಿಗೆ ಆರ್ಥಿಕವಾಗಿದೆ ಎಂದಿದೆ ಕಂಪೆನಿ.

ಈ ಸ್ಕೂಟರ್‌ನ ವಿಶೇಷತೆಗಳೆಂದರೆ ಸ್ಮಾರ್ಟ್ ಬಟನ್ ಸಹಾಯದಿಂದ ಬಳಕೆದಾರರು ಸ್ಥಳ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುತ್ತಾರೆ. ದೊಡ್ಡ ಗಾತ್ರದ ವೀಲ್ ಬೇಸ್ ನೀಡಲಾಗಿದೆ. ಸ್ವಲ್ಪ ದೊಡ್ಡ ಫುಟ್‌ಬೋರ್ಡ್ ಪ್ರದೇಶ, ಹೊಸ ಪಾಸಿಂಗ್ ಸ್ವಿಚ್ ಮತ್ತು ದಿಸಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಸ್ಕೂಟರ್‌ನಲ್ಲಿ ಅಲಾಯ್ ವೀಲ್‌ಗೆ ಹೊಸ ವಿನ್ಯಾಸವನ್ನು ನೀಡಲಾಗಿದೆ. 12 ಇಂಚಿನ ಮುಂಭಾಗದ ಅಲಾಯ್ ವೀಲ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಸನ್ ಮತ್ತು ಅಡ್ಜೆಸ್ಟಬಲ್ ರಿಯರ್ ಸಸ್ಪೆನ್ಸನ್ ನೀಡಲಾಗಿದೆ. ಸ್ಕೂಟರ್ ಸವಾರರಿಗೆ ಹೊಸ ಚಾಲನ ಅನುಭವನ್ನು ನೀಡಲಿದೆ. ನವೀಕರಿಸಿದ ಇಂಧನ ಇಂಜೆಕ್ಷನ್ ಫ್ರೋಗ್ರಾಂ, ವರ್ಧಿತ ಸ್ಮಾರ್ಟ್ ಟಂಬಲ್ ತಂತ್ರಜ್ಞಾನ ಎಸಿಜಿ ಸ್ಟಾರ್ಟರ್ ಮತ್ತು ಹೊಸ ತಂತ್ರಜ್ಞಾನದೊಂದಿಗೆ ಘರ್ಷಣೆ ಕಡಿತವನ್ನು ಹೊಂದಿದೆ. ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ ಸ್ಕೂಟರ್‌ನ ಬುಕ್ಕಿಂಗ್‌ಗಾಗಿ ಹತ್ತಿರದ ತಿರುಮಲ ಹೋಂಡಾ ಸಂಸ್ಥೆಯನ್ನು ಭೇಟಿಯಾಗಬಹುದಾಗಿದೆ. ತಿರುಮಲ ಹೋಂಡಾ ಸಂಸ್ಥೆಯು ಪುತ್ತೂರಿನ ಬೊಳುವಾರು, ಉಪ್ಪಿನಂಗಡಿ, ಕಡಬ, ನೆಲ್ಯಾಡಿ, ಸುಳ್ಯ ಹಾಗೂ ಬೆಳ್ಳಾರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಭೇಟಿ ಕೊಡಿ, ಬುಕ್ಕಿಂಗ್ ಮಾಡಿ ಹೊಸ ವರ್ಷದಲ್ಲಿ ಸ್ಮಾರ್ಟ್ ಸ್ಕೂಟರ್‌ನ ಸವಾರಿಯೊಂದಿಗೆ ನೀವೂ ಸ್ಮಾರ್ಟ್ ಆಗಿರಿ.

LEAVE A REPLY

Please enter your comment!
Please enter your name here