ಹಿಂದುತ್ವಕ್ಕಾಗಿ ನಮ್ಮ ಸಂಘಟನೆ ನಿರಂತರ-ಶ್ರೀಕೃಷ್ಣ ಉಪಾಧ್ಯಾಯ
ಮುಂದಿನ ಚುನಾವಣೆಗಳಿಗೂ ನಮ್ಮ ಕೆಲಸ ನಿರಂತರ-ಸುನಿಲ್ ಬೋರ್ಕರ್
ಸೋಲಿಗೆ ಯಾರೂ ಧೃತಿಗೆಡಬೇಕಾಗಿಲ್ಲ-ಡಾ.ಸುರೇಶ್ ಪುತ್ತೂರಾಯ
ಕಾಂಗ್ರೆಸ್-ಎಸ್ಡಿಪಿಐ ಹೊಂದಾಣಿಕೆಯಿಂದ ಸೋಲಾಗಿದೆ-ಪುತ್ತಿಲ
ಹಿಂದುತ್ವದ ಶಕ್ತಿ ತೋರಿಸಿಕೊಟ್ಟಿದ್ದೇವೆ-ರಾಜಾರಾಮ ಭಟ್
ದೇವದುರ್ಲಭ ಕಾರ್ಯಕರ್ತರ ಶ್ರಮದ -ಲವಾಗಿ ದೊಡ್ಡ ಮಟ್ಟದ ಸಾಧನೆ-ಮಾರ್ತ
ಪುತ್ತೂರು:ನಾವು ಸಣ್ಣ ಅಂತರದಲ್ಲಿ ಸೋತಿದ್ದೇವೆ.ಆದರೆ ಇದು ನಮ್ಮ ಸೋಲಲ್ಲ.ನಮ್ಮ ಸಿದ್ದಾಂತಕ್ಕೆ ಗೆಲುವು ದೊರೆತಿದೆ.ನಮ್ಮ ಸಂಘಟನೆ ಈ ಚುನಾವಣೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ನಮ್ಮ ಸಂಘಟನೆ ನಿರಂತರವಾಗಿರಲಿದೆ.ಮುಂದೆ ನಡೆಯುವ ಲೋಕಸಭೆ,ತಾ.ಪಂ.,ಜಿ.ಪಂ.,ಗ್ರಾ.ಪಂ.ಚುನಾವಣೆಗೂ ನಮ್ಮ ಸಂಘಟನೆ ಹೀಗೆ ಮುಂದುವರಿಯಲಿದೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೇ೧೩ರಂದು ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡ ಬಳಿಕ ಸುಭದ್ರ ಸಭಾ ಸದನದಲ್ಲಿ ನಡೆದ ಪುತ್ತಿಲ ಬೆಂಬಲಿಗ ಕಾರ್ಯಕರ್ತರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದುತ್ವಕ್ಕಾಗಿ ನಮ್ಮ ಸಂಘಟನೆ ನಿರಂತರ-ಶ್ರೀಕೃಷ್ಣ ಉಪಾಧ್ಯಾಯ:
ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ನಾವು ಸಣ್ಣ ಅಂತರದಲ್ಲಿ ಸೋತಿರಬಹುದು.ಆದರೆ ಅದು ಸೋಲಲ್ಲ.ನಮಗೆ ಸೋಲಾಗಿಲ್ಲ.ಅವರ ಅಹಂಕಾರ, ಪ್ರತಿಷ್ಠೆಯಿಂದ ನ್ಯಾಯಕ್ಕೆ ಸೋಲಾಗಿದೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ.ಒಪ್ಪಂದ ಮಾಡಿಕೊಂಡಿದ್ದರೆ ನಾವು ಎರಡನೇ ಸ್ಥಾನಕ್ಕೆ ಬರುತ್ತಿರಲಿಲ್ಲ.