ಪುತ್ತೂರು: ‘ಅರುಣ್ ಕುಮಾರ್ ಬ್ರಿಗೇಡ್ ಪಾಣಾಜೆ’ ಎಂಬ ವಾಟ್ಸಪ್ ಗ್ರೂಪಿನಲ್ಲಿ ಮುಸಲ್ಮಾನರ ಭಾವನೆಗೆ ಚ್ಯುತಿ ತಂದಿರುವ ಸುದೀಪ್ ಪನಿಯನ್ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಸ್ಲಿಂ ಯುವ ಜನ ಪರಿಷತ್ ನ ಅಧ್ಯಕ್ಷ ಆಶ್ರಫ್ ಕಲ್ಲೇಗ ಡಿವೈಎಸ್‌ಪಿ ಗಾನಾ ಪಿ ಕುಮಾರ್‌ರವರಿಗೆ ದೂರು ನೀಡಿದ್ದಾರೆ.
ಅರುಣ್ ಪುತ್ತಿಲ ಬ್ರಿಗ್ರೇಡ್ ಪಾಣಾಜೆ ಎಂಬ ವಾಟ್ಸಪ್ ಗ್ರೂಪಿನಲ್ಲಿ ಕಾರ್ಟೂನ್ ಅನ್ನು ರಚಿಸಿ ಆ ಕಾರ್ಟೂನ್ ನಲ್ಲಿ ಮುಸ್ಲಿಂ ಮಹಿಳೆಯು ಮುಸಲ್ಮಾನರ ಪವಿತ್ರ ನಮಾಜ್ ಪ್ರಾರ್ಥನೆ ನೇತೃತ್ವ ವಹಿಸಿ ಅವರ ಹಿಂದೆ ಮೂರು ಮುಸಲ್ಮಾನ ಪುರುಷರು ಪ್ರಾರ್ಥನೆ ಮಾಡುತ್ತಾ ಇರುವಂತೆ ಅಶ್ಲೀಲ ಭಂಗಿಯಲ್ಲಿ ಚಿತ್ರವನ್ನು ರಚಿಸಿ ವಾಟ್ಸಾಪ್ ಗ್ರೂಪ್ ನಲ್ಲಿ ಹರಿಯ ಬಿಟ್ಟು ಮುಸಲ್ಮಾನರ ಭಾವನೆಗೆ ಚ್ಯುತಿ ಹಾಗೂ ಭಂಗ ತಂದಿರುತ್ತಾರೆ ಇದರಿಂದ ಇಸ್ಲಾಂ ವಿಶ್ವಾಸಿಯಾದ ನನಗೆ ತೀವ್ರ ನೋವುಂಟಾಗಿರುತ್ತದೆ ಮಾತ್ರವಲ್ಲ ಇದು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಲು ಪ್ರಯತ್ನಿಸಿ ಸಮಾಜದಲ್ಲಿ ಅಶಾಂತಿ ಉಂಟಾಗುವಂತೆ ಮಾಡಿದ ಕೃತ್ಯವಾಗಿರುತ್ತದೆ ಆದ್ದರಿಂದ ಈ ಮೇಲಿನ ಆಪಾದಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.