ಇನ್ನರ್ ವ್ಹೀಲ್ ಕ್ಲಬ್‌ಗೆ ಜಿಲ್ಲಾಧ್ಯಕ್ಷೆ ಕವಿತಾ ನಿಯತ್ ಅಧಿಕೃತ ಭೇಟಿ – ವಿವಿಧ ಸಮಾಜಮುಖಿ ಕೊಡುಗೆಗಳ ಹಸ್ತಾಂತರ

0

ಪುತ್ತೂರು: ಇನ್ನರ್ ವ್ಹೀಲ್ ಕ್ಲಬ್ ಪುತ್ತೂರಿಗೆ ಕ್ಲಬ್‌ನ 53ನೇ ಜಿಲ್ಲಾಧ್ಯಕ್ಷೆ ಕವಿತಾ ನಿಯತ್ ಅಧಿಕೃತ ಭೇಟಿ ಕಾರ್ಯಕ್ರಮವು ಫೆ.2 ರಂದು ತೆಂಕಿಲ ಒಕ್ಕಲಿಗ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು.

ಕ್ಲಬ್‌ಗೆ ಭೇಟಿ ನೀಡಿ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಿದ ಜಿಲ್ಲಾಧ್ಯಕ್ಷೆ ಕವಿತಾ ನಿಯತ್ ಮಾತನಾಡಿ, ಕ್ಲಬ್‌ನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕು. ಕ್ಲಬ್‌ನ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಪ್ರತಿಯೊಬ್ಬರ ಪರಿಚಯವಾಗುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ತಾನಾಗಿಯೇ ಮನವಿಗಳ ಸುರಿಮಳೆಯೇ ಬರುತ್ತದೆ. ಇದು ಮುಂದೆ ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಉತ್ತಮ ತಲಪಾಯವಾಗಲಿದೆ. ಮಹಿಳಾ ಸಂಘಟನೆಗಳಿಂದ ಕೊಡುಗೆಗಳನ್ನು ನೀಡಿ ಆರೋಗ್ಯಕರ ಸಮಾಜ ನಿಮಾಣಕ್ಕೆ ಸಹಕಾರಿಯಾಗಲಿದೆ. ಕ್ಲಬ್‌ನಲ್ಲಿ ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಧುನಿಕತೆಯಕತೆಯನ್ನು ಅಳವಡಿಸಿಕೊಂಡು ಒಮ್ಮತದಲ್ಲಿ ಹೊಸ ಸದಸ್ಯರು ಕ್ಲಬ್‌ನ್ನು ಮುನ್ನಡೆಸಬೇಕು.

ಕ್ಲಬ್‌ನ ಅಧ್ಯಕ್ಷೆ ಟೈನೀ ದೀಪಕ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕ್ಲಬ್ ಹಲವು ಸಮಾಜದ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಕ್ಲಬ್ ಸದಸ್ಯರು ಹಾಗೂ ದಾನಿಗಳು ದೇಣಿಗೆ ನೀಡಿ ಕ್ಲಬ್ ನ ಸಮಾಜ ಸೇವೆಯಲ್ಲಿ ಸಹಕರಿಸಿದ್ದಾರೆ. ಕ್ಲಬ್ ಮಹಿಳೆಯರಿಗಾಗಿ ಇರುವಂತದ್ದು. ಹೀಗಾಗಿ ಮಹಿಳೆಯರ ಉಪಯೋಗಕ್ಕೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಪೌಷ್ಟಿಕ ಆಹಾರ, ವಿದ್ಯಾಭ್ಯಾಸಕ್ಕಾಗಿ ಸಹಾಯವಾಣಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕ್ಲಬ್ ನಿಂದ ಇನ್ನಷ್ಟು ಸಮಾಜಮುಖಿ ಕೊಡುಗೆಗಳನ್ನು ನೀಡಲು ಕ್ಲಬ್ ಬದ್ದವಾಗಿದೆ. ಕ್ಲಬ್‌ನಿಂದ ಉತ್ತಮ ಸಮಾಜಸೇವೆಗಳು ನಡೆದಿದ್ದು ಇಂತಹ ಸದಸ್ಯರಿದ್ದರೆ ಸಮಾಜ ಸೇವೆಯಲ್ಲಿ ಗುರಿ ತಲುಪಲು ಸಾಧ್ಯ ಎಂದು ಅವರು ಹೇಳಿದರು.

