ಕೆರೆಯ ಅಭಿವೃದ್ಧಿಯಿಂದ ಜಲಸಮೃದ್ಧಿ- ಸವಣೂರು ಸೀತಾರಾಮ ರೈ
ಪುತ್ತೂರು: ಕೆರೆಯನ್ನು ಅಭಿವೃದ್ಧಿ ಮಾಡುವುದರಿಂದ ಪರಿಸರದಲ್ಲಿ ನೀರಿನ ಹರಿವು ಜಾಸ್ತಿ ಆಗುವುದರ ಜೊತೆಗೆ ಜಲ ಸಮೃದ್ಧಿ ಅಗುತ್ತದೆ. ಇಂಥ ಪುಣ್ಯ ಕಾರ‍್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ.ವಿರೇಂದ್ರ ಹೆಗಡೆಯವರು ಕೈಜೋಡಿಸುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಹೇಳಿದರು.
ಮಾ.9 ರಂದು ಸವಣೂರು ಕೊಂಬಕೆರೆಯಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಇವರ ಅರ್ಥಿಕ ಸಹಕಾರದಲ್ಲಿ ಸವಣೂರು ಗ್ರಾಮ ಪಂಚಾಯತ್, ಕೆರೆ ಅಭಿವೃದ್ಧಿ ಸಮಿತಿ ಕೊಂಬಕೆರೆ ಸವಣೂರು ಇವರ ಸಹಯೋಗದಲ್ಲಿ ಯೋಜನೆಯ 523 ನೇ ನಮ್ಮೂರು ನಮ್ಮ ಕೆರೆ ಕಾರ‍್ಯಕ್ರಮದ ಕೆರೆ ಹೂಳೆತ್ತುವ ಕಾರ‍್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ, ಮಾತನಾಡಿ ಸವಣೂರು ಭಾಗದಲ್ಲಿ ಇಂಥ ಕೆರೆಯ ಅಭಿವೃದ್ಧಿಗೆ ನಾನು ಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.
ಎಲ್ಲರೂ ಪೂರ್ಣ ಸಹಕಾರವನ್ನು ನೀಡಬೇಕು- ರಾಜೀವಿ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿರವರು ಮಾತನಾಡಿ ಕೊಂಬಕೆರೆಯ ಅಭಿವೃದ್ಧಿ ಸವಣೂರು ಗ್ರಾಮ ಪಂಚಾಯತ್‌ನಿಂದ ಪೂರ್ಣ ಸಹಕಾರವನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಸಹಕಾರವನ್ನು ನೀಡಬೇಕು ಎಂದು ಹೇಳಿದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಿರ್ದೇಶಕ ಪ್ರವೀಣ್‌ಕುಮಾರ್, ಸವಣೂರು ಗ್ರಾ.ಪಂ. ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಸ.ಪ.ಪೂರ್ವ ಕಾಲೇಜಿನ ಕಟ್ಟಡ ಸಮಿತಿ ಅಧ್ಯಕ್ಷ ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ, ಕೊಂಬಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ, ಉಪಾಧ್ಯಕ್ಷ ನಾರಾಯಣ ಗೌಡ ಪೂವ, ಕೋಶಾಧಿಕಾರಿ ಮಹೇಶ್ ಕೆ.ಸವಣೂರು, ಯೋಜನೆಯ ಸವಣೂರು ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡರವರು ಉಪಸ್ಥಿತರಿದ್ದರು.
ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರು ಗ್ರಾ.ಪಂ, ಆಭಿವೃದ್ಧಿ ಅಧಿಕಾರಿ ಮನ್ನಥ ಅಜಿರಂಗಳ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಕಾರ‍್ಯಕ್ರಮ ನಿರೂಪಿಸಿದರು.
ಶಿವ ಭಟ್ ಪುಣ್ಚಪ್ಪಾಡಿರವರು ಪೂಜಾವಿಧಿ ವಿಧಾನವನ್ನು ನಡೆಸಿಕೊಟ್ಟರು.
ಸಮಾರಂಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರುಗಳಾದ ತೀರ್ಥರಾಮ ಕೆಡೆಂಜಿ, ಸತೀಶ್ ಅಂಗಡಿಮೂಲೆ, ಅಬ್ದುಲ್‌ರಜಾಕ್ ಕೆನರಾ, ಚಂದ್ರಾವತಿ ಎಸ್ ಸುಣ್ಣಾಜೆ, ತಾರಾನಾಥ ಬೊಳಿಯಾಲ, ಜಯಶ್ರೀ ಕುಚ್ಚೆಜಾಲು, ಯಶೋಧಾ ನೂಜಾಜೆ, ಸುಂದರಿ ಬಂಬಿಲ, ಸಿಬ್ಬಂಧಿಗಳಾದ ಪ್ರಮೋದ್ ಕುಮಾರ್ ರೈ ನೂಜಾಜೆ, ಯತೀಶ್ ಕೊಂಬಕೆರೆ, ಸವಣೂರು ಸಿ.ಎ, ಬ್ಯಾಂಕ್ ಉಪಾದ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಉದ್ಯಮಿ ರಾಜಾರಾಮ್ ಪ್ರಭು ಅಶ್ವಿನಿ ಫಾರ್ಮ್, ಸವಣೂರು ಸ.ಪ.ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ ಎನ್‌ಪಿ, ಪ್ರೌಢಶಾಲಾ ಮುಖ್ಯ ಗುರು ರಘು ಬಿ.ಆರ್, ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಉಪಾಧ್ಯಕ್ಷ ಗೋಪಾಲಕೃಷ್ಣ ಗೌಡ, ನಿರ್ದೇಶಕ ಚೆನ್ನಪ್ಪ ಗೌಡ ಬುಡನಡ್ಕ, ಶ್ರೀಧರ್ ಇಡ್ಯಾಡಿ ನಿವೃತ್ತ ಶಿಕ್ಷಕ ಮೋನಪ್ಪ ನಾಯ್ಕ್ ಕೊಂಬಕೆರೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕೃಷಿ ಮೇಲ್ವಿಚಾರಕಿ ರಮ್ಯ, ವಲಯಾ ಮೇಲ್ವಿಚಾರಕಿ ಹರ್ಷ, ಸೇವಾ ಪ್ರತಿನಿಧಿಗಳು, ಯೋಜನೆಯ ಇಂಜಿಯರ್ ಭರತ್ ಗೌಡ, ಜಲಜೀವನ್ ಇಂಜಿನಿಯರ್ ಅಶ್ವಿನ್, ಗುತ್ತಿಗೆದಾರರಾದ ಗಿರೀಶ್ ಮೆದು, ಪ್ರಜ್ವಲ್ ಕೆ.ಆರ್ ಕೋಡಿಬೈಲು, ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.
ಸವಣೂರು ಕೊಂಬಕೆರೆ ಸಮಗ್ರ ಅಭಿವೃದ್ಧಿ- ಪ್ರವಾಸಿಧಾಮ
ಸವಣೂರು ಕೊಂಬಕೆರೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿಗೆ 50 ಲಕ್ಷ ರೂ ಅನುದಾನಕ್ಕೆ ಬರೆಯಲಾಗಿದೆ. ಕೊಂಬಕೆರೆಯಲ್ಲಿ 2 ಎಕ್ರೆ ಜಾಗ ಇದ್ದು, ಒಂದು ಎಕ್ರೆ ಸ್ಥಳದಲ್ಲಿ ಕೆರೆ ಅಭಿವೃದ್ಧಿ ಮತ್ತು ಒಂದು ಎಕ್ರೆ ಸ್ಥಳದಲ್ಲಿ ಪ್ರವಾಸಿಧಾಮ ನಿರ್ಮಾಣ ಮಾಡಲಾಗುವುದು. ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3.50 ಲಕ್ಷ ರೂ ಮತ್ತು ಪುತ್ತೂರು ರೋಟರಿ ಈಸ್ಟ್‌ನಿಂದ 25 ಸಾವಿರ ರೂ, ಅನುದಾನ ದೊರೆತಿದೆ. ಸುಮಾರು ಒಂದು ಕೋಟಿ ರೂ, ವೆಚ್ಚದ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ಕೊಂಬಕೆರೆಯ ಪಕ್ಕ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ 400 ಮೀಟರ್‌ನ ಸುಸಜ್ಜಿತವಾದ ಕ್ರೀಡಾಂಗಣ ಭರದಿಂದ ನಿರ್ಮಾಣವಾಗುತ್ತಿದೆ.
ಗಿರಿಶಂಕರ್ ಸುಲಾಯ ದೇವಸ್ಯ- ಅಧ್ಯಕ್ಷರು ಕೊಂಬಕೆರೆ ಅಭಿವೃದ್ಧಿ ಸಮಿತಿ
ಧರ್ಮಸ್ಥಳ ಗ್ರಾ.ಯೋಜನೆಯಿಂದ ಕೊಂಬಕೆರೆ ಅಭಿವೃದ್ಧಿಗೆ 3.50 ಲಕ್ಷ ರೂ ಅನುದಾನ ನೀಡಲಾಗಿದ್ದು, ಗ್ರಾ.ಪಂ ಮತ್ತು ಊರವರ ಸಹಕಾರದಿಂದ ಕೆರೆಯನ್ನುಅಭಿವೃದ್ಧಿ ಪಡಿಸಲಾಗುವುದು
– ಮೇದಪ್ಪ ಗೌಡ -ಯೋಜನಾಧಿಕಾರಿ. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕಡಬ ತಾಲೂಕು