- ಬಿಎಪಿಎಲ್ ಕಾರ್ಡ್ದಾರರಿಗೆ ಶುಲ್ಕ ರಹಿತ ಆ್ಯಂಬುಲೆನ್ಸ್ ಸೇವೆ
- ಪ್ರತಿ ವಾರ್ಡ್ನಲ್ಲಿ ಉಚಿತ ಆರೋಗ್ಯ ಶಿಬಿರ
- ಉದ್ಯಮ ಪರವಾನಿಗೆ ನವೀಕರಣ 5 ವರ್ಷಕ್ಕೊಮ್ಮೆ
- ಘನತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ-ಶೇ.100 ಅನುಷ್ಟಾನ
- ಶೂನ್ಯತ್ಯಾಜ್ಯ ವಿಲೇವಾರಿ ಘಟಕದೊಂದಿಗೆ ಸ್ವಚ್ಚತೆಗೆ ಆದ್ಯತೆ
- ಲಭ್ಯವಿರುವ ಜಾಗದಲ್ಲಿ 1 ಕಿ.ಮೀ ಸೈಕಲ್ ಪಾತ್
- ಮೂರು ಕಡೆ ಸರಕಾರಿ ಕೆರೆ ಅಭಿವೃದ್ಧಿ
- ವಾಹನ ಪಾರ್ಕಿಂಗ್ ವ್ಯವಸ್ಥೆಗಾಗಿ ಜಾಗ ಸ್ವಾಽÃನ
- ರಿಂಗ್ ರಸ್ತೆಗಳಿಗೆ ಹೆಚ್ಚಿನ ಒತ್ತು
- ಪಾದಚಾರಿ ರಸ್ತೆಗಳ ಅಭಿವೃದ್ಧಿ
- ಪ.ಜಾ, ಪ,ಪಂ, ಅಂಗವಿಕಲರಿಗೆ ಮನೆ ನಿರ್ಮಾಣಕ್ಕೆ ನೂತನ ಯೋಜನೆ ಘೋಷಣೆ
- ನಗರ ಹಸಿರೀಕರಣ,ಪರಿಸರ ಸಂರಕ್ಷಣೆ
ಪುತ್ತೂರು:2023-24ನೇ ಸಾಲಿನಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹಲವು ನೂತನ ಯೋಜನೆಗಳನ್ನೊಳಗೊಂಡು ರೂ.68 ಲಕ್ಷ ಮಿಗತೆ ಬಜೆಟ್‌ನ್ನು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಂಡನೆ ಮಾಡಿದರು. ಕಳೆದ ವರ್ಷದಂತೆ ಈ ಬಾರಿಯೂ ಸದಸ್ಯರು ಇದೊಂದು ಉತ್ತಮ ಬಜೆಟ್ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ವಿಪಕ್ಷ ಸದಸ್ಯರಿಂದಲೂ ಸಹಮತ ವ್ಯಕ್ತವಾಗಿತ್ತು. ಫೆ.23ರಂದು ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ನಡೆದ ನಗರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮಂಡನೆ ಮಾಡಿದರು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮತ್ತು ಪುತ್ತೂರಿನ ಸಮಸ್ತ ನಾಗರಿಕರ ಆಶೀರ್ವಾದ ಬೇಡುತ್ತಾ ಬಜೆಟ್ ಮಂಡನೆ ಮಾಡುತ್ತಿರುವುದಾಗಿ ಅಧ್ಯಕ್ಷರು ಹೇಳಿದರು.
ಬಜೆಟ್ ಮುಖ್ಯಾಂಶಗಳು: 2023-24ನೇ ಸಾಲಿನ ನಗರಸಭೆಯ ಪ್ರಮುಖ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ಅಂಗಡಿ ಬಾಡಿಗೆ, ಮಾರುಕಟ್ಟೆ ಶುಲ್ಕ, ಉದ್ದಿಮೆ ಪರವಾನಗಿ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣಾ ಶುಲ್ಕ ಇತ್ಯಾದಿಗಳಿಂದ ಸಂಗ್ರಹವಾಗುವ ಒಟ್ಟು ಸ್ವಂತ ರಾಜಸ್ವ ಆದಾಯ ರೂ.15.23 ಕೋಟಿಗಳು, ರಾಜ್ಯ ಸರ್ಕಾರದಿಂದ ಬಿಡುಗಡೆ ಆಗತಕ್ಕ ರಾಜಸ್ವ ಅನುದಾನಗಳಾದ ವೇತನ ಅನುದಾನ, ಕುಡಿಯುವ ನೀರಿನ ಅನುದಾನ, ವಿದ್ಯುತ್ ಅನುದಾನ, ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಮತ್ತು ಇತರೇ ರಾಜಸ್ವ ಅನುದಾನ ರೂ.11.53 ಕೋಟಿಗಳು.ಎರಡು ಆದಾಯಗಳು ಸೇರಿ ಒಟ್ಟು ರೂ.26.76 ಕೋಟಿ ರಾಜಸ್ವ ಕಂದಾಯ ನಿರೀಕ್ಷಿಸಲಾಗಿದೆ.
ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 15ನೇ ಹಣಕಾಸು ಅನುದಾನ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನ, ಸ್ವಚ್ಛ ಭಾರತ್ ಮಿಷನ್ ಅನುದಾನ ಹಾಗೂ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ, ಲೋಕಸಭಾ, ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಕುಡಿಯುವ ನೀರಿನ ಅನುದಾನ, ಪ್ರಾಕೃತಿಕ ವಿಕೋಪ ಅನುದಾನ, ಡೇ-ನಲ್ಮ್ ಅನುದಾನ, ಅಂಗನವಾಡಿ ಮತ್ತು ಶಾಲಾ ಕಟ್ಟಡ ರಿಪೇರಿ ಅನುದಾನ, ಮಲ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ ಅನುದಾನ, ಎಸ್.ಎಸ್‌ಸಿ ವಿಶೇಷ ಅನುದಾನ, ಇತರೇ ಅನುದಾನ ಸೇರಿ ಒಟ್ಟು ರೂ. 21.52 ಕೋಟಿ ಅನುದಾನಗಳನ್ನು ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ.4.96 ಕೋಟಿ ನಿರೀಕ್ಷಿಸಲಾಗಿದೆ.
ನಗರಸಭೆಯ ಸ್ವಂತ ಅನುದಾನ, ಎಲ್ಲಾ ಅನುದಾನಗಳು, ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ.53.24 ಕೋಟಿ ಆದಾಯವನ್ನು 2023-24ನೇ ಸಾಲಿನಲ್ಲಿ ನಿರೀಕ್ಷಿಸಲಾಗಿದೆ. ಆರಂಭದ ಶಿಲ್ಕು ರೂ. 8.32 ಕೋಟಿ ಆಗಿದ್ದು, ನಗರಸಭೆಗೆ 2023-24ನೇ ಸಾಲಿಗೆ ನಿರೀಕ್ಷಿಸಲಾದ ಸ್ವಂತ ಆದಾಯ ರೂ.15.23 ಕೋಟಿ ಆಗಿದೆ.2022-23ನೇ ಸಾಲಿನಲ್ಲಿ ನಿರೀಕ್ಷಿಸಲಾದ ರಾಜಸ್ವ ಅನುದಾನ ರೂ.11.53 ಕೋಟಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾದ ನಿಽðಷ್ಟ ಅನುದಾನ ರೂ.21.52 ಕೋಟಿ, ಇತರೇ ಹೊಂದಾಣಿಕೆ ಮೊತ್ತ ರೂ.4.96 ಕೋಟಿ, ಒಟ್ಟು ಆರಂಭಿಕ ಶುಲ್ಕ ಸೇರಿಸಿ ರೂ. 61.56 ಕೋಟಿ, 2022-23ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯತೆಗಳಿಗೆ ಹಂಚಿಕೆ ಮಾಡಲಾದ ಮೊತ್ತ ರೂ. 60.88ಕೋಟಿ ಸೇರಿ ರೂ.68 ಲಕ್ಷದ ಮಿಗತೆ ಬಜೆಟ್ ಮಂಡನೆ ಮಾಡಲಾಗಿದೆ.
