ಅರಣ್ಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ,ಕೊಲೆ ಬೆದರಿಕೆಯೊಡ್ಡಿದ ಆರೋಪ – ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲದಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು

0


ಪುತ್ತೂರು: ನೆಲ್ಯಾಡಿ ಪರಿಸರದಲ್ಲಿ ಇತ್ತೀಚೆಗೆ ಆನೆ ದಾಳಿಯಿಂದ ಇಬ್ಬರು ನಾಗರಿಕರು ಮೃತ ಪಟ್ಟ ವಿಚಾರದಲ್ಲಿ ಫೆ.23 ರಂದು ಆನೆ ಹಿಡಿಯುವ ಕೆಲಸದಲ್ಲಿ ಒಂದು ಆನೆಯನ್ನು ಹಿಡಿದು ದುಬಾರೆ ಗೆ ಕಳುಹಿಸುತ್ತಿರುವ ವೇಳೆ ಕೆಲವು ಆರೋಪಿಗಳು ಅರಣ್ಯ ಇಲಾಖೆ ಹಾಗು ಪೊಲೀಸ್ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ,ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಅಡ್ಡಿಪಡಿಸಿ ಕೊಲೆಬೆದರಿಕೆ ಒಡ್ಡಲಾಗಿದೆ ಎಂದು ಅರೋಪಿಸಿ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಅರೋಪಿಗಳಾದ ಯೋಗೀಶ್ ಆಲಿಯಾಸ್ ಯಶೋಧರ ,ಉಮೆಶ ಯು ,ಭರತ್ ಅಲಿಯಾಸ್ ಭರತೇಶ್ ಬಿ ಹಾಗು ಸತ್ಯಪ್ರಿಯರವರು ತಲೆಮರೆಸಿಕೊಂಡಿದ್ದರು. ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮಿನು ಅರ್ಜಿಯನ್ನು ಸ್ವಿಕರಿಸಿ ಮಾ.17 ರಂದು ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ರವರು ಆರೋಪಿಗಳಿಗೆ ಷರತ್ತುಬದ್ಧ ಜಾಮಿನು ಆದೇಶ ನೀಡಿರುತ್ತಾರೆ .ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ ಯಂ ವೆಂಕಪ್ಪ ಗೌಡ , ಚಂಪ ವಿ ಗೌಡ ,ಹಾಗು ರಾಜೇಶ್ ಬಿಜಿ ರವರು ವಾದಿಸಿರುತ್ತಾರೆ.

LEAVE A REPLY

Please enter your comment!
Please enter your name here