11ಇ ನಕ್ಷೆಯಲ್ಲಿ ಲೋಪ: ಕಲಿಯುಗ ಸೇವಾ ಸಮಿತಿಯಿಂದ ದೂರು

0

ಪುತ್ತೂರು: ಸಾರ್ವಜನಿಕರು 11ಇ ನಕ್ಷೆಗೆ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದಾಗಲೂ ಸಂಬಂಧಪಟ್ಟ ಇಲಾಖೆಗಳು ತಪ್ಪು ನಕ್ಷೆ ತಯಾರಿಸಿ ಕೊಡುತ್ತಿರುವ ಬಗ್ಗೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಭೂದಾಖಲೆಗಳ ಉಪನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ.

ಜಮೀನಿಗೆ ಸಂಬಂಧಪಟ್ಟ 11ಇ ನಕ್ಷೆ ಅನೇಕ ವ್ಯವಹಾರಗಳಿಗೆ ಅವಶ್ಯಕವಿರುತ್ತದೆ. ತಪ್ಪು ನಕ್ಷೆ ತಯಾರಿಸುವುದರಿಂದ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸರ್ವೆಯರ್ ತಯಾರಿಸಿದ ನಕ್ಷೆಯನ್ನು ಇಲಾಖೆಯ ಇತರ ಇಬ್ಬರು ಉನ್ನತ ಅಧಿಕಾರಿಗಳು ಪರಿಶೀಲಿಸಿ ದೃಢಪಡಿಸಬೇಕಾಗಿರುತ್ತದೆ. ನಕ್ಷೆಗಳು ತಪ್ಪಾಗದಂತೆ ಈ ರೀತಿ ಪರಿಶೀಲಿಸಿ ಪ್ರಕ್ರಿಯೆಗಳನ್ನು ಮುಂದುವರಿಸುವ ವ್ಯವಸ್ಥೆಗಳು ಕಾನೂನಿನಲ್ಲಿ ಇದ್ದರೂ ಸರ್ವೆಯರ್ ಮತ್ತು ಇಲಾಖೆ ಇತರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಸಂಕಷ್ಟಕ್ಕೆ ಒಳಗಾಗಬೇಕಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಈ ಕುರಿತು ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here