ಪ್ರಮುಖ ಆದಾಯಗಳ ವಿವರ; ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯಾಗಿ ರೂ.5.99 ಕೋಟಿ, ನೀರಿನ ಸಂಪರ್ಕದಿಂದ ನೀರಿನ ಶುಲ್ಕವಾಗಿ 3.50 ಕೋಟಿ, ಬಡಾವಣೆ ಅಭಿವೃದ್ಧಿ ಶುಲ್ಕವಾಗಿ ರೂ.1.50 ಕೋಟಿ, ಕಟ್ಟಡ ಪರವಾನಗಿ ರೂ.50 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕ ರೂ.55 ಲಕ್ಷ, ನೀರಿನ ನಳ್ಳಿ ಜೋಡಣೆ ಶುಲ್ಕದಿಂದ ರೂ.10 ಲಕ್ಷ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದ ರೂ. 1.25 ಕೋಟಿ, ವಾಣಿಜ್ಯ ಸಂಕೀರ್ಣದ ಬಾಡಿಗೆಯಿಂದ ರೂ.30 ಲಕ್ಷ, ಮಾರುಕಟ್ಟೆ ಮತ್ತು ನೆಲ ಬಾಡಿಗೆಗಳಿಂದ ರೂ.25 ಲಕ್ಷ, ಸೆಸ್‌ಪೂಲ್ ವಾಹನದ ಬಾಡಿಗೆಯಿಂದ ರೂ.20 ಲಕ್ಷ, ಖಾತೆ ಬದಲಾವಣೆ, ಖಾತಾ ಪ್ರತಿ, ಪ್ರತಿ ನೀಡಿಕೆಗಳಿಂದ ರೂ.18 ಲಕ್ಷ, ಆಸ್ತಿ ತೆರಿಗೆ ದಂಡ ಮತ್ತು ಇತರೆ ದಂಡಗಳಿಂದ ರೂ.83 ಲಕ್ಷ, ಪುರಭವನದ ಬಾಡಿಗೆಯಿಂದ ರೂ.3 ಲಕ್ಷ, ಜಾಹೀರಾತು ಶುಲ್ಕದಿಂದ ರೂ.5 ಲಕ್ಷ, ಮುದ್ರಾಂಕ ಶುಲ್ಕದಿಂದ ರೂ.15 ಲಕ್ಷ ಆದಾಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ನಿರೀಕ್ಷಿತ ಆದಾಯಗಳಿಂದ ಮೂಲಭೂತ ಸೌಕರ್ಯಗಳಿಗೆ ಹಂಚಿಕೆ: ವಾರ್ಡುಗಳಲ್ಲಿ ರಸ್ತೆ ರಿಪೇರಿ ಮತ್ತು ನಿರ್ಮಾಣ ರೂ.8.50 ಕೋಟಿ, ಡಲ್ಟ್ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯ ಜಾಗ ಲಭ್ಯವಿರುವ ಕಡೆ ಅಂದಾಜು 1 ಕಿ.ಮೀ ಸೈಕಲ್ ಮಾರ್ಗ ನಿರ್ಮಿಸಲು ರೂ.1.25 ಕೋಟಿ, ಚರಂಡಿ ರಿಪೇರಿ ಮತ್ತು ನಿರ್ಮಾಣ ರೂ.3 ಕೋಟಿ, ಪ್ರತಿ ವಾರ್ಡುಗಳಲ್ಲಿ ನೀರು ಸರಬರಾಜು ಹಾಗೂ ನಿರ್ವಹಣೆಗಾಗಿ ರೂ.5.01 ಕೋಟಿ, ನಗರಸಭೆ ವ್ಯಾಪ್ತಿಯ ಮೂರು ಕಡೆಗಳಲ್ಲಿ ಕೆರೆ ಅಭಿವೃದ್ಧಿಗಾಗಿ ರೂ.3.20 ಕೋಟಿ, ಭೂಮಿ ಖರೀದಿಗಾಗಿ ರೂ.1 ಕೋಟಿ, ವೃತ್ತಗಳು ಹಾಗೂ ಇತರೇ ಸ್ಥಿರಾಸ್ತಿಗಳ ಅಭಿವೃದ್ಧಿಗಾಗಿ ರೂ.50 ಲಕ್ಷ, ಕಟ್ಟಡ ನಿರ್ಮಾಣಕ್ಕಾಗಿ ರೂ.50 ಲಕ್ಷ, ನಗರ ವ್ಯಾಪ್ತಿಯಲ್ಲಿ ಬರುವ ಆಶ್ರಯ ಬಡಾವಣೆಗಳಿಗೆ ರೂ.50 ಲಕ್ಷ, ಸಾರ್ವಜನಿಕ ಶೌಚಾಲಯದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ.30 ಲಕ್ಷ, ನಗರಸಭೆಯ ಕಛೇರಿಯ ಪೀಠೋಪಕರಣಗಳ ಖರೀದಿಗಾಗಿ ರೂ.10 ಲಕ್ಷ, ಸಣ್ಣ ಸೇತುವೆ ಹಾಗೂ ಮೋರಿಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ. 25ಲಕ್ಷ, ಮಳೆ ನೀರು ಹರಿಯುವ ಚರಂಡಿಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ.60 ಲಕ್ಷ, ಸ್ಮಶಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ.40 ಲಕ್ಷ, ಉದ್ಯಾನವನ ನಿರ್ಮಾಣಕ್ಕಾಗಿ ರೂ.1.20 ಕೋಟಿ, ನಗರಸಭೆಯ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ.2.00 ಕೋಟಿ, ಅಂಗನವಾಡಿಗಳ ರಿಪೇರಿಗಾಗಿ ಪ್ರತೀ ವಾರ್ಡ್ಗೆ ತಲಾ ರೂ.1 ಲಕ್ಷ, ಆಶ್ರಯ ಬಡಾವಣೆಗಳ ಅಭಿವೃದ್ಧಿಗಾಗಿ ರೂ.50 ಲಕ್ಷ, ಸರ್ಕಾರಿ ಶಾಲೆಗಳ ರಿಪೇರಿಗಾಗಿ ರೂ.15 ಲಕ್ಷ, ಘನತ್ಯಾಜ್ಯ ಸಂಸ್ಕರಣಾ ಮತ್ತು ನಿರ್ವಹಣಾ ಘಟಕದ ಅಭಿವೃದ್ಧಿಗಾಗಿ ರೂ.1 ಕೋಟಿ, ಬನ್ನೂರು ಘನತ್ಯಾಜ್ಯ ಘಟಕದಲ್ಲಿ 2005ರಿಂದ ದಾಸ್ತಾನಾಗಿರುವ ಪಾರಂಪರಿಕ ಕಸವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿಗಾಗಿ ರೂ.2 ಕೋಟಿ, ಹೊಸ ವಾಹನಗಳನ್ನು ಹಾಗೂ ಯಂತ್ರೋಪಕರಣ ಖರೀದಿಗಾಗಿ ರೂ.77 ಲಕ್ಷ, ಪ.