ಪುತ್ತೂರು: ನಾನು ಯಾರಿಗೂ ಕಲ್ಲೆಸೆದಿಲ್ಲ. ನಾನು ಕಲ್ಲು ಎಸೆದು ಕಣ್ಣಿಗೆ ಗಾಯವಾಗಿದೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿದ ಇಳಂತಿಲದ ಶಶಿಕುಮಾರ್ ಪಿಳ್ಳೆ ಸಹಿತ 6 ಮಂದಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಣ್ಣಪ್ಪನ ಸನ್ನಿಧಾನದಲ್ಲಿ ಪ್ರಮಾಣ ಮಾಡಲಿ. ನಾನು ಕೂಡಾ ಬರುತ್ತೇನೆ ಎಂದು ಮಾಜಿ ಸೈನಿಕ ಇಳಂತಿಲ ನಿವಾಸಿ ಜಯಕುಮಾರ್ ಪೂಜಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಾನು 24 ವರ್ಷ ಸೈನಿಕನಾಗಿ ಸೇವೆ ಮಾಡಿ ನಿವೃತ್ತನಾದವ. ನಾನು ಕೃಷಿ ಮಾಡುವ ಸಂದರ್ಭದಲ್ಲಿ ಶಶಿಕುಮಾರ್ ಪಿಳ್ಳೆ ಅವರು ನನ್ನ ಕೃಷಿ ಜಾಗಕ್ಕೆ ಹೋಗುವಲ್ಲಿ ಜಾಗ ಇದ್ದರೂ ಅದನ್ನು ಬಿಡದೆ ಬಂದ್ ಮಾಡಿದ್ದಾರೆ. ಅದಾದ ಬಳಿಕ ನಾನು ಗುಡ್ಡೆಯಲ್ಲಿ ನನ್ನ ಪಾಡಿಗೆ ಹೋಗುತ್ತಿದ್ದ ವೇಳೆ ಶಶಿಕುಮಾರ್ ಪಿಳ್ಳೆ ಅವರ ಪತ್ನಿ ಆಶಾ ಎಂಬವರು ಕಣ್ಣಿಗೆ ಕಲ್ಲು ಬಿಸಾಡಿದ್ದೇನೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಒಂದು ವೇಳೆ ನಾನು ಕಲ್ಲು ಬಿಸಾಡಿದ್ದೇ ಆದಲ್ಲಿ ಆ ಕಲ್ಲು ಸಮೇತ ಶಶಿಕುಮಾರ್ ಪಿಳ್ಳೆ, ಆಶಾ, ವಸಂತ ಶೆಟ್ಟಿ, ಪ್ರೀತಮ್, ಸುಪ್ರೀತ್, ತಿಮ್ಮಪ್ಪ ಗೌಡ ಅವರು ಫೆ.15ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಅಣ್ಣಪ್ಪನ ಸನ್ನಿಧಾನದಲ್ಲಿ ಪ್ರಮಾಣ ಮಾಡಲಿ. ನಾನು ಅಲ್ಲಿಗೆ ಬರುತ್ತೇನೆ ಎಂದು ಜಯಕುಮಾರ್ ತಿಳಿಸಿದ್ದಾರೆ.