ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬೆಂಬಲಿಸಿದ “ಸೀತಾ ಪರಿವಾರ”

0

ಪುತ್ತೂರನ್ನು ಬದಲಾಯಿಸಲು ಸಮಯ ಸಂದರ್ಭ ನಿಮ್ಮಲ್ಲಿದೆ – ಅಕ್ಷಯ ಗೋಖಲೆ

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬೆಂಬಲಿಸಿ ಎ.28 ರಂದು ಪುತ್ತೂರಿನ ಮುಕ್ರಂಪಾಡಿಯ ಸುಭದ್ರ ಕಲ್ಯಾಣ ಮಂಟಪದಲ್ಲಿ “ಸೀತಾಪರಿವಾರ” ಮಹಿಳಾ ಸಮಾವೇಶ ನಡೆಯಿತು.


ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅಕ್ಷಯ ಗೋಖಲೆ, ಹಿಂದುತ್ವ ಅಸ್ಮಿತೆಯನ್ನು ಅಹಿಂದವಿ ಸ್ವರಾಜ ಕಲ್ಪನೆಯನ್ನು ಶಿವಾಜಿಗೆ ತೋರಿಸಿಕೊಟ್ಟವರು ತಾಯಿ ಜೀಜಾಬಾಯಿ. ಗುಲಾಮಗಿರಿಯಿಂದ ಭಾರತವನ್ನು ಬಿಡುಗಡೆಗೊಳಿಸಲು ಜೈ ಹಿಂದ್ ಘೋಷಣೆಯನ್ನು ಕೊಟ್ಟವರು ನೇತಾಜಿ ಸುಭಾಶ್ ಚಂದ್ರ ಬೋಸ್. ಇದರ ಹಿಂದಿನ ಶಕ್ತಿ ಪ್ರಭಾವತಿ ದೇವಿ. ಭುವನೇಶ್ವರಿ ಆಶೀರ್ವಾದದ ಪರಿಣಾಮ ಸಾಮಾನ್ಯರಾಗಿದ್ದ ನರೇಂದ್ರ, ಸ್ವಾಮಿ ವಿವೇಕಾನಂದರಾದರು. ದೇಶಕ್ಕಾಗಿ ಗಲ್ಲುಶಿಕ್ಷೆಗೆ ಕೊರಳೊಡ್ಡಿದ ಸಾರ್ವರ್ಕರ್ ಕುಟುಂಬಕ್ಕೆ ಪ್ರೇರಣೆ ತಾಯಿ. ಪುತ್ತೂರಿನಲ್ಲಿರುವ ಇಷ್ಟೂ ಮಹಿಳೆಯರು ಮನಸು ಮಾಡಿದಲ್ಲಿ ಪುತ್ತೂರಿನಲ್ಲಿ ಅರುಣೋದಯವಾಗಲಿದೆ. ಪುತ್ತೂರನ್ನು ಬದಲಾಯಿಸಲು ಬೇಕಾದ ಸಮಯ ಸಂದರ್ಭ ಈಗ ನಿಮ್ಮಲ್ಲಿದೆ. ಇದಕ್ಕೆ ಬೇಕಾಗಿರುವುದು ಮನಸ್ಸು ಮತ್ತು ಹೃದಯ ಎಂದವರು ಹೇಳಿದರು.

ಸರಿಯಾದ ಜ್ಞಾನ ಇಲ್ಲದ ಶಾಸಕ, ಎಂಪಿ ಸಿಗದಿರುವುದೇ ಸಮಸ್ಯೆ:
ಡಾ.ಜೆ.ಸಿ ಅಡಿಗ ಅವರು ಮಾತನಾಡಿ ಪುತ್ತೂರು ವಿಷಮ ಪರಿಸ್ಥಿತಿಯಲ್ಲಿದೆ. ಇಲ್ಲಿ ಹಿಂದು ಪರಿವಾರದ ನಡುವೆಯೇ ಪೈಪೋಟಿ, ಈ ಭಾರಿ ಸಂಧಿಗ್ದ ಪರಿಸ್ಥಿತಿ ಬಂದೊದಗಿದೆ. ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಸಾಮಾರ್ಥ್ಯ ಅಳತೆ ಮಾಡಿ ಆಯ್ಕೆ ಮಾಡಬೇಕು.ಎಂ ಪಿ ಆಯ್ಕೆ ಮಾಡುವಾಗ ಕನಿಷ್ಠ ಇಂಗ್ಲಿಷ್ ಜ್ಞಾನ ಬೇಕು.
ಇಲ್ಲಿ ಆ ರೀತಿ ಆಗುತ್ತಿಲ್ಲ. ವಿದ್ಯಾವಂತ ಜಿಲ್ಲೆಯಲ್ಲಿ ಯಾಕೆ ವಿದ್ಯಾವಂತರನ್ನು ಆಯ್ಕೆ ಮಾಡುತ್ತಿಲ್ಲ. ಇದರಲ್ಲಿ ಎಲ್ಲಾ ಪಕ್ಷಗಳು ಹಿಂದೆ ಬಿದ್ದಿವೆ. ಈ ನಿಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಆರಿಸುವುದು ಪ್ರಜ್ಞಾವಂತ ಮತದಾರರ ಕೆಲಸ ಆಗಿದೆ ಎಂದರು‌.