ಜಾತಿ ಹಾಗೂ ಪ. ಪಂಗಡದವರ ಅಭಿವೃದ್ಧಿಗಾಗಿ ಹಾಗೂ ಸದರಿಯವರ ಪ್ರದೇಶದ ಅಭಿವೃದ್ಧಿಗಾಗಿ ಶೇ.24.10ರ ನಿಧಿಯಡಿಯಲ್ಲಿ ರೂ.82 ಲಕ್ಷ, ಬಡತನ ರೇಖೆಗಿಂತ ಕೆಳಗಿರುವ ಬಿ.ಪಿ.ಎಲ್ ಕುಟುಂಬಗಳ ಅಭಿವೃದ್ಧಿಗಾಗಿ ಹಾಗೂ ಸದರಿಯವರ ಪ್ರದೇಶದ ಅಭಿವೃದ್ಧಿಗಾಗಿ ಶೇ.7.25ರ ನಿಧಿಯಡಿಯಲ್ಲಿ ರೂ. 25 ಲಕ್ಷ, ಭಿನ್ನ ಸಾಮರ್ಥ್ಯ ಹೊಂದಿರುವವರಿಗೆ ಶೇ.5ರ ನಿಧಿಯಡಿಯಲ್ಲಿ ರೂ.17 ಲಕ್ಷ, ನೈಸರ್ಗಿಕ ವಿಕೋಪಗಳಿಂದ ಆಗುವ ಹಾನಿ ಹಾಗೂ ಸಹಾಯಧನ ಪಾವತಿಸಲು ರೂ. 5 ಲಕ್ಷ,ಕಛೇರಿ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಇನ್ನಷ್ಟು ತ್ವರಿತಗೊಳಿಸುವ ನಿಟ್ಟಿನಲ್ಲಿ ಅವಶ್ಯಕವಾಗಿರುವ ಗಣಕ ಯಂತ್ರ ಮತ್ತು ಇತರೇ ಯಂತ್ರಗಳನ್ನು ಖರೀದಿಸಲು ರೂ.20 ಲಕ್ಷ, ಹೊಸ ದಾರಿ ದೀಪಗಳ ಅಳವಡಿಸಲು ಹಾಗೂ ನಿರ್ವಹಣೆಗಾಗಿ ರೂ. 1.43 ಕೋಟಿ, ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಅಽಕಾರಿಗಳು ಹಾಗೂ ಸಿಬ್ಬಂದಿಗಳ ವೇತನಕ್ಕಾಗಿ ನಿರೀಕ್ಷಿತ ಅನುದಾನದಲ್ಲಿ ರೂ.3.82 ಕೋಟಿ, ಸಂಗ್ರಹವಾಗುವ ಆಸ್ತಿ ತೆರಿಗೆ ಹಾಗೂ ಇತರೇ ವಸೂಲಿ ಮಾಡುವ ತೆರಿಗೆಗಳಿಂದ ಸರ್ಕಾರಕ್ಕೆ ಪಾವತಿಸಬೇಕಾಗಿರುವ ತೆರಿಗೆಗಳಿಗಾಗಿ ರೂ.1.59 ಕೋಟಿ, ಸಂಗ್ರಹವಾಗುವ ಆಸ್ತಿ ತೆರಿಗೆ ಹಾಗೂ ಇತರೇ ವಸೂಲಿ ಮಾಡುವ ತೆರಿಗೆಗಳಿಂದ ಸರ್ಕಾರಕ್ಕೆ ಪಾವತಿಸಬೇಕಾಗಿರುವ ಸೆಸ್ಸುಗಳಿಗಾಗಿ ರೂ. 1.11 ಕೋಟಿ, ನಗರಸಭೆಯ ವಿವಿಧ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಹಾಗೂ ತೆರೆದ ಚರಂಡಿಗಳಲ್ಲಿ ಹರಿಯುವ ಬೂದು ನೀರು ಸಂಸ್ಕರಣೆಗಾಗಿ ರೂ.40 ಲಕ್ಷ, ತ್ಯಾಜ್ಯ ನೀರು ಸಂಸ್ಕರಣೆಗಾಗಿ ಮಲ ಮತ್ತು ಸೆಪ್ಟೇಜ್ ನಿರ್ವಹಣೆಗಾಗಿ ರೂ. 3.50 ಕೋಟಿ, ತ್ಯಾಜ್ಯ ನೀರು ಸಂಸ್ಕರಣೆಗಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ರೂ. 4.17 ಕೋಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಗರಸಭೆಗೆ ಬಿಡುಗಡೆಯಾಗುವ ಅನುದಾನವನ್ನು ಸಂಪೂರ್ಣ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು, ಇದರೊಂದಿಗೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ವಿಕಲಚೇತನರಿಗೆ ನಿವೇಶನ ಹಂಚಿಕೆ: ನಗರಸಭಾ ವ್ಯಾಪ್ತಿಯ ಪ.ಜಾತಿ, ಪ.ಪಂಗಡದ ಒಟ್ಟು 53 ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ರೂ.1.59 ಕೋಟಿಯನ್ನು ಅಮೃತ್ ನಗರೋತ್ಥಾನ ಯೋಜನೆಯಡಿಯಲ್ಲಿ ಕಾದಿರಿಸಲಾಗಿದೆ.ಭಿನ್ನ ಸಾಮರ್ಥ್ಯದ ಒಟ್ಟು 12 ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ರೂ.36 ಲಕ್ಷ ಅಮೃತ್ ನಗರೋತ್ಥಾನ ಯೋಜನೆಯಡಿಯಲ್ಲಿ ಕಾದಿರಿಸಲಾಗಿದೆ.ಭಿನ್ನ ಸಾಮರ್ಥ್ಯದ ಫಲಾನುಭವಿಗಳಿಗೆ ದ್ವಿ-ಚಕ್ರ ವಾಹನ ಖರೀದಿಸಲು ರೂ.28 ಲಕ್ಷವನ್ನು ಅಮೃತ್ ನಗರೋತ್ಥಾನ ಯೋಜನೆಯಡಿಯಲ್ಲಿ ಕಾದಿರಿಸಲಾಗಿದೆ.ಇತರೆ ಹಿಂದುಳಿದ ವರ್ಗಗಳ ಅರ್ಹ 185 ಫಲಾನುಭವಿಗಳಿಗೆ ಮನೆ ರಿಪೇರಿಗಾಗಿ ರೂ.74 ಲಕ್ಷ ಅಮೃತ್ ನಗರೋತ್ಥಾನ ಯೋಜನೆಯಡಿಯಲ್ಲಿ ಕಾದಿರಿಸಲಾಗಿದೆ.