ನಾವು ಹೇಳಿದಂತೆ ಬಿಜೆಪಿ ಮೂರನೇ ಸ್ಥಾನಕ್ಕೆ ಬಂದಿದೆ.ನಮ್ಮ ತಂಡಕ್ಕೆ ಸೋಲಾಗಿಲ್ಲ.ಅರುಣ್ ಪುತ್ತಿಲರವರು ಹಿಂದುತ್ವಕ್ಕಾಗಿ ಮಾಡಿದ ಕೆಲಸಗಳಿಗೆ ಇಷ್ಟೊಂದು ಬೆಂಬಲ ದೊರೆತಿದೆ.ಈ ಸೋಲಿನ ಮೂಲಕ ಮುಂದೆ ಗೆಲುವಿನ ಮೆಟ್ಟಿಲು ಹತ್ತಲಿದ್ದೇವೆ.ನಮ್ಮ ಸಂಘಟನೆ ಶಾಶ್ವತ. ಅರುಣ್ ಕುಮಾರ್ ಪುತ್ತಿಲರಿಗೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಬೆಂಬಲ, ಪ್ರೋತ್ಸಾಹ ನಿರಂತರವಾಗಿರಲಿದೆ.ಮುಂದೆ ಹಳ್ಳಿ ಹಳ್ಳಿಗಳಲ್ಲಿ ಸಂಘಟನೆ ನಿರಂತರವಾಗಿರಲಿದೆ. ನಮ್ಮ ಸಂಘಟನೆ ಚುನಾವಣೆಗೆ ಸೀಮಿತವಾಗಿರುವುದಿಲ್ಲ.ಹಿಂದುತ್ವಕ್ಕಾಗಿ ನಿರಂತರವಾಗಿರಲಿದೆ.ಬಜರಂಗದಳ ಬ್ಯಾನ್ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಮುಂದಿನ ಚುನಾವಣೆಗಳಿಗೂ ನಮ್ಮ ಕೆಲಸ ನಿರಂತರ-ಸುನಿಲ್ ಬೋರ್ಕರ್:
ಸುನೀಲ್ ಬೋರ್ಕರ್ ಮಾತನಾಡಿ, ಯಾವ ಸೀಮೆಯ ಹಿಂದುತ್ವ ಎಂದು ಪ್ರಶ್ನಿಸಿದವರಿಗೆ ಈಗ ಏನೆಂದು ಅರ್ಥವಾಗಿದೆ.ಅವರ ಹಿಂದುತ್ವ ಕೇವಲ ೩೦,೦೦೦ ಮತಗಳಿಗೆ ಸೀಮಿತವಾಗಿದೆ.ನಮ್ಮ ಕಾರ್ಯಕರ್ತರು ಹಿಂದುತ್ವ ಏನೆಂದು ತೋರಿಸಿದ್ದಾರೆ.ನಮ್ಮ ಕೆಲಸ ಇಲ್ಲಿಗೆ ನಿಲ್ಲುವುದಿಲ್ಲ ಮುಂದಿನ ಪಂಚಾಯತ್ ಚುನಾವಣೆ, ಲೋಕಸಭಾ ಚುನಾವಣೆಗೂ ನಮ್ಮ ಕೆಲಸ ಕಾರ್ಯಗಳು ನಿರಂತರವಾಗಿರಲಿದೆ ಎಂದರು.
ಸೋಲಿಗೆ ಯಾರೂ ಧೃತಿಗೆಡಬೇಕಾಗಿಲ್ಲ-ಡಾ.ಸುರೇಶ್ ಪುತ್ತೂರಾಯ:
ಡಾ,ಸುರೇಶ್ ಪುತ್ತೂರಾಯ ಮಾತನಾಡಿ, ಈ ಸೋಲಿಗೆ ಯಾರೂ ಧೃತಿಗೆಡಬೇಕಾಗಿಲ್ಲ. ಇದರಿಂದ ಯಾರೂ ವಿಚಲಿತರಾಗಬೇಕಿಲ್ಲ. ಚುನಾವಣೆ ನೆಪ ಮಾತ್ರ. ಈ ಸೋಲು ಸೋಲಲ್ಲ. ನಮ್ಮ ಗೆಲುವಾಗಿದೆ. ನಮ್ಮ ಸಿದ್ದಾಂತ ಗೆದ್ದಿದೆ. ನಮ್ಮ ಕಾರ್ಯ ಇಲ್ಲಿಗೆ ನಿಲ್ಲುವುದಿಲ್ಲ. ಪ್ರತಿಯೊಬ್ಬರೂ ಸಹಕರಿಸುವಂತೆ ಅವರು ವಿನಂತಿಸಿದರು.
