ಮೇಲ್ಸೇತುವೆ ಅಗಲೀಕರಣ ಆದ ಬಳಿಕ ಚುತುಷ್ಪಥ ರಸ್ತೆಗೆ ಆದ್ಯತೆ- ಸಂಜೀವ ಮಠಂದೂರು
ಪುತ್ತೂರು: ನೆಹರುನಗರದಿಂದ ವಿವೇಕಾನಂದ ಕಾಲೇಜು ಸಂಪರ್ಕಿಸುವ ರಸ್ತೆಯಲ್ಲಿ ರೈಲ್ವೇ ಇಲಾಖೆಯ ಅನುದಾನ ರೂ.5.34 ಕೋಟಿ ವೆಚ್ಚದಲ್ಲಿ ರೈಲ್ವೇ ಮೇಲ್ಸೇತುವೆಯ ಅಗಲೀಕರಣ ಕಾಮಗಾರಿಗೆ ಮಾ.26ರಂದು ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದರು.
ರೈಲ್ವೇ ಮೇಲ್ಸೇತುವೆಯ ಬಳಿ ತೆಂಗಿನ ಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಮ್ಮ ಉದ್ದೇಶ ಇರುವುದು ಈ ರಸ್ತೆ ಮುಂದೆ ಚತುಷ್ಪಥ ರಸ್ತೆಯಾಗಬೇಕು. ಈ ನಿಟ್ಟಿನಲ್ಲಿ ವಿವೇಕಾನಂದ ನರೇಂದ್ರದ ಮುಂದಿರುವ ಚತುಷ್ಪಥ ರಸ್ತೆಯಂತೆ ನೆಹರುನಗರ ದಿಂದ ವಿವೇಕಾನಂದ ಕಾಲೇಜು ಆಗಿ ಉಪ್ಪಿನಂಗಡಿ ಸಂಪರ್ಕಿಸುವ ಪಡೀಲು ತನಕ ಚತುಷ್ಪಥ ರಸ್ತೆಗೆ ಪ್ರಸ್ತಾನವೆ ನೀಡಲಾಗಿದೆ. ಅದು ಲೋಕೋಪಯೋಗಿ ಇಲಾಖೆ ಮತ್ತು ಕೇಂದ್ರಕ್ಕೆ ಕೊಟ್ಟಿದ್ದೇವೆ. ಹಾಗಾಗಿ ರೈಲ್ವೇ ಮೇಲ್ಸೇತುವೆ ಅಗಲೀಕರಣ ಆದ ತಕ್ಷಣ 2ನೇ ಆದ್ಯತೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುತ್ತೆವೆ ಎಂದರು.
ಪುತ್ತೂರಿಗೆ ರೈಲು ಬಂದು ಸುಮಾರು 40 ವರ್ಷ ದಾಟಿದೆ. ರೈಲ್ವೇ ಇಲಾಖೆಯಲ್ಲಿ ಅಶ್ವಿನಿ ವೈಷ್ಣವ್ ಅವರು ಸಚಿವರಾದ ಬಳಿಕ ಪುತ್ತೂರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅದರೆ ಈ ಕೊಡುಗೆ ಲಭಿಸಲು ಅದರ ಹಿಂದೆ ನಮ್ಮ ಸಂಸದರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಹೀಗೆ ಒಂದಷ್ಟು ಮಂದಿ ಹಿರಿಯರು ಕೆಲಸ ಮಾಡಿದ್ದಾರೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್, ಟಿ.ಎಸ್ ಭಟ್, ಬಲರಾಮ ಆಚಾರ್ಯ, ಸತೀಶ್ ಭಟ್, ಕೇಂದ್ರ ಸರಕಾರದ ದಿಶಾ ನಾಮನಿರ್ದಶಿತ ಸದಸ್ಯ ರಾಮದಾಸ್ ಹಾರಾಡಿ, ನಗರಸಭೆ ಸ್ಥಳೀಯ ಸದಸ್ಯ ವಸಂತ ಕಾರೆಕ್ಕಾಡು, ಸದಸ್ಯರಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿ ನೆಲಪ್ಪಾಲು, ರಾಘವೇಂದ್ರ ಪ್ರಭು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.