ಪ್ರಗತಿಯತ್ತ ಹೆಜ್ಜೆ ಹಾಕುತ್ತಾ ಸಾಧನೆಯ ಶಿಖರವನ್ನೇರಬೇಕು- ