ಗೋಳಿತ್ತೊಟ್ಟು: ಮರಬಿದ್ದು ವಿದ್ಯುತ್ ಕಂಬ, ತಂತಿಗಳಿಗೆ ಹಾನಿ

0

ನೆಲ್ಯಾಡಿ: ಮೇ 11ರಂದು ರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಗೋಳಿತ್ತೊಟ್ಟು ಪರಿಸರದ ಹಲವು ಕಡೆಗಳಲ್ಲಿ ಮರಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬ, ತಂತಿಗಳು ಹಾನಿಗೊಂಡಿರುವ ಘಟನೆ ನಡೆದಿದೆ.

ಗೋಳಿತ್ತೊಟ್ಟು ಪರಿಸರದ ಮೇಲೂರು, ಕುದ್ಕೋಳಿ, ಅನಿಲ, ಕಲ್ಲಡ್ಕ, ಸುಲ್ತಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ಮುರಿದು ವಿದ್ಯುತ್ ಕಂಬ, ತಂತಿಯ ಮೇಲೆಯೇ ಬಿದ್ದಿವೆ. ಘಟನೆಯಿಂದ ಸುಮಾರು 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೊಂಡಿದ್ದು ವಿದ್ಯುತ್ ಸಂಚಾರದಲ್ಲೂ ಅಡಚಣೆ ಉಂಟಾಗಿತ್ತು. ಪವರ್‌ಮ್ಯಾನ್‌ಗಳ ಸಹಕಾರದೊಂದಿಗೆ ಮೇ 12ರಂದು ದುರಸ್ತಿ ಕಾರ್ಯ ನಡೆದಿದ್ದು ಸಂಜೆ ವೇಳೆಗೆ ವಿದ್ಯುತ್ ಸರಬರಾಜು ಯಥಾಸ್ಥಿತಿಗೆ ಬಂದಿದೆ ಎಂದು ವರದಿಯಾಗಿದೆ.

ಕೃಷಿಗೂ ಹಾನಿ: ಭಾರೀ ಗಾಳಿಗೆ ಹಲವು ಕಡೆಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ ಎಂದು ವರದಿಯಾಗಿದೆ. ಅಂತೂ ಬೀಸಿದ ಮೊದಲ ಗಾಳಿ ಮಳೆಗೆ ಹೆಚ್ಚಿನ ಹಾನಿ ಸಂಭವಿಸಿ ಜನರು ಪರದಾಟ ನಡೆಸುವಂತಾಗಿದೆ.

LEAVE A REPLY

Please enter your comment!
Please enter your name here