ಪೆರ್ನೆ: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನಕ್ಕೆ ದೈವದ ಪಲ್ಲಕಿ, ಉಯ್ಯಾಲೆ ಆಗಮನ

0

ಪುತ್ತೂರು:ಸುಮಾರು 500 ವರ್ಷಗಳ ಇತಿಹಾಸವಿರುವ ಪೆರ್ನೆ ಗ್ರಾಮದ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಫೆ.21ರಿಂದ 23ರ ತನಕ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವಕ್ಕೆ ಸಂಬಂಧಿಸಿದಂತೆ ದೈವಗಳ ಉಯ್ಯಾಲೆ, ಮಂಚ, ಪಲ್ಲಕಿ ಹಾಗೂ ಬಂಡಿಯು ಫೆ.18ರಂದು ದೈವಸ್ಥಾನಕ್ಕೆ ಆಗಮಿಸಿತು.


ಬಾರ್ಕೂರಿನಲ್ಲಿ ಸಿದ್ದಗೊಂಡಿರುವ ಪಲ್ಲಕಿ ಹಾಗೂ ವ್ಯಾಘ್ರಚಾಮುಂಡಿ ದೈವದ ಬಂಡಿ ಹಾಗೂ ಪೆರ್ನೆಯಲ್ಲಿ ಸಿದ್ದಗೊಂಡ ದೈವದ ಉಯ್ಯಾಲೆ, ಮಂಚಗಳನ್ನು ಪೆರ್ನೆಯಲ್ಲಿ ಸ್ವಾಗತಿಸಲಾಯಿತು. ಬಳಿಕ ಮೆರವಣಿಗೆಯ ಮೂಲಕ ಮಾಡತ್ತಾರು ದೈವಸ್ಥಾನಕ್ಕೆ ಆಗಮಿಸಿತು. ದೈವಸ್ಥಾನದ ಟ್ರಸ್ಟ್‌ನ ಗೌರವಾಧ್ಯಕ್ಷ ಈಶ್ವರ ಪ್ರಸನ್ನ ಕೆ. ಪೆರ್ನೆಕೋಡಿ, ಅಧ್ಯಕ್ಷ ಕಿರಣ್ ಶೆಟ್ಟಿ ಮುಂಡೋವಿನಕೋಡಿ, ಕಾರ್ಯದರ್ಶಿ ಶಿವಪ್ಪ ನಾಯ್ಕ ಕಾರ್ಲ, ಸಂಘಟನಾ ಕಾರ್ಯದರ್ಶಿ ಮುತ್ತಪ್ಪ ಸಾಲಿಯಾನ್ ಹನುಮಾಜೆ, ಟ್ರಸ್ಟಿ ದಯಾನಂದ ಪೂಜಾರಿ ಸೇರಿದಂತೆ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here