ಆರೋಗ್ಯ ಭಾಗ್ಯದಲ್ಲಿ ಆ್ಯಂಬುಲೆನ್ಸ್ ಸೇವೆ ವಿಶೇಷ: ನಗರ ವ್ಯಾಪ್ತಿಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಗರಸಭೆಯ ವತಿಯಿಂದ ಫಾಗಿಂಗ್ ಹಾಗೂ ಮದ್ದು ಸಿಂಪಡಣೆಯ ಕಾರ್ಯವನ್ನು ಹಮ್ಮಿ ಕೊಳ್ಳಲಾಗುವುದು.ಸಾರ್ವಜನಿಕರಿಗೆ ಮಲೇರಿಯಾ ಹಾಗೂ ಡೆಂಗ್ಯೂ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಬಗ್ಗೆ ಮಾಹಿತಿ, ಶಿಕ್ಷಣ ಹಾಗೂ ಸಂವಹನದ ಮುಖಾಂತರ ಪ್ರಚಾರ ನೀಡಲಾಗುವುದು.ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದರಿಂದ, ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಹಾಗೂ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆಯನ್ನು ನೀಡಲು ನಗರಸಭೆಯ ನಿಽಯಡಿ ರೂ.0.15 ಕೋಟಿ, ನಗರಸಭೆ ವ್ಯಾಪ್ತಿಯ ಬಿ.ಪಿ.ಎಲ್ ಕಾರ್ಡ್ದಾರರಿಗೆ ಅನುಕೂಲವಾಗುವಂತೆ ಶುಲ್ಕ ರಹಿತವಾಗಿ ಆ್ಯಂಬ್ಯುಲೆನ್ಸ್ ಸೇವೆ.
ಘನತ್ಯಾಜ್ಯ ವಿಲೇವಾರಿ,ನಿರ್ವಹಣೆ ಶೇ.100 ಅನುಷ್ಟಾನ: ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಪುತ್ತೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಹಸಿರು ನಗರವನ್ನಾಗಿಸಲು ಈಗಾಗಲೇ ಹಲವು ಹೊಸ ಯೋಜನೆಗಳೊಂದಿಗೆ ನಗರಸಭೆ ಹೆಜ್ಜೆಯನ್ನಿಟ್ಟಿದೆ.ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಿಂದ ಹಸಿ ಕಸ, ಒಣ ಕಸ ಹಾಗು ಅಪಾಯಕಾರಿ ಕಸವಾಗಿ ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸಲು ಈಗಾಗಲೇ ಕ್ರಮವಹಿಸಲಾಗಿದ್ದು ಶೇ.100ರಷ್ಟು ಅನುಷ್ಟಾನಗೊಳಿಸಲಾಗುವುದು. ಈ ಯೋಜನೆಗೆ ವಾಹನಗಳನ್ನು ಹಾಗೂ ಯಂತ್ರೋಪಕರಣಗಳನ್ನು ಖರೀದಿಸಲಾಗಿದ್ದು, ಹೆಚ್ಚಿನ ಅವಶ್ಯವಿರುವ ವಾಹನಗಳನ್ನು ಹಾಗೂ ಯಂತ್ರೋಪಕರಣಗಳನ್ನು ಖರೀದಿಸಲು ಕ್ರಮವಹಿಸಲಾಗಿದೆ. ಹಸಿ ಕಸ ಹಾಗು ಒಣ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಸ್ವಚ್ಛ ಪುತ್ತೂರು ಟ್ರಸ್ಟ್, ರೋಟರಿ ಕ್ಲಬ್ ಪೂರ್ವ ಇವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಈಗಾಗಲೇ ನಗರ ವ್ಯಾಪ್ತಿಯ ಒಣ ತ್ಯಾಜ್ಯವನ್ನು ಬೇರ್ಪಡಿಸಲು ಹಾಗೂ ವೈಜ್ಞಾನಿಕವಾಗಿ ಮರು ಬಳಕೆ ಮಾಡಲು ಮೊದಲನೇಯ ಹಂತದಲ್ಲಿ ಮೆಟೀರಿಯಲ್ ರಿಕವರಿ ಫೆಸಿಲಿಟಿ'ಯನ್ನು ತೆರೆಯಲಾಗಿದೆ.ಹಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಬಯೋಗ್ಯಾಸ್ ಸ್ಥಾವರವನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ
ಶೂನ್ಯತ್ಯಾಜ್ಯ ವಿಲೇವಾರಿ ಘಟಕ’ವಾಗಿ ಮಾಡಲು ಕ್ರಮವಹಿಸಲಾಗುವುದು. ಸ್ವಚ್ಛ ಭಾರತ್ ಮಿಷನ್ ಯೋಜನೆ ಸ್ವಚ್ಛ ಸರ್ವೇಕ್ಷಣ್' 2023 ಹಾಗೂ ತ್ಯಾಜ್ಯ ಮುಕ್ತ ನಗರವನ್ನಾಗಿಸಲು ಸಾರ್ವಜನಿಕರ ಸಹಭಾಗಿತ್ವ ಅತೀ ಅಗತ್ಯ. ಸ್ವಚ್ಛತೆಯಲ್ಲಿ ಪುತ್ತೂರು ನಗರವನ್ನು ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ಏರಿಸಲು ನಗರಸಭೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸುವುದು, ಪ್ರಸ್ತುತ 2023ನೇ ಸಾಲಿನಲ್ಲಿ ನಗರಸಭೆಯು ಗರ‍್ಬೆಜ್ ಫ್ರೀ ಸಿಟಿ (3 ಸ್ಟಾರ್) ಸ್ವಚ್ಛ ಸರ್ವೇಕ್ಷಣ್ 2023, ಹಾಗೂ ಓ.ಡಿ.ಎಫ್(ಬಯಲು ಶೌಚ ಮುಕ್ತ)ನಲ್ಲಿ ಭಾಗವಹಿಸಿದೆ. ಹಾಗೂ ಸ್ವಚ್ಛ ಸರ್ವೇಕ್ಷಣ ರ‍್ಯಾಂಕಿAಗ್‌ನಲ್ಲಿ ನಗರಸಭೆಯು 6ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಬಂದಿದೆ.
