ಪುತ್ತೂರು: ಸಮಸ್ತ ನಡೆಸಿದ 2022-23ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ 5 ಮತ್ತು 7 ನೇ ತರಗತಿಗಳಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಕುರಿಯ – ಬಳ್ಳಮಜಲು ನೂರುಲ್ ಹುದಾ ಮದ್ರಸಕ್ಕೆ ಶೇ.100 ಫಲಿತಾಂಶ ಬಂದಿರುತ್ತದೆ.
5ನೇ ತರಗತಿಯಲ್ಲಿ ಪರೀಕ್ಷೆಗೆ ಹಾಜರಾದ ಮೂಸಾ ಅದ್‌ನಾನ್ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಮದ್ರಸದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಅಬೂಬಕ್ಕರ್ ಹಾಜಿ ಇರುವಂಬಳ್ಳ ಹಾಗೂ ರುಕಿಯಾ ದಂಪತಿಯ ಪುತ್ರ.
ಉಳಿದಂತೆ ಪರೀಕ್ಷೆಗೆ ಹಾಜರಾದ ರಾಫಿದ್, ಅಫ್ನಾನ್, ಅಜ್ಮಾನ್ ದ್ವಿತೀಯ ಶ್ರೇಣಿಯಲ್ಲಿ ಹಾಗೂ ನೇಮಾನ್ ಹುಸೈನ್ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
7ನೇ ತರಗತಿಯಲ್ಲಿ ಪರೀಕ್ಷೆಗೆ ಹಾಜರಾದ ಫೈರೋಝ, ಹಾಗೂ ಮುಫೀದ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮದ್ರಸ ಅಧ್ಯಾಪಕ ಪಿ.ಎಂ ಅಬ್ದುಲ್ ಮುಸ್ಲಿಯಾರ್ ಅವರ ಪರಿಶ್ರಮ ಮದ್ರಸಕ್ಕೆ ಉತ್ತಮ ಫಲಿತಾಂಶ ಲಭಿಸಲು ಕಾರಣವಾಯಿತು ಎಂದು ಶಾಲಾ ಪ್ರಕಟಣೆ ತಿಳಿಸಿದೆ.