ಕಾಣಿಯೂರು: ಕಾಣಿಯೂರು ಒಕ್ಕಲಿಗ ಸ್ವಸಹಾಯ ಗುಂಪಿನ ಒಕ್ಕೂಟ ರಚನೆ ಹಾಗೂ ಪದಗ್ರಹಣ ಕಾರ್ಯಕ್ರಮವು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘ ಗುಂಪುಗಳ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಶಿವಾನಂದ ಗೌಡ ಪುಣ್ಚತ್ತಾರು, ಕಾರ್ಯದರ್ಶಿಯಾಗಿ ಲಕ್ಷ್ಮಣ ಗೌಡ ಮುಗರಂಜ, ಉಪಾಧ್ಯಕ್ಷರಾಗಿ ರೋಹಿತ್ ಅನಿಲ, ಜೊತೆ ಕಾರ್ಯದರ್ಶಿಯಾಗಿ ಭರತ್ ಬೈಲಂಗಡಿ, ಕೋಶಾಧಿಕಾರಿಯಾಗಿ. ಶೇಸಪ್ಪ ಗೌಡ ಬೇದ್ರಂಗಳರವರು ಆಯ್ಕೆಯಾಗಿದ್ದಾರೆ. ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಇಡ್ಯಡ್ಕ , ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮುಡಾಯಿಮಜಲು, ಒಕ್ಕಲಿಗ ಸ್ವಸಹಾಯ ಟ್ರಸ್ಟಿನ ಮೇಲ್ವಿಚಾರಕ ವಿಜಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೇರಕ ಗಣೇಶ್ ಬರೆಪ್ಪಾಡಿ ಸ್ವಾಗತಿಸಿ, ರವಿಶಂಕರ್ ಎನ್. ಟಿ ವಂದಿಸಿದರು.
