ಸಂಘಟನೆಯ ಮೂಲಕ ಹಿಂದುತ್ವದ ಕೆಲಸ ಮಾಡಿದರೆ ಶಕ್ತಿ ಇರುತ್ತದೆ-ವಿಹಿಂಪ, ಬಜರಂಗದಳ, ಹಿಂಜಾವೇಯಿಂದ ಪತ್ರಿಕಾಗೋಷ್ಠಿ

0

ಪುತ್ತೂರು: ಸಂಘಟನೆಯ ಮೂಲಕ ಹಿಂದುತ್ವದ ಕೆಲಸ ಮಾಡಿದರೆ ಅದಕ್ಕೆ ಶಕ್ತಿ ಇರುತ್ತದೆ. ಚೆನ್ನಾಗಿ ಇರುವ ವ್ಯವಸ್ಥೆ ಇರುತ್ತದೆ. ಅದು ಬಿಟ್ಟು ತಾನು ಸಂಘಟನೆ ಹೊರಗಿದ್ದು ಕೆಲಸ ಮಾಡುತ್ತೇನೆಂದಾಗ ಅಲ್ಲಿ ನಾನು ಹೇಳಿದಂತೆ ಇರಬೇಕೆಂಬ ವ್ಯವಸ್ಥೆ ನಿರ್ಮಾಣ ಆಗುತ್ತದೆ. ಅಹಂ ಬೆಳೆಯುತ್ತದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಹಿಂದುತ್ವದ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲರ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ವ್ಯಕ್ತಿಗೆ ನಾಯಕ ಅಂತ ಅನಿಸುವಾಗ ತನ್ನ ಹಿಂದಿನ ವಿಚಾರಧಾರೆಯನ್ನು ಮತ್ತು ತಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾದ ಸಂಘಟನೆಗಳನ್ನು ಎಂದೂ ಮರೆಯುವಂತಿಲ್ಲ. ಒಂದು ವೇಳೆ ತಪ್ಪು ಆಗಿದ್ದರೆ ಅದನ್ನು ರಸ್ತೆಯಲ್ಲಿ ಮಾತನಾಡುವುದಲ್ಲ. ಇದರ ಪರಿಣಾಮ ಇವತ್ತು ದೇಶದಲ್ಲಿ ದೊಡ್ಡ ದೊಡ್ಡ ನಾಯಕರು ಸಂಘಟನೆ ಬಿಟ್ಟು ಹೊರಗೆ ಇರುವುದು ನಾವು ಕಂಡಿದ್ದೇವೆ. ಆದರೆ ಸಂಘಟನೆ ಮೂಲಕ ಹಿಂದುತ್ವದ ಕೆಲಸ ಮಾಡಿದಾಗ ಅದಕ್ಕೆ ಶಕ್ತಿ ಇರುತ್ತದೆ. ಚೆನ್ನಾಗಿ ಇರುವ ವ್ಯವಸ್ಥೆ ಇರುತ್ತದೆ. ಅದು ಬಿಟ್ಟು ನಾನು ಸಂಘಟನೆ ಹೊರಗಿದ್ದು ಕೆಲಸ ಮಾಡುತ್ತೇನೆಂದರೆ, ನಾನು ಹೇಳಿದಂತೆ ಇರಬೇಕೆಂಬ ವ್ಯವಸ್ಥೆ ನಿರ್ಮಾಣ ಆಗುತ್ತದೆ. ಅಹಂ ಹುಟ್ಟುತ್ತದೆ. ಸಂಘಟನೆಯ ಒಳಗೆ ಇದ್ದಾಗ ಸಮಾಜಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಆಗುತ್ತದೆ. ಅಹಂ ಇರುವುದಿಲ್ಲ. ಸಮಾಜವೂ ಸ್ಪಂದನೆ ಕೊಡುತ್ತದೆ ಹಿಂದುತ್ವದ ಪರವಾಗಿ ಕೆಲಸ ಮಾಡುವ ಎಕೈಕ ಪಕ್ಷ ಬಿಜೆಪಿ ಎಂದರು.