ಗುಲಾಮಗಿರಿ ಸಂಸ್ಕೃತಿ ಅಳವಡಿಸಿದರೆ ಸಮಾಜ ಉತ್ತರ ಕೊಡುತ್ತದೆ:
ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಧರ್ಮ ಆಧಾರಿತವಾದ ರಾಜಕಾರಣ ಇರಬೇಕು. ಪೂರ್ಣಪ್ರಮಾಣದ ಅಭಿವೃದ್ಧಿ ಕಾಣಬೇಕೆಂಬ ರಾಷ್ಡ್ರೀಯ ಸ್ವಯಂ ಸೇವಕ ಸಂಘದ
ಕಾರ್ಯಕರ್ತರ ಧ್ವನಿಯಾಗಿ ನಿಮ್ಮ ಮನೆ‌ಮಗನಾಗಿ ಚುನಾವಣೆಗೆ ನಿಂತಿದ್ದೆನೆ. ಅಧಿಕಾರಕ್ಕಾಗಿ ಚುನಾವಣೆಗೆ ನಿಂತಿಲ್ಲ. ಸಮಾಜದ ಅಸ್ಮಿತೆಯ ಪ್ರತಿಕವಾದ ಹಿಂದುತ್ವದ ಆಧಾರದಲ್ಲಿ ರಾಜಕಾರಣ ಆಗಬೇಕು. ಸರ್ವಾಧಿಕಾರಿ ಧೋರಣೆ ಬುಡಮೇಲೆ ಮಾಡಿ ಸಂಘ ಸಿದ್ದಾಂತದ ಮೂಲಕ ಭಗವಧ್ವಜದ ಅಡಿಯಲ್ಲಿ ಕೆಲಸ ಕಾರ್ಯ ನಡೆಯಬೇಕು. ಗುಲಾಮಾಗಿರಿಯ ಸಂಸ್ಕೃತಿಯನ್ನು ಅಳವಡಿಸಿದರೆ ಸಮಾಜ ಉತ್ತರ ಕೊಡುತ್ತದೆ ಎಂದರು.

ಮಹಿಳೆಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ , ಭಾಸ್ಕರ್ ಆಚಾರ್ ಹಿಂದಾರು, ಪಂಚಾಯತ್ ಅಧ್ಯಕ್ಷೆ ಪುಷ್ಪಾ ಮುಂಡೂರು, ಅರುಣ್‌ ಕುಮಾರ್‌ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು‌.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಲ್ಲಿಕಾ ಪ್ರಸಾದ್ ಗೌಡ ಮಹಿಳಾ ಸಮಾವೇಶವನ್ನು ಉದ್ಘಾಟಿಸಿದರು‌.


ಅಶ್ವಿನಿ, ಹರಿಣಿ ಪುತ್ತೂರಾಯ, ಪ್ರವೀಣ್ ಭಂಡಾರಿ, ರಾಜಶೇಖರ್ , ವೀಣಾ ತಂತ್ರಿ, ಡಾ.ಸುರೇಶ್ ಪುತ್ತೂರಾಯ ಅತಿಥಿಗಳನ್ನು ಗೌರವಿಸಿದರು. ಸಮೃದ್ಧಿ ಶೆಣೈ ಪ್ರಾರ್ಥಿಸಿದರು. ಮಹಿಳಾ ಸಮಾವೇಶ ಸೀತಾಪರಿವಾರದ ಪ್ರಮುಖ್ ವಸಂತಲಕ್ಷ್ಮೀ ಸ್ವಾಗತಿಸಿದರು. ಜಯಮಾಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here