ನೆಲ್ಯಾಡಿ: ಕಳೆದ ೭ ವರ್ಷಗಳಿಂದ ಖಾಯಂ ಶಿಕ್ಷಕರಿಲ್ಲದೇ ಇರುವ ಕಡಬ ತಾಲೂಕಿನ ಬಲ್ಯ ಪಟ್ಟೆ ಶಾಲೆಗೆ ಈ ಬಾರಿಯಾದರೂ ಖಾಯಂ ಶಿಕ್ಷಕರ ನೇಮಕ ಮಾಡಬೇಕೆಂದು ಎಸ್ಡಿಎಂಸಿ ವತಿಯಿಂದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿ ಮಾಡಲಾಗಿದೆ.
ಬಲ್ಯ ಪಟ್ಟೆಯಲ್ಲಿ ಕಳೆದ ೭ ವರ್ಷಗಳಿಂದ ಶಿಕ್ಷಕರು ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಯಂ ಶಿಕ್ಷಕರು ಇಲ್ಲದೇ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದ್ದ ಮಕ್ಕಳನ್ನೂ ಬೇರೆ ಶಾಲೆಗೆ ಸೇರಿಸುವುದಾಗಿ ಪೋಷಕರೂ ತಿಳಿಸಿದ್ದಾರೆ. ಕಳೆದ ೭ ವರ್ಷಗಳಿಂದ ಶಾಲೆಗೆ ಖಾಯಂ ಶಿಕ್ಷಕರ ನೇಮಕ ಆಗಿಲ್ಲ. ಈ ವರ್ಷವಾದರೂ ಶಾಲೆಗೆ ಖಾಯಂ ಶಿಕ್ಷಕರ ನೇಮಕ ಮಾಡಿ ಶಾಲೆಯನ್ನು ಉಳಿಸಿಕೊಡಬೇಕೆಂದು ಎಸ್ಡಿಎಂಸಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಲಾಗಿದೆ. ಎಸ್ಡಿಎಂಸಿ ಅಧ್ಯಕ್ಷರಾದ ರಾಮಯ್ಯ ರೈ ಬೆದ್ರಾಡಿ, ಸದಸ್ಯರಾದ ಪುಷ್ಪರಾಜ ಕೊಡಂಗೆ, ಚಂದ್ರಶೇಖರ ಪುಳಿತ್ತಡಿ, ಮನೋಜ್ ಬೀರುಕ್ಕು, ಬಾಬು ಬಿ ಬೀರುಕ್ಕು, ಬಾಬು ಪಿ.ಪಟ್ಟೆ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.