ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆಯಲ್ಲಿ ಶ್ರೀ ಬ್ರಹ್ಮ ಆದಿಮೊಗೇರ್ಕಳ ಮತ್ತು ಶ್ರೀ ಚಾಮುಂಡೇಶ್ವರೀ ಅಮ್ಮನವರ ಸೇವಾ ಸಮಿತಿಯ ವತಿಯಿಂದ 3ನೇ ವರ್ಷದ ನೇಮೋತ್ಸವ ಮಾ.25 ಮತ್ತು 26ರಂದು ನಡೆಯಲಿದೆ.
ಮಾ.25ರಂದು ಬೆಳಿಗ್ಗೆ ಸಾನಿಧ್ಯಗಳಿಗೆ ಕಲಶ ಅಭಿಷೇಕ, ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಗೊನೆ ಮುಹೂರ್ತ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗುಳಿಗ ದೈವದ ನೇಮೋತ್ಸವದ ಬಳಿಕ ಮೊಗೇರ್ಕಳ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9.30ಕ್ಕೆ ಮೊಗೇರ್ಕಳ ಗರಡಿ ಮತ್ತು ರಾತ್ರಿ 11.30ಕ್ಕೆ ತನ್ನಿಮಾಣಿಗ ಗರಡಿ ಇಳಿಯುವ ಕಾರ್ಯಕ್ರಮ ನಡೆಯಲಿದೆ. ಮಾ.26ಕ್ಕೆ ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಕಳೆದ 40 ವರ್ಷಗಳಿಂದ ಆರಾಧನೆ ಮಾಡಿಕೊಂಡು ಬಂದು ಜೀರ್ಣೋದ್ದಾರಗೊಂಡು 3ನೇ ವರ್ಷದ ನೇಮೋತ್ಸವ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ಶ್ರೀ ಕೊರಗಜ್ಜ ದೈವಕ್ಕೆ ಅಗೇಲು ಸೇವೆ ನಡೆಯುತ್ತದೆ. ವರ್ಷದ ಜನರಿಯಲ್ಲಿ ಬರುವ ಮಕರ ಸಂಕ್ರಮಣ ಮತ್ತು ಎಪ್ರಿಲ್ ತಿಂಗಳ ಪುತ್ತೂರು ಜಾತ್ರೆಯ ಸಂದರ್ಭದ ಸಂಕ್ರಮಣದಂದು ತರಕಾರಿ ಅಗೇಲು ಸೇವೆ ನಡೆಯುತ್ತದೆ. ಅದೇ ರೀತಿ ಶ್ರೀ ಚಾಮುಂಡೇಶ್ವರಿ, ಚಾಮುಂಡಿ ಗುಳಿಗ, ಸ್ಥಳದ ಗುಳಿಗ ಕಲ್ಲುರ್ಟಿ, ಗುಳಿಗ ಪಂಜುರ್ಲಿ, ಮುಗೇರುಗಳು ಮತ್ತು ಕೊರಗಜ್ಜ ದೈವಗಳಿಗೆ ತಂಬಿಲ ಸೇವಾದಿಗಳು ನಡೆಯುತ್ತಿದೆ.