ಪುತ್ತೂರು: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಕೃಷ್ಣಾನುಗ್ರ ಸಭಾಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ 25ನೇ ಸಾಹಿತ್ಯ ಸಮ್ಮೇಳನದಲ್ಲಿ ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಮಹಿಳಾ ಸಂಘದಿಂದ ‘ಯಕ್ಷ ಭ್ರಾತೃ’ ಎಂಬ ವಿನೂತನ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮುರಳಿ ಕೃಷ್ಣ ತೆಂಕಬೈಲು, ಚೆಂಡೆ ಮತ್ತು ಮದ್ದಳೆಗಳಲ್ಲಿ ಮುರಳಿಧರ ಕಲ್ಲೂರಾಯ, ಶಿತಿಕಂಠ ಭಟ್ ಉಜಿರೆ ಸಹಕರಿಸಿದರು. ಮುಮ್ಮೆಳದಲ್ಲಿ ಶುಭಾ ಜೆ.ಸಿ.ಅಡಿಗ(ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ), ಶುಭಾ ಗಣೇಶ್ (ಶ್ರೀ ಕೃಷ್ಣ), ಹರಿಣಾಕ್ಷಿ ಜೆ .ಶೆಟ್ಟಿ (ಬಲರಾಮ) ಸಹಕರಿಸಿದರು. ನಿರ್ದೇಶಕರಾದ ಭಾಸ್ಕರ ಬಾರ್ಯ ಸ್ವಾಗತಿಸಿ, ಸಂಯೋಜಕಿ ವಿದ್ಯಾ ಅಡೂರು ವಂದಿಸಿದರು.