ತುಳುವರು ಕೃಷಿ ಪರಂಪರೆಯವರು – ನಾರಾಯಣ ಕುಂಬ್ರ

0

ಪುತ್ತೂರು (ಪೆರ್ಲ): ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಹಾಗೂ ಸವಿ ಹೃದಯದ ಕವಿ ಮಿತ್ರರು ಪೆರ್ಲ ಇವರ ಜಂಟಿ ಆಶ್ರಯದಲ್ಲಿ ಮತ್ತು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕ ಇವರ ಸಹಭಾಗಿತ್ವದಲ್ಲಿ ತಿಂಗಳ ಸಾಹಿತ್ಯ ಸಂಭ್ರಮ ಉಪನ್ಯಾಸ, ಸನ್ಮಾನ, ಚಿಗುರು ಪ್ರತಿಭೆಗಳ ಸಹಿತ ಕನ್ನಡ ತುಳು ಚುಟುಕು ಕವಿಗೋಷ್ಠಿ ಬಹಳ ಅರ್ಥಪೂರ್ಣವಾಗಿ – ಏಪ್ರಿಲ್ 9ರಂದು ಪೆರ್ಲದ ವ್ಯಾಪಾರ ಭವನದಲ್ಲಿ ನಡೆಯಿತು.

ಸುಜಯ ಸ್ವರ್ಗ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮವನ್ನು ಕೇರಳ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿ, ಪೆರ್ಲ ಘಟಕದ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ದೀಪ ಬೆಳಗಿಸಿ ಉದ್ಘಾಟಿಸಿ ವ್ಯಾಪಾರ ಮತ್ತು ಸಾಹಿತ್ಯದ ನಡುವೆ ಅಜಗಜಾಂತರ ವ್ಯತ್ಯಾಸವಿದ್ದರೂ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯಕ ಬೆಳವಣಿಗೆಯ ಅಗತ್ಯದ ಬಗ್ಗೆ ಬೆಳಕು ಚೆಲ್ಲಿ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ವೃದ್ಧಿಸುವಲ್ಲಿ ಹಿರಿಯರು ಆಸಕ್ತಿಯನ್ನು ತೋರಬೇಕು ಎಂದು ಹೇಳಿದರು.

