ಪುತ್ತೂರು: ಬನ್ನೂರು ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 18 ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಮತ್ತು ಸ್ಪೂರ್ತಿ ಯುವಕ -ಯುವತಿ ಮಂಡಲ, ಸ್ಪೂರ್ತಿ ಮಹಿಳಾ ಮಂಡಲ, ಸ್ಪೂರ್ತಿ ಬಾಲಸಭಾ ಬನ್ನೂರು ಇದರ 33 ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 11 ರಂದು ರಾತ್ರಿ 10 ಗಂಟೆಗೆ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಗಯಾಪದ ಕಲಾವಿದರು ಉಬಾರ್ ಅಭಿನಯಿಸುವ ‘ಏತ್ ಪಂಡಲಾ ಆತೆ – ಅಯಿಕೆ ಯಾನ್ ಮನಿಪುಜಿ’ ತುಳು ನಾಟಕ 14 ನೇ ಪ್ರಯೋಗ ನಡೆಯಲಿದೆ.
ಬಾಲಕೃಷ್ಣ ಪೂಜಾರಿ ಪೆರುವಾಯಿಯವರ ಸಾರಥ್ಯದಲ್ಲಿ, ಈ ನಾಟಕಕ್ಕೆ ಶಶಿಕುಮಾರ್ ಕೂಳೂರು ಕಥೆ ರಚನೆ, ಸಂಭಾಷಣೆ ಹಾಗು ನಿರ್ದೇಶನ ನೀಡಿದ್ದಾರೆ. ಕಿಶೋರ್ ಜೋಗಿ ಉಬಾರ್ ಸಂಚಾಲಕತ್ವದಲ್ಲಿ, ರಾಜೇಶ್ ಶಾಂತಿನಗರರವರ ಸಲಹೆ ಸಹಕಾರದಲ್ಲಿ, ಕಲಾವಿದರಾಗಿ ಅಶೋಕ್ ಬನ್ನೂರು, ರಾಜಶೇಖರ್ ಶಾಂತಿನಗರ, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ದಿವಾಕರ ಸುರ್ಯ, ಕಿಶನ್ ಸುರ್ಯ, ಅನಿಲ್ ಇರ್ದೆ, ಸತೀಶ್ ಶೆಟ್ಟಿ ಹೆನ್ನಾಳ, ಕಿರಣ್ ಶಾಂತಿ ನಗರ, ಪ್ರೀತಂ ಶಾಂತಿನಗರ, ಚೇತನ್, , ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾ ಹಿರೆಬಂಡಾಡಿ, ವೈಶಾಲಿ ಕುಂದರ್ ಹಾಗೂ ಗಂಗಾಧರ ಟೈಲರ್, ದೀಪಕ್ ಪೈ ರಾಮನಗರ, ರಾಜೇಶ್ ಕೆಮ್ಮಾಯಿ ಭೂಮಿಕೆಯಲ್ಲಿದ್ದಾರೆ.
ಸಿದ್ದು ಬೆದ್ರ ರಂಗಾಲಂಕಾರ, ವೇದಸ್ಯ ಕುಲಾಲ್ ವರ್ಣಾಲಂಕಾರ, ಕಾರ್ತಿಕ ಶಾಸ್ತ್ರಿ ಮಣಿಲ ಸಂಗೀತ, ಕೃಷ್ಣ ಮುಂಡ್ಯರವರ ಧ್ವನಿ ಮತ್ತು ಬೆಳಕಿನಲ್ಲಿ, ಗುಣಕರ ಅಗ್ನಾಡಿಯವರ ಸಹಕಾರದಲ್ಲಿ ನಾಟಕ ಮೂಡಿಬರಲಿದೆ.