ಪುತ್ತೂರು: ಕೆದಂಬಾಡಿ ಗ್ರಾಮದ ಕುರಿಕ್ಕಾರ ತರವಾಡು ಮನೆಯಲ್ಲಿ ಕುಟುಂದ ಸರ್ವಸದಸ್ಯರ ಶ್ರೇಯೋಭಿವೃದ್ಧಿಗಾಗಿ ಮಾ. 18 ರಂದು ಅಷ್ಟ ದ್ರವ್ಯ ಗಣಪತಿ ಹೋಮ, ಐಕ್ಯಮತ್ಯ ಹೋಮ, ಭಾಗ್ಯ ಸೂಕ್ತ ಹೋಮ ಮತ್ತು ಸಂಜೀವಿನಿ ಮೃತ್ಯುಂಜಯ ಹೋಮ ನಡೆಯಿತು.
ಬ್ರಹ್ಮಶ್ರೀ ವೇದಮೂರ್ತಿ ಉಳಿತ್ತಾಯ ವಿಷ್ಣು ಅಸ್ರ ತಂತ್ರಿ ಮಧೂರುರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಕುರಿಕ್ಕಾರ ತರವಾಡು ಕುಟುಂಬದ ಯಾಜಮಾನ ಕುಯ್ಯಾರು ವಿಶ್ವನಾಥ ರೈ ಅನಾಜೆ, ಕುರಿಕ್ಕಾರ ತರವಾಡು ಕುಟುಂಬ ಸಮಿತಿ ಅಧ್ಯಕ್ಷ ಅನಂದ ರೈ ಪುಂಡಿಕಾಯಿ, ಕುಟುಂಬದ ಹಿರಿಯ ಸದಸ್ಯರಾದ ಬೈಂಕಿ ರೈ ಅಡ್ಯೆತ್ತಿಮಾರು, ಜಯರಾಮ ರೈ ಕೇರಿ, ನಾರಾಯಣ ರೈ ಮದ್ಲ, ಗಣೇಶ್ ರೈ ಮುಳಿಪಡ್ಪು, ಪ್ರಭಾನಂದ ಶೆಟ್ಟಿ ಪುಂಡಿಕಾಯಿ, ಪಕೀರಪ್ಪ ರೈ ಕಲಾಯಿ ಹಾಗೂ ಕುಟುಂಬದ ಹಿರಿಯ, ಕಿರಿಯ ಸದಸ್ಯರುಗಳು, ಊರ-ಪರವೂರ ಬಂಧುಗಳು, ಹಿತೈಷಿಗಳು ಭಾಗವಹಿಸಿದರು.