ಬಲ್ನಾಡು ಮೊರಾರ್ಜಿದೇಸಾಯಿ ವಸತಿ ಶಾಲೆಗೆ ಶೇ.100 ಫಲಿತಾಂಶ

0

ಪುತ್ತೂರು: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ ಹಾಜರಾದ 48 ಮಂದಿ ವಿದ್ಯಾರ್ಥಿಗಳಲ್ಲಿ 11 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 32 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 5 ಮಂದಿ ವಿದ್ಯಾರ್ಥಿಗಳು ದ್ವೀತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಕೆ.ಹಿತಾಶ್ರೀ 603 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ, ಲತಾಶ್ರೀ ಕೆ.ವಿ 598 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಮತ್ತುರಾಮ್ ಪ್ರಸಾದ್ 591 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿರುತ್ತರೆ.
ತೀರ್ಥಆರ್.ಎಮ್(580), ಶಿವಶರಣು ಕಲಬಶೆಟ್ಟಿ(572), ಪೃಥ್ವಿ(557), ಸುದೀಪ್‌ಕುಂದರಗಿ(556), ಪ್ರಶಾಂತ್ ಪಾಟೀಲ್(551), ಪುನೀತ್(542), ಶ್ರೇಯಾಕೆ.ಎಸ್(539), ಸಂತೋಷ್ ಲಮಾಣಿ(538) ಅಂಕ ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆಎಂದು ಶಾಲಾ ಪ್ರಾಂಶುಪಾಲ ಅರುಣ್ ನಾಯ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here