ಹಿರಿಯ ಸಾಹಿತಿಗಳಾದ ರತ್ನಾ ಕೆ ಭಟ್ ತಲಂಜೇರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಇತ್ತೀಚೆಗೆ ನಡೆಯುತ್ತಿರುವ ಕೃತಿಚೌರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಕುರಿತು ಹಾಗೂ ಚುಟುಕು ಸಾಹಿತ್ಯದ ಬಗ್ಗೆ ಮತ್ತು ಸಂಪ್ರದಾಯ, ಸಂಸ್ಕೃತಿಯ ಮಹತ್ತ್ವದ ಬಗ್ಗೆ ಸವಿವರವಾಗಿ ತಿಳಿಸಿದರು. ತುಳುವೆರ್ನ ಪೊಸ ವರ್ಸ ಬಿಸು ಎಂಬ ವಿಷಯದ ಬಗ್ಗೆ ವಿವೇಕಾನಂದ ಕಾಲೇಜು ಪುತ್ತೂರಿನ ರಸಾಯನಶಾಸ್ತ್ರ ಪ್ರಯೋಗಾಲಯದ ಸಹಾಯಕರಾದ ನಾರಾಯಣ ಕುಂಬ್ರ, ದೇಶದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುವ ಬಿಸು ಹಬ್ಬವನ್ನು ತುಳುನಾಡಿನ ಸಂಸ್ಕೃತಿ ಒಪ್ಪಿಕೊಂಡ ರೀತಿ ಮತ್ತು ಆಚರಣೆಯ ಮಹತ್ತ್ವವನ್ನು ಸ್ಥೂಲವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವಾಸುದೇವ ಭಟ್ಟ (ಶಿವ ಪಡ್ರೆ) ಅವರನ್ನು ಶಾಲು ಹೊದಿಸಿ ಫಲಪುಷ್ಪಗಳನ್ನಿತ್ತು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಾಹಿತ್ಯವೆಂಬುದು ಭಾವನೆಗಳ ತರಂಗ ಎಂಬ ಶಿವರಾಮ ಕಾರಂತರ ಮಾತುಗಳನ್ನು ನೆನಪಿಸಿಕೊಂಡು ಸಾಹಿತ್ಯ ಸೃಷ್ಟಿಸುವ ಸಂದರ್ಭದಲ್ಲಿ ಗೊಂದಲದ ವಾತಾವರಣ ಇರಬಾರದು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ ಅವರು ಕವಿಗೆ ಬಡತನ ಸಿರಿತನ ಎಂಬುದಿಲ್ಲ, ದಿನದಲ್ಲಿ ಕನಿಷ್ಠ ಒಂದು ಗಂಟೆ ಸಾಹಿತ್ಯದ ಬರವಣಿಗೆ ಹಾಗೂ ಓದುವಿಕೆಗೆ ಮೀಸಲಿಡಬೇಕು ಎಂದರು. ಇದೇ ಸಂದರ್ಭದಲ್ಲಿ ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆಯ ಟ್ರಸ್ಟಿಯಾಗಿ ಆಯ್ಕೆಗೊಂಡ ರಿತೇಶ್ ಕಿರಣ್ ಕಾಟುಕುಕ್ಕೆ ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡ ಟಿ. ಪ್ರಸಾದ್ ಪೆರ್ಲ ಇವರನ್ನು ಚುಸಾಪ ಬಂಟ್ವಾಳ ಘಟಕದ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಗೌರವಿಸಿದರು.

ಬಳಿಕ ಶಿಕ್ಷಕರು, ತುಳು ಮತ್ತು ಕನ್ನಡ ಭಾಷಾ ಸಾಹಿತಿಗಳಾದ ಜಯರಾಮ ಪಡ್ರೆ ಅಧ್ಯಕ್ಷತೆಯಲ್ಲಿ ಚಿಗುರು ಪ್ರತಿಭೆಗಳ ಸಹಿತ ತುಳು-ಕನ್ನಡ ಚುಟುಕು ಕವಿಗೋಷ್ಠಿ ನಡೆಯಿತು. ಕು. ತಶ್ವಿ ಶಾಂಭವಿ ಜೋಗಿಬೆಟ್ಟು, ಅಶೋಕ್ ಯನ್ ಕಡೆಶಿವಾಲಯ, ದಯಾನಂದ ರೈ ಕಳ್ವಾಜೆ, ಹರೀಶ್ ಪೆರ್ಲ, ರಿತೇಶ್ ಕಿರಣ್ ಕಾಟುಕುಕ್ಕೆ, ಎಸ್. ಎನ್. ಭಟ್ ಸೈಪಂಗಲ್ಲು, ಕು. ಶ್ರೇಯಾ ಮಿಂಚಿನಡ್ಕ, ಕು. ಕಾವ್ಯಶ್ರೀ ಅಳಿಕೆ, ರಾಧಾಕೃಷ್ಣ ಎರುಂಬು, ಸೀತಾಲಕ್ಷ್ಮಿ ವರ್ಮ, ಮಲ್ಲಿಕಾ ಜೆ ರೈ, ಸುಜಯ ಸ್ವರ್ಗ, ಸವಿತಾ ರಾಮಕುಂಜ, ಹಿತೇಶ್ ಕುಮಾರ್ ಎ, ರತ್ನಾ ಕೆ. ಭಟ್ ತಲಂಜೇರಿ, ಕು. ನವ್ಯಶ್ರೀ ಸ್ವರ್ಗ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಕು. ಮಂಜುಶ್ರೀ ನಲ್ಕ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು.

LEAVE A REPLY

Please enter your comment!
Please enter your name here