ಪುತ್ತೂರು: ಬದ್ರಿಯಾ ಜುಮಾ ಮಸೀದಿ ಪರ್ಪುಂಜ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಝೈನುಲ್ ಆಬಿದೀನ್ ತಂಙಳ್ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಮಾಅತ್ ಖತೀಬ್ ಬದ್ರುದ್ದೀನ್ ರಹ್ಮಾನಿ ಪ್ರಾರ್ಥನೆ ನೇರವೆರಿಸಿದರು. ಕಾರ್ಯದರ್ಶಿ ಹಂಝು ಲೆಕ್ಕಪತ್ರ ವಾಚಿಸಿದರು. ನಂತರ 2023-24ನೇ ಸಾಲಿನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನವಾಝ್ ಸುಪ್ರಿಂ ಹಾಗೂ ಕಾರ್ಯದರ್ಶಿಯಾಗಿ ಹಂಝ ಎಂ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶರಿಫ್ ಪಿ.ಪಿ, ಜೊತೆ ಕಾರ್ಯದರ್ಶಿಯಾಗಿ ನಝೀರ್ ಪಿ, ಲೆಕ್ಕ ಪರಿಶೋಧಕರಾಗಿ ಸಿರಾಜ್ರವನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಮಹಮ್ಮದ್ ಜೆಜೆಬಿ, ಶರೀಫ್ ಹಾಜಿ, ಹನೀಫ್ ಭಾರತ್, ಅಬೂಬಕ್ಕರ್ ನೆಲ್ಯಾಡಿ, ರಶೀದ್ ಕೆ, ಸಿದ್ದಿಕ್ ಸೌದಿ, ಅಬ್ದುಲ್ ರಹಿಮಾನ್, ಹಸೈನಾರ್, ಮೂಸ ಪಿ.ಎಂ, ಅಬೂಬಕ್ಕರ್ ಜೆ.ಪಿ, ಅಶ್ರಫ್ ಪಿ.ಬಿ ಅವರನ್ನು ಆಯ್ಕೆ ಮಾಡಲಾಯಿತು.ಮುಹಝ್ಝಿನ್ ಅಬ್ದುಲ್ ರಹಿಮಾನ್ ಝುಹ್ರಿ ಉಪಸ್ಥಿತರಿದ್ದರು.