ಕೊಂಬರಡ್ಕ ಕರ್ಕೇರ ಕುಟುಂಬ ತರವಾಡುವಿನಲ್ಲಿ ಮಹಾಕಾಳಿ, ಸತ್ಯದೇವತೆ, ವರ್ಣರ ಪಂಜುರ್ಲಿ ನೇಮೋತ್ಸವ

0

ಪುತ್ತೂರು: ಕುಂಬ್ರ ಅರಿಯಡ್ಕ ಗ್ರಾಮ ವ್ಯಾಪ್ತಿಯ ಕೊಂಬರಡ್ಕ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಧರ್ಮದೈವ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಮೇ.2 ರಂದು ಪ್ರಾರಂಭಗೊಂಡಿತು. ಕ್ಷೇತ್ರದ ಪುರೋಹಿತ ಶ್ರೀಪತಿ ಭಟ್ ಕೆಯ್ಯೂರುರವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿದವು.

ಬೆಳಗ್ಗೆ ಗಣಹೋಮ, ನಾಗಬ್ರಹ್ಮ ತಂಬಿಲ ಸೇವೆ, ಮುಡಿಪು ಪೂಜೆ, ಹರಿಸೇವೆ, ಮಧ್ಯಾಹ್ನ ಮಹಾಕಾಳಿ ದೈವದ ತಂಬಿಲ ಸೇವೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆದು, ಬಳಿಕ ದೈವಗಳಿಗೆ ಕಾಲಾವಧಿ ತಂಬಿಲ, ಸಂಜೆ ಭಂಡಾರ ತೆಗೆದು, ಎಣ್ಣೆ ವೀಲ್ಯ ಸಮರ್ಪಣೆಯ ನಂತರ ಅನ್ನಸಂತರ್ಪಣೆ ನಡೆಯಿತು. ಆ ಬಳಿಕ ಮಹಾಕಾಳಿ, ಸತ್ಯದೇವತೆ ಮತ್ತು ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ನೆರವೇರಿತು.
ಮೇ 3 ರಂದು ದೈವಗಳಿಗೆ ತಂಬಿಲ, ಭಂಡಾರ ತೆಗೆದು ಎಣ್ಣೆ ವೀಲ್ಯ ಸಮರ್ಪಣೆ ಬಳಿಕ ಅನ್ನಸಂತರ್ಪಣೆ, ನಂತರ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಿತು. ಕುಟುಂಬದ ಎಲ್ಲಾ ಸದಸ್ಯರ ಹಾಗೂ ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.


ಕುಟುಂಬದ ಆಡಳಿತ ಮುಖ್ಯಸ್ಥ ಕೋಚಣ್ಣ ಪೂಜಾರಿ ಎಂಡೆಸಾಗು, ಕೊಂಬರಡ್ಕ ಮನೆ ಯಜಮಾನ ಮೋನಪ್ಪ ಪೂಜಾರಿ, ಕುಟುಂಬದ ಯಜಮಾನರಾದ ಗೋವಿಂದ ಪೂಜಾರಿ ಕೂರೇಲು ಹಾಗೂ ಕೃಷ್ಣಪ್ಪ ಪೂಜಾರಿ ಎಂಡೆಸಾಗು, ಸೇಸಪ್ಪ ಗಾಳಿಗುಡ್ಡೆ, ಸೀತಾ ಕೊಂಬರಡ್ಕ, ಗಿರಿಯಪ್ಪ ಪೂಜಾರಿ ಕೋರಿಕ್ಕಾರ್, ಸುಂದರ ಪೂಜಾರಿ ಸಿದ್ಧಕಟ್ಟೆ ಸಹಿತ ಹಲವು ಅತಿಥಿಗಳು ಭಾಗವಹಿಸಿ, ದೈವದ ಕೃಪೆಗೆ ಪಾತ್ರರಾದರು.

ಹಿಂದೂ ಮುಖಂಡ, ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತರವಾಡು ಮನೆಗೆ ಭೇಟಿ ನೀಡಿ, ನೇಮೋತ್ಸವದಲ್ಲಿ ಪಾಲ್ಗೊಂಡು, ದೈವದ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಕರ್ಕೇರ ಕುಟುಂಬ ವರ್ಗದ ಎಲ್ಲಾ ಸದಸ್ಯರೂ ಹಾಜರಿದ್ದರು.

ಮೇ 4 ಕ್ಕೆ ದೈವಸ್ಥಾನದಲ್ಲಿ…
ಮೇ 4ಕ್ಕೆ ಕುರಿ ತಂಬಿಲ ಸೇವೆ, ರಾಹುವಿಗೆ ಅಗೇಲು ಸೇವೆ ಬಳಿಕ ಹಿರಿಯರಿಗೂ ಕೂಡ ಅಗೇಲು ಸೇವೆ ನಡೆಯಲಿದೆ.

LEAVE A REPLY

Please enter your comment!
Please enter your name here