ಆಸ್ತಿ ತೆರಿಗೆ, ಕಟ್ಟಡ ಪರವಾನಗಿ, ಜನಸ್ಪಂದನ ತಂತ್ರಾಂಶ ಅಭಿವೃದ್ಧಿ: ಸಾರ್ವಜನಿಕರಿಗೆ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಲು ಅನೂಕೂಲವಾಗುವಂತೆ
ಇ-ಸ್ವೀಕೃತಿ’ ಎಂಬ ಶೀರ್ಷಿಕೆಯಡಿಯಲ್ಲಿ ತಂತ್ರಾಂಶವನ್ನು ಗಣಕೀಕರಣಗೊಳಿಸಲಾಗಿದೆ.ಸಾರ್ವಜನಿಕರು ಅನ್‌ಲೈನ್ ಮುಖಾಂತರ ತೆರಿಗೆಯನ್ನು ಪಾವತಿಸಲು ತಂತ್ರಾಂಶವನ್ನು ಉಪಯೋಗಿಸಬಹುದಾಗಿದೆ.ಸದರಿ ತಂತ್ರಾಂಶದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.ಸಾರ್ವಜನಿಕರಿಗೆ ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಜನಸ್ಪಂದನ' ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ಫೇಸ್ಬುಕ್, ಟ್ವಿಟರ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್, ವೆಬ್‌ಸೈಟ್, ಸ್ವಚ್ಛತಾ ಆ್ಯಪ್ ಹಾಗೂ ದೂರವಾಣಿ ಮುಖಾಂತರ ದೂರುಗಳನ್ನು ಸಲ್ಲಿಸಿ ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.ರಾಜ್ಯ ಸರ್ಕಾರವು
ನಿರ್ಮಾಣ್ -2′ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಕಟ್ಟಡ ಪರವಾನಗಿಯನ್ನು ಅನ್‌ಲೈನ್ ಮುಖಾಂತರ ಪಡೆಯಬಹುದಾಗಿದೆ. ಎಲ್ಲಾ ಪರವಾನಗಿಗಳನ್ನು ಡಿಜಿಟಲ್ ಸಹಿ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಾರ್ವಜನಿಕರು ತಂತ್ರಾಂಶವನ್ನು ಉಪಯೋಗಿಸಿ ವಿವಿಧ ಸೇವೆಗಳ ಮಾಹಿತಿಯನ್ನು ನಗರಸಭೆ ಕಾರ್ಯಾಲಯದ ವೆಬ್‌ಸೈಟ್ ಮುಖಾಂತರ ಪಡೆಯಬಹುದಾಗಿದೆ. ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಮಾಡಲಾಗಿರುವ ತಂತ್ರಾಂಶಗಳ ಕೈಪಿಡಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು.ನಗರಸಭಾ ವ್ಯಾಪ್ತಿಯ ಆಸ್ತಿಗಳನ್ನು ಗಣಕೀಕರಣಗೊಳಿಸುವ ಸಲುವಾಗಿ ಇ-ಆಸ್ತಿ' ತಂತ್ರಾಂಶ ಚಾಲ್ತಿಯಲ್ಲಿದ್ದು, ಸದ್ರಿ ತಂತ್ರಾಂಶದಲ್ಲಿ ನಾಗರಿಕರು ಗಣಕೀಕರಣಗೊಳಿಸಿಕೊಳ್ಳಲು ಕೋರಿದೆ. ಹಾಗೂ ಇ-ಸ್ವತ್ತು ತಂತ್ರಾAಶದ ಮೂಲಕ ನಗರಸಭಾ ವ್ಯಾಪ್ತಿಯ ಆಸ್ತಿ ತೆರಿಗೆಗೆ ಒಳಪಡುವ ಎಲ್ಲಾ ಆಸ್ತಿಗಳನ್ನು ಇ-ಸ್ವತ್ತು ಮೂಲಕ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ. ನಗರಸಭೆಯ ನೀರಿನ ಕರ, ಉದ್ದಿಮೆ ಪರವಾನಿಗೆ ಶುಲ್ಕದ ವಿವರವನ್ನು ಗಣಕೀಕರಣಗೊಳಿಸಲು ಕ್ರಮವಹಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
'ಜಲಸಿರಿ' 24*7 ನೀರು ಸರಬರಾಜು ಯೋಜನೆ: ದಿನದ 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರ್ಕಾರದ ಸಂಸ್ಥೆಯಾಗಿರುವ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ
ಜಲಸಿರಿ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಸಂಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.ನೀರಿನ ಶುದ್ಧೀಕರಣ ಘಟಕವನ್ನು 6.8ಎಮ್.ಎಲ್.ಡಿಯಿಂದ 15.0 ಎಮ್.ಎಲ್.ಡಿ ಗೆ ಹೆಚ್ಚಿಸಲಾಗುವುದು,ನಗರದ ವಿವಿಧ ಭಾಗಗಳಲ್ಲಿ ಪ್ರಸ್ತುತ ಇರುವ 4 ಓವರ್ ಹೆಡ್ ಟ್ಯಾಂಕ್‌ಗಳೊಂದಿಗೆ ಹೆಚ್ಚುವರಿ 6 ಸಂಖ್ಯೆಯ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಸಿಟಿ ಗುಡ್ಡೆಯಲ್ಲಿ ಪ್ರಸ್ತುತ 9.0ಲಕ್ಷ ಲೀಟರ್ ಸಾಮರ್ಥ್ಯದ ಜಿ.ಎಲ್.ಎಸ್.ಆರ್ ಬದಲಿಗೆ ಹೊಸದಾಗಿ 24 ಲಕ್ಷ ಲೀಟರ್ ಸಾರ್ಮಥ್ಯದ ಜಿ.ಎಲ್.ಎಸ್.ಆರ್ ನಿರ್ಮಿಸಲಾಗುತ್ತಿದೆ. ಸದರಿ ಯೋಜನೆಯಿಂದ ನಗರದ ಎಲ್ಲಾ ಭಾಗದ ಮನೆಗಳಿಗೆ ವಾರದ ಎಲ್ಲಾ ದಿನಗಳಲ್ಲಿಯೂ 24 ಗಂಟೆ ನೀರು ಸರಬರಾಜು ಮಾಡಲು ಕ್ರಮವಹಿಸಲಾಗುವುದು ಎಂದರು.
ನಗರದ ಟ್ರಾಫಿಕ್,ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ದಕ್ಷಿಣ ಕನ್ನಡ ಜಿಲ್ಲೆಯ ಎರಡನೇಯ ಪ್ರಮುಖ ನಗರವಾಗಿರುವ ಪುತ್ತೂರು ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ, ಇದರಿಂದ ವಾಹನಗಳ ದಟ್ಟಣೆಯೂ ಹೆಚ್ಚುತ್ತಿರುವುದು ಸಾಮಾನ್ಯವಾಗಿದೆ.ಸಾರ್ವಜನಿಕರಿಗೆ ವಾಹನ ದಟ್ಟಣೆ ಹಾಗೂ ವಾಹನಗಳ ಪಾರ್ಕಿಂಗ್ ಸಮಸ್ಯೆಯನ್ನು ಕಡಿಮೆಗೊಳಿಸಲು ನಗರಸಭೆಯ ವತಿಯಿಂದ ವಿವಿಧ ಪ್ರದೇಶಗಳಲ್ಲಿ ಜಾಗವನ್ನು ಗುರುತಿಸಿ ಸ್ವಾಧೀನ ಪಡಿಸಿಕೊಂಡು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮವಹಿಸಲಾಗುವುದು.ನಗರದ ವಿವಿಧ ಕಡೆಗಳಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ 11 ಸ್ಥಳಗಳಲ್ಲಿ ಬಸ್ಸು ನಿಲ್ದಾಣಗಳನ್ನು ನಿರ್ಮಿಸಲಾಗಿದೆ.ಬಾಕಿ ಕಡೆ ನಿರ್ಮಿಸಲು ಕ್ರಮವಹಿಸಲಾಗುವುದು.ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿರುವ ನಗರೋಥ್ಥಾನ ಯೋಜನೆಯಡಿಯಲ್ಲಿ ನಗರಸಭೆಯ ಅಭಿವೃದ್ಧಿಗಾಗಿ ರೂ. 30.00 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸದರಿ ಯೋಜನೆಯಯಲ್ಲಿ ಎಲ್ಲಾ 31 ವಾರ್ಡುಗಳಲ್ಲಿ ಬರುವ, ಆಯ್ದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳು. ಸಾರ್ವಜನಿಕರಿಗಾಗಿ ನಗರದ ವಿವಿಧ ಭಾಗಗಳಲ್ಲಿರುವ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳು. ಎಲ್ಲಾ 31 ವಾರ್ಡುಗಳಲ್ಲಿ ಆಯ್ದ ರಸ್ತೆಗಳಿಗೆ ಬೀದಿ ದೀಪ ಹಾಗೂ ಹೈಮಾಸ್ಟ್ ದೀಪಗಳ ಆಳವಡಿಕೆ ಕಾಮಗಾರಿ. ನಗರ ವ್ಯಾಪ್ತಿಯಲ್ಲಿ ಬರುವ ಆಟದ ಮೈದಾನ ಹಾಗೂ ಎನ್.ಎಸ್.ಕಿಲ್ಲೆ ಮೈದಾನದ ಅಭಿವೃದ್ಧಿ ಕಾಮಗಾರಿಗಳು.ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು. ನಗರಸಭೆಯ ಪ.ಜಾತಿ ಹಾಗು ಪ.ಪಂಗಡದವರ ಅಭಿವೃದ್ಧಿಗಾಗಿ ಹಾಗೂ ಸದರಿಯವರ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳು. ಪೌರಕಾರ್ಮಿಕರಿಗೆ ತಂಗಲು ನಗರಸಭೆಯ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯದ ನಿರ್ಮಾಣದ ಕಾಮಗಾರಿಗಳು.ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ.ಜಾತಿ, ಪ.ಪಂಗಡದವರ ಹಾಗು ಅಂಗವಿಕಲರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು.ವಿಕಲಚೇತನರ ಕಲ್ಯಾಣಕ್ಕಾಗಿ ದ್ವಿಚಕ್ರ ವಾಹನ ಹಾಗೂ ವೈಯುಕ್ತಿಕ ಸಹಾಯಧನ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳು. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವೈಯುಕ್ತಿಕ ಸಹಾಯಧನ ಹಾಗು ಅಭಿವೃದ್ಧಿ ಕಾಮಗಾರಿಗಳು.