ವಿವಿಧ ಕೊಡುಗೆಗಳು:

ಕ್ಲಬ್‌ನ ಸದಸ್ಯರ ಪ್ರಾಯೋಜಕತ್ವದಲ್ಲಿ ಸಮಾಜಮುಖಿ ಕೊಡುಗೆಗಳನ್ನು ನೀಡಿದ್ದು, ಕೊಡಿಪ್ಪಾಡಿಯಲ್ಲಿ ವಿದ್ಯುತ್ ರಹಿತ ಮನೆಗೆ ರೂ.25,೦೦೦ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ, ಸಾಮೆತ್ತಡ್ಕ ಶಾಲೆಗೆ ಕುಡಿಯುವ ನೀರಿನ ಘಟಕ, ರಾಮಕೃಷ್ಣ ಆಶ್ರಮಕ್ಕೆ ಬೆಡ್ ಶೀಟ್, ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್, ಪೌಷ್ಟಿಕ ಆಹಾರದ ಕೊರತೆಯಿರುವ ಐದು ಮಹಿಳಾ ಫಲಾನುಭವಿಗಳಿಗೆ ಟಿ.ಬಿ ಕಿಟ್ ವಿತರಣೆ, ಬಿರುಮಲೆ ಬೆಟ್ಟದ ಹಿಂದು ವರ್ಗದ ವಿದ್ಯಾರ್ಥಿನಿ ನಿಲಯಕ್ಕೆ ಇನ್ಸುಲೇಟರ್‌ನ್ನು ಕೊಡುಗೆಯಾಗಿ ನೀಡಿದರು. ವಿವಿಧ ಕೊಡುಗೆಗಳ ಪ್ರಾಯೋಜಕರು ಹಾಗೂ ಫೆಬ್ರವರಿ ತಿಂಗಳಲ್ಲಿ ಹುಟ್ಟು ಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವವರನ್ನು ಕಾರ್ಯಕ್ರಮದಲ್ಲಿ ಗುರುತಿಸಿ, ಗೌರವಿಸಲಾಯಿತು.

ಸನ್ಮಾನ:

ಇನ್ನರ್ ವ್ಹೀಲ್ ಕ್ಲಬ್‌ನ ಜಿಲ್ಲಾಧ್ಯಕ್ಷೆ ಕವಿತಾ ನಿಯತ್‌ರವನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಬುಲೆಟಿನ್ ಬಿಡುಗಡೆ:

ಕ್ಲಬ್‌ನ ಈ ವರ್ಷದ ಆರನೇ ಬುಲೆಟಿನ್ `ವುಮೆನ್ಸ್ ಇನ್‌ಸೈಟ್’ನ್ನು ಜಿಲ್ಲಾಧ್ಯಕ್ಷೆ ಕವಿತಾ ನಿಯತ್ ಬಿಡುಗಡೆಗೊಳಿಸಿದರು. ಬುಲೆಟಿನ್ ಸಂಪಾದಕಿ ಮಂಜುಳಾ ಭಾಸ್ಕರ್ ಬುಲೆಟಿನ್ ಬಗ್ಗೆ ವಿವರಿಸಿದರು.

ಸದಸ್ಯರ ಸೇರ್ಪಡೆ:

ಕ್ಲಬ್ ಗೆ ನೂತನ ಸದಸ್ಯರಾಗಿ ವಚನಾ ಹಾಗೂ ಅಮಿತಾ ಸಂತೋಷ್ ಶೆಟ್ಟಿಯವರನ್ನು ಸೇರ್ಪಡೆಗೊಳಿಸಲಾಯಿತು. ಜಿಲ್ಲಾಧ್ಯಕ್ಷೆ ಕವಿತಾ ನಿಯತ್ ಪಿನ್ ತೊಡಿಸಿ ಕ್ಲಬ್‌ಗೆ ಸೇರ್ಪಡೆಗೊಳಿಸಿದರು. ವೇದಾ ಲಕ್ಷ್ಮೀ ಕಾಂತ್ ನೂತನ ಸದಸ್ಯರ ಪರಿಚಯ ಮಾಡಿದರು.
ರಮಾ ಪ್ರಭಾಕರ್ ಪ್ರಾರ್ಥಿಸಿದರು. ಸಂಧ್ಯಾ ಸಾಯ ಇನ್ನರ್ ವ್ಹೀಲ್ ವಾಣಿ ವಾಚಿಸಿದರು. ಕಾರ್ಯದರ್ಶಿ ಮನೋರಮ ಹೆಜಮಾಡಿ ವರದಿ ವಾಚಿಸಿದರು. ಐಎಸ್‌ಒ ಕೃಷ್ಣವೇಣಿ ಮುಳಿಯ, ನಿಕಟ ಪೂರ್ವ ಆಧ್ಯಕ್ಷೆ ವೀಣಾ ಬಿ.ಕೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸೀಮಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಅಶ್ವಿನಿ ಕೃಷ್ಣ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here