ಪುತ್ತೂರು:ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ ಪುತ್ತೂರು, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಈಶ್ವರಮಂಗಲ, ಕೆವಿಜಿ ಡೆಂಟಲ್ ಕಾಲೇಜು ಆಸ್ಪತ್ರೆ ಸುಳ್ಯ ಹಾಗೂ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಇದರ ತಜ್ಞ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರ ಫೆ.5ರಂದು ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಸಾಮಾನ್ಯ ಚಿಕಿತ್ಸೆಗಳಾದ ಬಿ.ಪಿ., ಶುಗರ್, ನಿರಂತರ ಕೆಮ್ಮು, ಉಬ್ಬಸ ಹಾಗೂ ಎಲ್ಲಾ ವಿಧದ ಸಾಮಾನ್ಯ ರೋಗಗಳ ತಪಾಸಣೆ, ಎಲುಬು ಮತ್ತು ಕೀಲು ರೋಗ ವಿಭಾಗಗಳಾದ ಸಂಧಿ ವಾತ, ಬೆನ್ನು ನೋವು, ಸೊಂಟ ನೋವು, ಮೊಣಕಾಲಿನ ಸಮಸ್ಯೆಗಳು, ಮಕ್ಕಳ ಮೂಳೆ ಸಮಸ್ಯೆಗಳ ತಪಾಸಣೆ, ಕಣ್ಣಿನ ವಿಭಾಗಗಳಾದ ಕಣ್ಣಿನ ತಪಾಸಣೆ, ಆವಶ್ಯವಿದ್ಧವರಿಗೆ ರಿಯಾಯಿತಿ ದರದಲ್ಲಿ ಓದುವ ಕನ್ನಡಕ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಆವಶ್ಯವಿದ್ದಲ್ಲಿ ಹಸಿರು ಕಾರ್ಡ್ ಮೂಲಕ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಕಿವಿ ಮೂಗು ಮತ್ತು ಗಂಟಲು ವಿಭಾಗದಲ್ಲಿ ಕಿವಿ ನೋವು, ಕಿವಿ ಸೋರುವುದು, ಸೈನಸ್ ಸಮಸ್ಯೆ, ಅಲರ್ಜಿ, ಮೂಗು ಮತ್ತು ಗಂಟಲಿಗೆ ಸಂಬಂಧಪಟ್ಟ ರೋಗ ಸಮಸ್ಯೆಗಳ ತಪಾಸಣೆ, ಚರ್ಮ ರೋಗ ವಿಭಾಗದಲ್ಲಿ ಎಲ್ಲಾ ರೀತಿಯ ಚರ್ಮಕ್ಕೆ ಸಂಬಂಧಪಟ್ಟ ರೋಗ ಸಮಸ್ಯೆಗಳ ತಪಾಸಣೆ, ದಂತ ತಪಾಸಣೆ ವಿಭಾಗದಲ್ಲಿ ಬಾಯಿ ಮತ್ತು ಹಲ್ಲಿನ ಸಂಪೂರ್ಣ ತಪಾಸಣೆ ಮತ್ತು ಸಲಹೆ, ಹುಳುಕು ಹಲ್ಲು ಕೀಳುವುದು, ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು ಹಲ್ಲುಗಳನ್ನು ಸ್ವಚ್ಚಗೊಳಿಸುವುದು, ರಕ್ತವರ್ಗೀಕರಣ ಮತ್ತು ಮಧುಮೇಹ ತಪಾಸಣೆ ನಡೆಯಲಿದೆ.
ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಳ ಆವಶ್ಯವಿದ್ದಲ್ಲಿ ಕೆಎಂಸಿ ಆಸ್ಪತ್ರೆಯ ಹಸಿರು ಕಾರ್ಡ್ ನೀಡಲಾಗುತ್ತಿದ್ದು ಇದರ ಮೂಲಕ ಶಸ್ತ್ರ ಚಿಕಿತ್ಸೆಗೆ ಗರೀಷ್ಠ ರೂ.10,೦೦೦ ಮತ್ತು ಇತರ ಚಿಕಿತ್ಸೆಗೆ ಗರಿಷ್ಠ ರೂ.5೦೦೦ದ ತನಕ ಆಸ್ಪತ್ರೆಯ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.