ನಗರ ಹಸಿರೀಕರಣ, ಪರಿಸರ ಸಂರಕ್ಷಣೆ: ನಗರಸಭೆ ವ್ಯಾಪ್ತಿಯಲ್ಲಿ ಜಪಾನ್ ದೇಶದ ಮಿಯಾವಾಕಿ' ಮಾದರಿಯಲ್ಲಿ ಗಿಡ ಮರಗಳನ್ನು ನೆಡುವ ಬಗ್ಗೆ ಪ್ರಾಯೋಗಿಕವಾಗಿ ಬನ್ನೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕ್ರಮವಹಿಸಲಾಗುತ್ತಿದೆ. ಸದ್ರಿ ಕೆಲಸಕ್ಕೆ ರೋಟರಿ ಸಿಟಿ ಪುತ್ತೂರು ಇವರು ರೂ 1.ಲಕ್ಷ ದೇಣಿಗೆ ನೀಡಿದ್ದಾರೆ.ನಗರದ ವಿವಿಧ ಪ್ರದೇಶಗಳಲ್ಲಿ ಖಾಲಿ ಇರುವ ಜಾಗಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ನಗರಸಭಾ ವ್ಯಾಪ್ತಿಯ ವಿವಿಧ ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಹಾಗೂ ಉಳಿದ ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು.
ಪ್ಲಾಸ್ಟಿಕ್‌ಗೆ ಹಂತ ಹಂತವಾಗಿ ಪರ್ಯಾಯ ವ್ಯವಸ್ಥೆ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅಽಸೂಚನೆಯಂತೆ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಽಸಲಾಗಿದೆ. ಎಲ್ಲಾ ಉದ್ದಿಮೆದಾರರು ಹಾಗೂ ವಾಣಿಜ್ಯಗಳಲ್ಲಿ ಹಂತ ಹಂತವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲು ಕ್ರಮವಹಿಸಲಾಗುವುದು.ಈಗಾಗಲೇ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಲಭ್ಯವಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ವಿಲೇವಾರಿ ಮಾಡಲು ಕ್ರಮವಹಿಸಲಾಗಿದೆ.ಪುತ್ತೂರು ನಗರವನ್ನು ಪ್ರವಾಸಿ ತಾಣವಾಗಿಸಲು ಬಿರುಮಲೆ ಬೆಟ್ಟದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಅಭಿವೃದ್ಧಿ ಪಡಿಸಲಾಗುವುದು.ಬಾಲವನ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲಾಗುವುದು
ವಿಪಕ್ಷ ನಾಯಕ ಎಂಬುದು ಇಲ್ಲ: ನಗರಸಭೆಯಲ್ಲಿ ವಿಪಕ್ಷ ನಾಯಕ ಎಂಬುದು ಇಲ್ಲ. ನಾನು ಕಾಂಗ್ರೆಸ್ ಆಗಿರಬಹುದು.ವಿಪಕ್ಷ ನಾಯಕ ಎಂಬುದನ್ನು ಬಹಳಷ್ಟು ಹಿಂದಿನಿAದಲೇ ಹಾಕಿ ರೂಢಿ ಮಾಡಿಕೊಂಡು ಬರಲಾಗಿದೆ. ಯಾರದ್ದೋ ಹೇಳಿಕೆಯಂತೆ
ವಿಪಕ್ಷ ನಾಯಕ’ ಪದ ಬಂದಿದೆ.ಅದು ಪತ್ರಕರ್ತರು ಕೆಲವರಿಗೆ -ಫೇವರ್ ಮಾಡಿಕೊಂಡು ಬರೆದುಕೊಂಡದ್ದು ಎಂದು ಸದಸ್ಯ ಶಕ್ತಿ ಸಿನ್ಹಾ ಹೇಳಿದರು.
ಬಜೆಟ್-ಸದಸ್ಯರ ಅಭಿಪ್ರಾಯಗಳು: ಬಜೆಟ್ ಮಂಡನೆಯಾದ ಬಳಿಕ ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಶಶಿಕಲಾ ಸಿ.ಎಸ್, ಗೌರಿ ಬನ್ನೂರು, ಸುಂದರ ಪೂಜಾರಿ ಬಡಾವು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರತಿಯೊಬ್ಬರನ್ನೂ ಈ ಬಜೆಟ್ ತಲುಪಿದೆ.ಉಚಿತ ಆ್ಯಂಬುಲೆನ್ಸ್ ಸೇವೆ, ಸೈಕಲ್ ಪಾಥ್, ಕೆರೆ ಅಭಿವೃದ್ಧಿ, ಪರವಾನಿಗೆಗೆ 5 ವರ್ಷದ ಅವಕಾಶದೊಂದಿಗೆ ಉತ್ತಮ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಅಭಿನಂದನೆ ಸಲ್ಲಿಸಿದರು.