ಕಾಯ್ದೆ ಹಿಂದಕ್ಕೆ ಪಡೆಯುವಲ್ಲಿ ಅಶೋಕ್ ರೈ ವಿರೋಧಿಸಿದರೆ ನಾವು ಅವರಿಗೆ ಬೆಂಬಲ:
ಅಶೋಕ್ ರೈ ಅವರು ಕೂಡಾ ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಆದರೆ ಅವರು ನಾನು ಹಿಂದುತ್ವದ ಪರ ಕೆಲಸ ಮಾಡುತ್ತೇನೆಂದು ಹೇಳಿದರೆ ನಾವು ಬೆಂಬಲ ಕೊಡಲು ಆಗುವುದಿಲ್ಲ. ಸಂಘ ವ್ಯಕ್ತಿ ನಿರ್ಮಾಣ ಕೆಲಸ ಮಾಡುತ್ತದೆ. ಹಾಗಾಗಿ ದೇಶಕ್ಕೆ ಮೋದಿಯಂತಹ ಸಮರ್ಥ ನಾಯಕನನ್ನು ಕೊಟ್ಟಿದ್ದಾರೆ. ಇಲ್ಲಿ ವ್ಯಕ್ತಿ ನಿರ್ಮಾಣ ಮಾಡಿದ್ದು ನಮ್ಮ ವ್ಯವಸ್ಥೆಯ ಚೌಕಟ್ಟಿನ ಅಡಿಯಲ್ಲಿ. ಅದನ್ನು ಬಿಟ್ಟು ಹೊರಗೆ ಹೋದ ಕಲ್ಯಾಣ ಸಿಂಗ್, ತೊಗಾಡಿಯವರು ಉತ್ತಮ ನಾಯಕರು. ನನ್ನದೇ ಎಂದು ಅನಿಸಿದಾಗ ಚೌಕಟ್ಟು ಬಿಟ್ಟು ಹೊರಗಡೆ ಹೋಗಬೇಕಾಯಿತು. ತ್ಯಾಗ ಮತ್ತು ಶೌರ್ಯದ ಸಂಕೇತವಾದ ಭಗವಾಧ್ವಜದ ಅಡಿಯಲ್ಲಿ ಕೆಲಸ ಮಾಡಬೇಕು ಅದನ್ನು ಬಿಟ್ಟು ನಮ್ಮ ಯೊಚನೆ ನನ್ನದೇ ಎಂದಾಗ ಈ ರೀತಿಯ ಯೋಚನೆ ಬರುತ್ತದೆ. ಇವತ್ತು ಕಾಂಗ್ರೆಸ್ ಗೋ ಹತ್ಯೆ ನಿಷೇಧ ಜಾರಿಗೆ ಮತ್ತೆ ತರುತ್ತಾರೆ ಎಂದಾಗ ಅದು ಹಿಂದುಗಳ ಭಾವನೆ ಪ್ರಶ್ನೆ ಆಗುತ್ತದೆ. ಒಂದು ವೇಳೆ ಗೋ ಹತ್ಯೆ ಕಾನೂನು ಹಿಂದಕ್ಕೆ ಪಡೆಯದಿದ್ದರೆ, ಮತಾಂತರ ಕಾಯ್ದೆಯನ್ನು ಪಡೆಯಲು ಬಿಡುವುದಿಲ್ಲ, ಸಮಾನ ನಾಗರಿಕ ಸಂಹಿತೆಯ ಕಾನೂನನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಅಶೋಕ್ ಕುಮಾರ್ ರೈ ಅವರು ವಿರೋಧಿಸಿದರೆ ನಾವು ಅಶೋಕ್ ಕುಮಾರ್ ರೈ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಮುರಳಿಕೃಷ್ಣ ಹಸಂತಡ್ಕ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ತಾಲೂಕು ಸಂಚಾಲಕ ದಿನೇಶ್ ಪಂಜಿಗ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here