ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ. ಅಬೂಬಕ್ಕರ್ ಹಾಜಿ ನಿಧನ

0

ರಾಮಕುಂಜ: ಕೊಯಿಲ ಗ್ರಾಮದ ಆತೂರು ಎಲ್ಯಂಗ ನಿವಾಸಿ, ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ. ಅಬೂಬಕ್ಕರ್ (77ವ.)ರವರು ಕೆಲ ದಿನಗಳ ಅನಾರೋಗ್ಯದಿಂದ ಮಾ. 5ರಂದು ರಾತ್ರಿ ತನ್ನ ಮನೆಯಲ್ಲಿ ನಿಧನ ಹೊಂದಿದರು.

1978ರಿಂದ 1983ರ ತನಕ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ತದ ನಂತರ 1986ರಿಂದ 1991ರ ತನಕ ಆಲಂಕಾರು ಮಂಡಲ ಪಂಚಾಯಿತಿ ಸದಸ್ಯರಾಗಿ ಮತ್ತು ಇದೇ ಸಂದರ್ಭದಲ್ಲಿ ಕೊಯಿಲ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕರಾಗಿ, ಕೊಯಿಲ ಮತ್ತು ಸಬಳೂರು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಕಾರಣೀಭೂತರಾಗಿದ್ದರು.

ಭಾರತ್ ಬೀಡಿ ಗುತ್ತಿಗೆದಾರರಾಗಿದ್ದ ಇವರು ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ‍್ಯದರ್ಶಿಯಾಗಿ, ಮಸೀದಿ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಆತಿಕಾ, ಪುತ್ರರಾದ ಕೆ.ಎ. ಯಾಹ್ಯಾ, ಕೆ.ಎ. ಅಬ್ದುಲ್ ಅಝೀಝ್, ಪುತ್ರಿಯರಾದ ಮೈಮೂನ, ಜುಬೈದಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here