ಎಪಿಎಲ್ ಬಡವರಿಗೂ ಮನೆ ವ್ಯವಸ್ಥೆಯಾಗಬೇಕು: ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ಮಶಾನಗಳು ಬಳಕೆಯಾಗುತ್ತಿಲ್ಲ. ಹಾಗಾಗಿ ಕೆಲವು ಸ್ಮಶಾನಗಳಿಗೆ ಗ್ಯಾಸ್ ಮಾದರಿ ಸ್ಮಶಾನ ಮಾಡಬೇಕು ಮತ್ತು ನಗರಸಭೆ ಹಲವು ರಸ್ತೆಯಲ್ಲಿರುವ ಮೋರಿಗಳ ದುರಸ್ತಿಗೆ ಅನುದಾನ ಜಾಸ್ತಿ ಇಡುವ ಕುರಿತು ಪ್ರಸ್ತಾಪಿಸಿದರು. ಬಿಪಿಎಲ್‌ನವರಿಗೆ ಮನೆ ದುರಸ್ತಿಗೆ ಅವಕಾಶ ನೀಡಿದಂತೆ ಎಪಿಎಲ್‌ನಲ್ಲೂ ತೀರಾ ಕಡು ಬಡವರಿದ್ದಾರೆ. ಅಂಥವರನ್ನು ಗುರುತಿಸಿ ಅವರಿಗೂ ಮನೆ ವ್ಯವಸ್ಥೆ ಕಲ್ಪಿಸಬೇಕು. ದಾರಿ ದೀಪ ನಿರ್ವಹಣೆಯ ಜೊತೆಗೆ ಕಂಬ ಅಳವಡಿಸಲು ಸಹ ಅನುದಾನ ಇರಿಸಬೇಕು. ತೋಡುಗಳಿಗೆ ಅಲ್ಲಲ್ಲಿ ಚೆಕ್ ಡ್ಯಾಮ್ ಅಳವಡಿಸುವಲ್ಲಿ ಯೋಜನೆಯನ್ನು ಸೇರಿಸುವಂತೆ ವಿನಂತಿಸಿದರು. ನಗರಸಭಾ ಸದಸ್ಯರಾದ ಶೀನಪ್ಪ ನಾಯ್ಕ, ಯೂಸುಫ್ ಡ್ರೀಮ್, ವಸಂತ ಕಾರೆಕ್ಕಾಡು, ನವೀನ್ ಪೆರಿಯತ್ತೋಡಿ, ಪ್ರೇಮ್ ಕುಮಾರ್, ದೀಕ್ಷಾ ಪೈ, ಪ್ರೇಮಲತಾ ಜಿ ನಂದಿಲ, ಮಮತಾ ರಂಜನ್, ಮೋಹಿನಿ ವಿಶ್ವನಾಥ್, ಲೀಲಾವತಿ ಅಣ್ಣು ನಾಯ್ಕ, ರೋಬಿನ್ ತಾವ್ರೋ, ಇಂದಿರಾ ಪಿ, ರೋಹಿಣಿ ಕೇಶವ ಪೂಜಾರಿ, ಪೂರ್ಣಿಮ, ಕೆ.ಫಾತಿಮತ್ ಝೋರಾ, ಪದ್ಮನಾಭ ನಾಯ್ಕ ಪಡೀಲು, ಕೆ.ಸಂತೋಷ್ ಕುಮಾರ್, ಯಶೋಧಾ ಹರೀಶ್ ಪೂಜಾರಿ, ಇಂದಿರಾ ಪಿ, ಮನೋಹರ್ ಕಲ್ಲಾರೆ, ಅಭಿಯಂತರರಾದ ಕಚೇರಿ ಮೆನೇಜರ್ ಪಿಯೂಸ್ ಡಿಸೋಜ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮೀ, ಅಕೌಂಟೆAಟ್ ರವಿಂದ್ರ, ಲೆಕ್ಕಿಗ ಸಿ.ಆರ್ ದೇವಾಡಿಗ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್, ನೀರಿನ ವಿಭಾಗದ ವಸಂತ ಉಪಸ್ಥಿತರಿದ್ದರು.
ಉತ್ತಮ ಬಜೆಟ್, ಅನುಷ್ಠಾನ ಮಾಡಬೇಕು
ಬಜೆಟ್ ಘೋಷಣೆ ಮಾಡಿದ ಹಾಗೆ ಅದರ ಅನುಷ್ಠಾನ ಆಗಬೇಕು, ಕಳೆದ ಬಜೆಟ್‌ನಲ್ಲಿ ಕೇವಲ ಶೇ.58 ಮಾತ್ರ ಅನುಷ್ಠಾನ ಆಗಿದೆ. ಇದರ ಪೂರ್ಣ ಅನುಷ್ಠಾನಕ್ಕಾಗಿ ಪ್ರಥಮವಾಗಿ ಸಿಬ್ಬಂದಿಗಳ ಕೊರತೆ ನೀಗಿಸಬೇಕು. ನಮ್ಮ ಬಜೆಟ್ ಅನುಷ್ಠಾನ ಪೂರ್ಣ ಮಟ್ಟದಲ್ಲಿ ಆಗುತ್ತದೆ. ಇದರ ಜೊತೆಗೆ ಎಡಿಬಿಯಿಂದ ಬಹಳ ಹಿಂದೆಯೇ 24 ಗಂಟೆ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆದರೆ ಅದು ಫೇಲ್ ಆಗಿತ್ತು. ಇದೀಗ ಜಲಸಿರಿ ಯೋಜನೆ 24 ಗಂಟೆ ನೀರು ಕೊಡುವ ಭರವಸೆ ಭರವಸೆಯಲ್ಲೇ ಉಳಿಯಬಾರದು.
ಶಕ್ತಿ ಸಿನ್ಹ, ಸದಸ್ಯರು ನಗರಸಭೆ ಪುತ್ತೂರು
ಇಲ್ಲಿನ ತನಕ ಏನೇನು ಬಜೆಟ್ ಮಾಡಿದ್ದೇವೋ ಅದನ್ನು ಕಾರ್ಯರೂಪಕ್ಕೆ ತಂದಿದ್ದೇವೆ.ಏನೇನು ಯೋಜನೆ, ಸಾರ್ವಜನಿಕ ಮೂಲಭೂತ ಸೌಕರ್ಯವಿದೆಯೋ ಅದನ್ನು ಅಡಳಿತ-ವಿರೊಧ ಪಕ್ಷ ಎಂದು ಯಾವುದೇ ಭೇದಭಾವ ಮಾಡದೆ ಎಲ್ಲರಿಗೂ ಸಮಾನ ರೀತಿಯಲ್ಲಿ ಅನುದಾನ ಹಂಚಲಾಗುತ್ತದೆ.2023-24ನೇ ಸಾಲಿನ ಮುಂಗಡ ಪತ್ರದಲ್ಲಿ ನಮ್ಮ ಆಡಳಿತದ ಸಮಯದಲ್ಲಿ ನಿರೀಕ್ಷೆ ಇಟ್ಟುಕೊಂಡಿರುವ ಆದಾಯಗಳಿಂದ ಮೂಲಭೂತ ಸೌಕರ್ಯಗಳಾದ ದಾರಿದೀಪ, ರಸ್ತೆ ನಿರ್ವಹಣೆ, ಚರಂಡಿ ರಚನೆ, ಕುಡಿಯುವ ನೀರು ಸೌಲಭ್ಯ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ನೂತನ ಕಚೇರಿ ಕಟ್ಟಡ ನಿರ್ಮಾಣ,ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಕಛೇರಿಗೆ ಸಂಬAಽಸಿದ ವೆಚ್ಚಗಳಿಗೆ ಹಾಗು ಇನ್ನಿತರ ವೆಚ್ಚಗಳಿಗೆ ಆರಂಭದ ಶುಲ್ಕ ಒಳಗೊಂಡAತೆ ಒಟ್ಟು ರೂ.60.88 ಕೋಟಿ ಹಂಚಿಕೆ ಮಾಡಲಾಗಿದೆ.2021-22ನೇ ಬಜೆಟ್‌ನಲ್ಲಿ ಹೆಚ್ಚು ಖರ್ಜಾಗದೆ ಇರುವುದನ್ನು 2022-23ನೇ ಬಜೆಟ್‌ಗೆ ಸೇರಿಸಲಾಗಿತ್ತು.ಹಾಗಾಗಿ 2022-23ನಲ್ಲಿ 77 ಲಕ್ಷ ಮಿಗತೆ ಬಜೆಟ್ ಆಗಿತ್ತು.ಆ ಸಂದರ್ಭ ಬಜೆಟ್‌ನ್ನು ಸದುಪಯೋಗ ಮಾಡಿಕೊಂಡಿದ್ದರಿAದ ಉಳಿಕೆಯಾಗಿಲ್ಲ.