ಬಡಗನ್ನೂರುಃ ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಕೌಡಿಚ್ಚಾರ್- ಮಾಡಾವು ಕೈಕಂಬ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಚಲಾಯಿಸಲು ಕಷ್ಟಕರ ಪರಿಸ್ಥಿತಿ ಉಂಟಾಗಿದೆ. ಅಟೋ ರಿಕ್ಷಾ ಚಾಲಕರು ಅಟೋ ಚಲಾಯಿಸಲು ಕ್ಲಿಷ್ಟಕರವಾಗಿದೆ. ಸುಮಾರು 10 ವರ್ಷಗಳ ಮೊದಲು ಈ ರಸ್ತೆ ಡಾಮಾರೀಕರಣ ಮಾಡಲಾಗಿದ್ದು, ಕಳೆದ 3 ,4 ವರ್ಷಗಳಿಂದ ಅಲ್ಲಲ್ಲಿ ರಸ್ತೆ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ. ಈ ಬಗ್ಗೆ ಅನೇಕ ಬಾರಿ ಶಾಸಕರಿಗೆ , ಸಂಸದರಿಗೆ ಹಾಗೂ ,ಸಂಬಂಧ ಪಟ್ಟ ಅಧಿಕಾರಿ ವರ್ಗದವರಿಗೆ ಮನವಿ ಸಲ್ಲಿಸಲಾಗಿದೆ ಈ ಭಾಗದ ಜನತೆಯ ಸಮಸ್ಯೆಗೆ ಸ್ಪಂದನೆ ನೀಡಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುತ್ತುವರಿದು ಅಟೋ ಸಂಚಾರ:-
ಕೌಡಿಚ್ಚಾರ್ ಭಾಗದಿಂದ ಮಾಡಾವು ಕೈಕಂಬ ಮೂಲಕ ಅಥವಾ ಇತರ ಭಾಗಗಳಿಗೆ ಪ್ರಯಾಣಿಸಲು ಅತೀ ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಆದರೆ ರಸ್ತೆ ಹೊಂಡ ಬಿದ್ದು ವಾಹನ ಚಲಾಯಿಸಲು ಕಷ್ಟಕರವಾಗಿದುದರಿಂದ ಅಟೋ ಚಾಲಕರು ಸುಮಾರು 10-12 ಕಿ ಮೀ ಸುತ್ತುವರಿದು ಕೌಡಿಚ್ಚಾರ್- ಕುಂಬ್ರ ತಿಂಗಳಾಡಿ ಮೂಲಕ ಮಾಡಾವು ಕೈಕಂಬ ಭಾಗಕ್ಕೆ ಸಂಚಾರಿಸುತ್ತಿದ್ದಾರೆ.ಇದರಿಂದ ಬಾಡಿಗೆದಾರರಿಗೆ ಸಮಯವು ವ್ಯರ್ಥ ಹಾಗೂ ದುಬಾರಿಯು ಆಗುತ್ತದೆ.
ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹತ್ತಿರದ ರಸ್ತೆ:-
ಸುಬ್ರಹ್ಮಣ್ಯ- ಪೆರ್ಲ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹತ್ತಿರದ ರಸ್ತೆ ಇದಾಗಿದೆ. ಸುಬ್ರಹ್ಮಣ್ಯ, ಬೆಳ್ಳಾರೆ ಮೂಲಕ ಕುಂಬ್ರ ಭಾಗಕ್ಕೆ ಬಂದು ಪುನಃ ಕೌಡಿಚ್ಚಾರ್ ಭಾಗಕ್ಕೆ ಬರುವ ಬದಲಾಗಿ ಸುಬ್ರಹ್ಮಣ್ಯ, ಬೆಳ್ಳಾರೆ -ಮಾಡಾವು ಸಂಪರ್ಕ ರಸ್ತೆಯ ಕೈಕಂಬ ಪ್ರದೇಶದಿಂದ ನೇರವಾಗಿ ಕೌಡಿಚ್ಚಾರ್ ಮೂಲಕ ಪೆರ್ಲ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಅತೀ ಹತ್ತಿರ ರಸ್ತೆ ಇದಾಗಿದೆ .ಅದುದರಿಂದ ಕೌಡಿಚ್ಚಾರ್ ಮಾಡಾವು ಕೈಕಂಬ ರಸ್ತೆ ಮೇಲ್ದರ್ಜೆಗೆ ಏರಿಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.