ಕಾಂಗ್ರೆಸ್-ಎಸ್ಡಿಪಿಐ ಹೊಂದಾಣಿಕೆಯಿಂದ ಸೋಲಾಗಿದೆ-ಪುತ್ತಿಲ:
ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಚುನಾವಣೆಯಲ್ಲಿ ಸಣ್ಣ ಮತಗಳ ಅಂತದಿಂದ ಸೋಲಾಗಿದೆ.ಆದರೂ ನಮ್ಮ ಸಿದ್ದಾಂತಕ್ಕೆ ಗೆಲುವಾಗಿದೆ.ಈ ಸೋಲು ಶಾಶ್ವತವಾದ ಸೋಲಲ್ಲ. ಚುನಾವಣೆಯಲ್ಲಿ ಕೊನೆ ತನಕ ನನ್ನ ಜೊತೆ ನಿರಂತರವಾಗಿದ್ದು ಗೆಲುವಿನ ಅಂಚಿಗೆ ತರುವ ಕೆಲಸವನ್ನು ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವ ಸಿದ್ಧಾಂತದಲ್ಲಿ ನಾನು ಕಾರ್ಯನಿರ್ವಹಿಸಲಿದ್ದೇನೆ.ನಮ್ಮ ನಿಮ್ಮ ಸ್ನೇಹ ಪ್ರೀತಿ ಶಾಶ್ವತವಾಗಿರಲಿ ಎಂದು ಭಾವುಕರಾಗಿ ಹೇಳಿದರು.ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಹೊಂದಾಣಿಕೆಯಿಂದ ನಮಗೆ ಸೋಲಾಗಿದೆ.ಹಿಂದು ಸಂಘಟನೆಗಳನ್ನು ನಿಷೇಽಸುವ ಹಾಗೂ ಧರ್ಮ ವಿರೋಧಿ ಕೃತ್ಯಗಳ ವಿರುದ್ದ ಜತೆಯಾಗಿ ಹಿಂದು ಸಮಾಜಕ್ಕೆ ಶಕ್ತಿ ತುಂಬಿಸುವ. ನಾವೆಲ್ಲರೂ ಹಿಂದುತ್ವದ ಉಳಿವಿಗಾಗಿ ಜೊತೆಯಾಗಿ ಕೆಲಸ ಮಾಡುವ ಎಂದು ಅವರು ತಿಳಿಸಿದರು.
ಹಿಂದುತ್ವದ ಶಕ್ತಿ ತೋರಿಸಿಕೊಟ್ಟಿದ್ದೇವೆ-ರಾಜಾರಾಮ ಭಟ್:
ರಾಜಾರಾಮ ಭಟ್ ಮಾತನಾಡಿ, ಹಿಂದುತ್ವದ, ಕಾರ್ಯಕರ್ತರ ಹಾಗೂ ಅರುಣ್ ಕುಮಾರ್ ಪುತ್ತಿಲರವರ ಶಕ್ತಿ ಈಗ ಎಲ್ಲರಿಗೂ ಅರ್ಥವಾಗಿದೆ.ನಾವು ಸೋತಿಲ್ಲ.೬೧,೦೦೦ ಮತಗಳನ್ನು ಪಡೆಯುವ ಮೂಲಕ ಹಿಂದುತ್ವದ ಶಕ್ತಿಯನ್ನು ತೋರಿಸಿಕೊಟ್ಟಿದ್ದೇವೆ ಎಂದರು.
ದೇವದುರ್ಲಭ ಕಾರ್ಯಕರ್ತರ ಶ್ರಮದ -ಲವಾಗಿ ದೊಡ್ಡ ಮಟ್ಟದ ಸಾಧನೆ-ಮಾರ್ತ;
ಪ್ರಸನ್ನ ಕುಮಾರ್ ಮಾರ್ತ ಮಾತನಾಡಿ, ನಮ್ಮ ಸಿದ್ದಾಂತಕ್ಕೆ ಗೆಲುವಾಗಿದೆ.ನಾವು ಸೋತಿಲ್ಲ.ದೇವ ದುರ್ಲಭ ಕಾರ್ಯಕರ್ತರ ಅವಿರತ ಶ್ರಮದ -ಲವಾಗಿ ನಾವು ದೊಡ್ಡ ಮಟ್ಟದ ಸಾಧನೆ ಮಾಡಿದ್ದೇವೆ.ಈ ಸಾಧನೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದರುಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ಫಲಿತಾಂಶ ವೀಕ್ಷಣೆಗೆ ಎಲ್ಇಡಿ ಪರದೆ: ಮತ ಎಣಿಕೆ ಫಲಿತಾಂಶ ವೀಕ್ಷಣೆಗೆ ಸುಭದ್ರ ಕಲಾ ಮಂದಿರದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ವೀಕ್ಷಣೆ ಮಾಡಿದರು.