ಹಾಗಾಗಿ ಈ ಬಾರಿ ಕ್ರಮಬದ್ಧವಾಗಿ ಬಜೆಟ್ ಮಾಡಲಾಗಿದೆ.ಬಜೆಟ್ ಯೋಜನೆಯಲ್ಲಿ ಹಾರಾಡಿ ರೈಲ್ವೇ ರಸ್ತೆ ಅಭಿವೃದ್ಧಿ, ಕಳೆದ ವರ್ಷ ಸರಕಾರಕ್ಕೆ ಒತ್ತಡ ತಂದು ಹತ್ತು ಲೋರ‍್ಸ್, 30 ಮಂದಿ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿದ್ದೇವೆ.ಇಂಜಿನಿಯರ್ ಕೊರತೆ ಕಂಡಾಗ ಎಡಬ್ಲ್ಯೂಇ, ಎ,ಇ, ಮೆನೇಜರ್ ಸಹಿತ ಹಲವು ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿದ್ದೇವೆ ಇವೆಲ್ಲವನ್ನು ಬಜೆಟ್‌ನ ಯೋಜನೆಯಲ್ಲಿ ನಮೂದಿಸಿಲ್ಲ. ಮುಂದೆ ನಗರಭೆ ವಾರ್ಡ್ಗಳಲ್ಲಿ ಹಂಚಿಕೆ ಮಾಡಿಕೊಟ್ಟ ಅನುದಾನದಲ್ಲಿ ತಮ್ಮ ವಾರ್ಡ್ಗಳ ಸಮಸ್ಯೆಗಳಿಗೆ ಸದಸ್ಯರು ಪ್ರಥಮ ಆದ್ಯತೆ ನೀಡಿ ಪಟ್ಟಿ ಮಾಡಿ ಕೊಡಬೇಕು.
ಕೆ.ಜೀವಂಧರ್ ಜೈನ್, ಅಧ್ಯಕ್ಷರು ನಗರಸಭೆ ಪುತ್ತೂರು
ನಗರಸಭೆಯ ಆಡಳಿತದಲ್ಲಿ ಸುಧಾರಣೆಗಳು
- ಉದ್ದಿಮೆ ಯಾ ವ್ಯಾಪಾರ ಪರವಾನಗಿಯ ಬೈಲಾಗಳನ್ನು ಸಿದ್ಧಪಡಿಸುವುದು
- ಉದ್ದಿಮೆದಾರರು ಹಾಗೂ ವರ್ತಕರ ಸಂಘದೊಂದಿಗೆ ಚರ್ಚಿಸಿ ಉದ್ದಿಮೆಯ ಸ್ವರೂಪಕ್ಕೆ ಸಂಬಂಧಿಸಿದಂತೆ ಶುಲ್ಕ ಹಾಗೂ ಘನತ್ಯಾಜ್ಯ ನಿರ್ವಹಣಾ ಶುಲ್ಕವನ್ನು ಜಾರಿಗೊಳಿಸಲು ಕ್ರಮವಹಿಸುವುದು.
- ಸಣ್ಣ, ಮಧ್ಯಮ ಹಾಗೂ ದೊಡ್ಡ ವ್ಯಾಪಾರಿಗಳಿಗೆ ಶುಲ್ಕ ಪಾವತಿಯಲ್ಲಿ ಆಗುತ್ತಿರುವ ತೊಂದರೆಯನ್ನು ಕಡಿಮೆಗೊಳಿಸುವುದು.
- ಜಾಹೀರಾತು ತೆರಿಗೆ ಹಾಗೂ ಇದಕ್ಕೆ ಸಂಬಂಧಿಸಿದ ಬೈಲಾಗಳನ್ನು ಸಿದ್ಧಪಡಿಸಲಾಗುವುದು.
- ಅನಧಿಕೃತ ಜಾಹೀರಾತು, ಬ್ಯಾನರ್ ಹಾಗು ಇತರೇ ಪ್ರಚಾರವನ್ನು ತಡೆಯಲು ಹಾಗೂ ಅನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಅನ್‌ಲೈನಲ್ಲಿಯೇ ಅನುಮತಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
- ನಗರ ಪ್ರದೇಶವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕಟ್ಟಡ ಹಾಗೂ ವಾಣಿಜ್ಯಗಳು ಹೆಚ್ಚುತ್ತಿರುವುದರಿಂದ ನಗರದ ಭವಿಷ್ಯದ ದೃಷ್ಠಿಯಿಂದ ಕಟ್ಟಡ ಪರವಾನಗಿಯ ಬೈಲಾಗಳನ್ನು ಸಿದ್ದಪಡಿಸಲಾಗುವುದು.
- ಸರ್ಕಾರದ ಸುತ್ತೋಲೆಗಳು, ಪುತ್ತೂರು ನಗರ ಯೋಜನಾ ಪ್ರಾಧಿಕಾರ, ನಗರದಲ್ಲಿರುವ ಸಂಘ ಸಂಸ್ಥೆಗಳ ಸಲಹೆಯನ್ನು ಪಡೆದು ಜಾರಿಗೊಳಿಸಲು ಕ್ರಮ.
- ನಗರಸಭೆಯ ಪೌರಕಾರ್ಮಿಕರು, ಚಾಲಕರು ಹಾಗೂ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಬನ್ನೂರು ಸಂಸ್ಕರಣಾ ಘಟಕದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ.ನಗರ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹದ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.
- ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಖಾಯಂ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಿಸಲು ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ರೂ 1.23 ಕೋಟಿ ಕಾದಿರಿಸಲಾಗಿದೆ.
- ಎಲ್ಲಾ ಪೌರಕಾರ್ಮಿಕರು ಹಾಗೂ ಚಾಲಕರಿಗೆ ವರ್ಷಕ್ಕೆ 3 ಬಾರಿ ಆರೋಗ್ಯ ತಪಾಸಣೆಯನ್ನು ಹಾಗೂ ಎಲ್ಲರಿಗೂ ಆರೋಗ್ಯ ವಿಮೆ.
- ನಗರಸಭೆಯಲ್ಲಿ ಖಾಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಹಂತದಲ್ಲಿ ಕ್ರಮವಹಿಸುವುದು.
- ನೇರ ಪಾವತಿಯಲ್ಲಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಲೋರ‍್ಸ್, ಹೆಲ್ರ‍್ಸ್ಗಳ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ಪಾವತಿಯಡಿ ಭರ್ತಿ ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುವುದು