ಅಮಿತ್ ಶಾ ಗೆ ಸ್ವಾಗತ ಕೋರಿ ದರ್ಬೆಯಲ್ಲಿ ರಾರಾಜಿಸುತ್ತಿರುವ ಬೃಹತ್ ಕಟೌಟ್

0

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಸ್ವಾಗತ ಕೋರಿ ದರ್ಬೆಯಲ್ಲಿ ಹಲವು ಕಟೌಟ್‌ಗಳು ರಾರಾಜಿಸುತ್ತಿದ್ದು, ಅದರಲ್ಲಿ ವಿಶೇಷವಾಗಿ ದರ್ಬೆ ಬೈಪಾಸ್ ರಸ್ತೆಯಲ್ಲಿನ ಕೈಯಲ್ಲಿ ಬಿಜೆಪಿ ಧ್ವಜ ಹಿಡಿದ ಅಮಿತ್ ಶಾ ಅವರ ಪ್ರತಿಮೆ ಮಾದರಿಯಲ್ಲಿನ ಬೃಹತ್ ಕಟೌಟ್ ವಿಶೇಷ ಆಕರ್ಷಣೆ ನೀಡಿದೆ.


ಪದ್ಮಶ್ರೀ ಗ್ರೂಪ್ಸ್‌ನ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ನೇತೃತ್ವದಲ್ಲಿ ಸುಮಾರು ರೂ.65 ಸಾವಿರ ವೆಚ್ಚದಲ್ಲಿ ಅಲ್ಯೂಮಿನಿಯಮ್ ಪ್ರೇಮ್ ಅಳವಡಿಸಿ ಅಮಿತ್ ಶಾ ಅವರಿಗೆ ಶುಭ ಕೋರಿ ಕಟೌಟ್ ನಿರ್ಮಾಣ ಮಾಡಲಾಗಿದೆ. ಅಮಿತ್ ಶಾ ಅವರ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಸಂಜೀವ ಮಠಂದೂರು ಅವರಿಗೆ ಶುಭ ಕೋರಿ ಎಪಿಎಂಸಿ ಮಾಜಿ ಸದಸ್ಯ ಕೃಷ್ಣಕುಮಾರ್ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪದ್ಮಶ್ರೀ ಗ್ರೂಪ್ಸ್‌ನ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ಹೆಸರಿದೆ.

LEAVE A REPLY

Please enter your comment!
Please enter your name here