ಪುತ್ತೂರು: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ಟಿವಿಎಸ್ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ತಯಾರಿಸಿರುವ ಇಲೆಕ್ಟ್ರಿಕ್ ಸ್ಕೂಟರ್ ‘ಐ-ಕ್ಯೂಬ್’ನ್ನು ಮಾ.24ರಂದು ಟಿವಿಎಸ್ನ ಅಧಿಕೃತ ಡೀಲರ್ ಆಗಿರುವ ಬೊಳುವಾರಿನ ಏಸ್ ಮೋಟಾರ್ಸ್ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಶಾಸಕ ಸಂಜೀವ ಮಠಂದೂರು ಬಿಡುಗಡೆ ಮಾಡಿ ಶುಭಹಾರೈಸಿದರು.
ಪ್ರಥಮ ಗ್ರಾಹಕರಾಗಿದ್ದ ಇನ್ನರ್ ವ್ಹೀಲ್ ಕ್ಲಬ್ನ ಮಾಜಿ ಅಧ್ಯಕ್ಷ ಸಹನಾ ಭವನ್ ಶೇಟ್ರವರಿಗೆ ಶಾಸಕರು ಕೀಲಿ ಕೈ ಹಸ್ತಾಂತರಿಸಿದರು. ನಗರಸಭಾ ಸದಸ್ಯೆ ದೀಕ್ಷಾ ಪೈ, ಏಸ್ ಮೋಟಾರ್ಸ್ ವಾಹನದ ವಿಶೇಷತೆಗಳನ್ನು ತಿಳಿಸಿದರು. ಸಂಸ್ಥೆಯ ಸಿಬಂದಿಗಳು ಉಪಸ್ಥಿತರಿದ್ದರು.
ಟಿವಿಎಸ್ನ ಇಲೆಕ್ಟ್ರಿಕ್ ಸ್ಕೂಟರ್ ಐ-ಕ್ಯೂಬ್ ಮಾರುಕಟ್ಟೆಯಲ್ಲಿರುವ ಇತರ ಇ-ಸ್ಕೂಟರ್ಗಳಂತಲ್ಲ. ಈ ವಾಹನದ ವಿನ್ಯಾಸವು ಇತರ ಸ್ಕೂಟರ್ಗಳಂತೆ ಇದ್ದು ನೋಡಿದಾಕ್ಷಣ ಇಲೆಕ್ಟ್ರಿಕ್ ಸ್ಕೂಟರ್ ಎಂದು ಗೊತ್ತಾಗುವುದಿಲ್ಲ. ಮುಂಬದಿಯಲ್ಲಿ ಎಲ್ಇಡಿ ಡಿಎಲ್ಆರ್, ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್ಗಳನ್ನು ನೀಡಲಾಗಿದೆ. ಇವುಗಳ ವಿನ್ಯಾಸ ಉತ್ತಮವಾಗಿದೆ. ಟೇಲ್ ಲ್ಯಾಂಪ್ ಸಹ ಎಲ್ಇಡಿ ಆಗಿದ್ದು, ರಾತ್ರಿ ಚಾಲನೆ ವೇಳೆ ಈ ದೀಪಗಳನ್ನು ಬೆಳಗಿಸಲು ಹೆಚ್ಚು ವಿದ್ಯುತ್ ಅಗತ್ಯವಿಲ್ಲ.
ಬ್ಯಾಟರಿ ಮತ್ತು ಚಾರ್ಜಿಂಗ್:
ಐ-ಕ್ಯೂಬ್ನಲ್ಲಿ ಲಿ-ಅಯಾನ್ ಬ್ಯಾಟರಿ ಪ್ಯಾಕ್ ಇದೆ. ಒಮ್ಮೆ ಚಾರ್ಜ್ ಮಾಡಿದರೆ 100 ಕಿ.ಮೀ. ಕ್ರಮಿಸಬಹುದು. ಬ್ಯಾಟರಿಯು ಫುಲ್ ಚಾರ್ಜ್ ಆಗಲು 4.30 ಗಂಟೆ ತೆಗೆದುಕೊಳ್ಳುತ್ತದೆ. ಮನೆಗಳಲ್ಲಿ ಬಳಸುವ ಸಾಮಾನ್ಯ 6ಎ ಪ್ಲಗ್ ಪಾಯಿಂಟ್ ಬಳಸಿಯೂ ಈ ಸ್ಕೂಟರ್ಅನ್ನು ಚಾರ್ಜ್ ಮಾಡಬಹುದು. ಎಕ್ಸ್ಟೆನ್ಷನ್ ಕಾರ್ಡ್ ಬಳಸಿಯೂ ಚಾರ್ಜ್ ಮಾಡಿಕೊಳ್ಳಬಹುದು. ಐ-ಕ್ಯೂಬ್ನಲ್ಲಿ ಬ್ರೇಕಿಂಗ್ ರಿಜನರೇಷನ್ ವ್ಯವಸ್ಥೆ. ಹೀಗಾಗಿ ಚಾಲನೆ ವೇಳೆ ಥ್ರೋಟಲ್ ಇನ್ಪುಟ್ ಸ್ಥಗಿತಗೊಳಿಸಿದ ತಕ್ಷಣ, ರಿಜನರೇಷನ್ ಆರಂಭವಾಗುತ್ತದೆ. ಆಗ ಬ್ಯಾಟರಿ ಚಾರ್ಜ್ ಆಗುತ್ತದೆ. ಅಲ್ಲದೆ ರಿಜನರೇಷನ್ ವ್ಯವಸ್ಥೆಯು ಎಂಜಿನ್ ಬ್ರೇಕಿಂಗ್ನಂತೆಯೂ ಕೆಲಸ ಮಾಡುತ್ತದೆ. ಇದರಿಂದ ಸ್ಕೂಟರ್ನ ನಿಯಂತ್ರಣ ಉತ್ತಮವಾಗಿದೆ. ಚಾಲನೆ ವೇಳೆ ಸದ್ದೇ ಇಲ್ಲದಿರುವುದು ಈ ಮೋಟರ್ನ ಮತ್ತೊಂದು ವಿಶೇಷತೆಯಾಗಿದೆ.
ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಸ್ಕೂಟರ್ಗಳು ಚಾಲನೆ ವೇಳೆ ವೈನಿಂಗ್ ಸದ್ದು ಮಾಡುತ್ತಿದೆ. ಆದರೆ ಐ-ಕ್ಯೂಬ್ ಹಾಗಲ್ಲ. ಹೀಗಾಗಿ ಐ-ಕ್ಯೂಬ್ ಚಾಲನೆ ವೇಳೆ ಕಿರಿಕಿರಿಯಾಗುವುದಿಲ್ಲ. ಉತ್ತಮ ಶಕ್ತಿದಾಯಕ ವಾಹನವಾಗಿದ್ದು ನಗರದಲ್ಲಿ ಚಾಲನೆ ವೇಳೆ ಬೇರೆಲ್ಲಾ ದ್ವಿಚಕ್ರ ವಾಹನಗಳಿಗಿಂತ ವೇಗವಾಗಿ ಚಾಲನೆ ಮಾಡಲು ಸಾಧ್ಯವಿದೆ. ಅಲ್ಲದೆ ಡಬ್ಬಲ್ ರೈಡಿಂಗ್ನಲ್ಲೂ ವೇಗ ವರ್ಧನೆ ಮತ್ತು ಚಾಲನೆ ಉತ್ತಮವಾಗಿರಲಿದೆ.
ಇನ್ನಷ್ಟು ಫೀಚರ್ಗಳು:
ಟಿವಿಎಸ್ ಐ-ಕ್ಯೂಬ್ನ ಗಾತ್ರ, ಎತ್ತರ, ತೂಕ ಮತ್ತು ವ್ಹೀಲ್ ಬೇಸ್ ಸಾಮಾನ್ಯ ಸ್ಕೂಟರ್ಗಳಂತೆಯೇ ಇದೆ. ಹೀಗಾಗಿ ಚಾಲನೆ ಮತ್ತು ನಿಯಂತ್ರಣದಲ್ಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಎಲ್ಇಡಿ ಡಿಸ್ಪ್ಲೆ ಇದ್ದು, ಸ್ಮಾರ್ಟ್ ಕನೆಕ್ಟ್ ತಂತ್ರಜ್ಞಾನವಿದೆ. ಇದರ ಮೂಲಕ ಸ್ಮಾರ್ಟ್ ಫೋನ್ನ್ನು ಸ್ಕೂಟರ್ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಇನ್ಬಿಲ್ಟ್ ನ್ಯಾವಿಗೇಷನ್ ಇದೆ. ಹೀಗಾಗಿ ಚಾಲನೆ ವೇಳೆ ದಾರಿ ತಿಳಿಯಲು ನ್ಯಾವಿಗೇಷನ್ ಬಳಸಬೇಕಿಲ್ಲ. ಪಾರ್ಕಿಂಗ್ ಅಸಿಸ್ಟ್ ವ್ಯವಸ್ಥೆ ಇದ್ದು, ಇಕ್ಕಟ್ಟಾದ ಜಾಗಗಳಲ್ಲಿ ಸ್ಕೂಟರ್ ನಿಲ್ಲಿಸಲು ಇದು ನೆರವಾಗುತ್ತದೆ. ಈ ಮೋಡ್ನಲ್ಲಿ ಸ್ಕೂಟರ್ನ ವೇಗ 2 ಕಿ.ಮೀ. ದಾಟುವುದಿಲ್ಲ. ನಗರದಲ್ಲಿ ಎಲ್ಲೆಲ್ಲಿ ಚಾರ್ಜಿಂಗ್ ಕೇಂದ್ರಗಳಿವೆ ಎಂಬುದನ್ನೂ ಇದು ತೋರಿಸುತ್ತದೆ.
ಸರಕಾರದ ಸಬ್ಸಿಡಿ;
ಇಲೆಕ್ಟ್ರಿಕ್ ವಾಹನದ ಹೊರತಾಗಿ ಇತರ ವಾಹನ ಹೊಂದಿರುವವಿಗೆ ಟಿವಿಎಸ್ ಇಲೆಕ್ಟ್ರಿಕ್ ವಾಹನ ಖರೀದಿಗೆ ಸರಕಾರದಿಂದ ಸಬ್ಸಿಡಿ ದೊರೆಯುತ್ತಿದ್ದು ಸುಮಾರು ರೂ.50,000ದಷ್ಟು ಸಬ್ಸಿಡಿಯನ್ನು ಗ್ರಾಹಕರು ಪಡೆದುಕೊಳ್ಳಬಹುದು. ಈ ನೂತನ ವಾಹನದ ಪ್ರದರ್ಶನ ಹಾಗೂ ಟೆಸ್ಟ್ಡ್ರೈವ್ಗೆ ಬೊಳುವಾರಿನ ಶೋ ರೂಂನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಶೋ.ರೂಂ ಅಥವಾ ಮೊಬೈಲ್ 7760888333 ನಂಬರ್ನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.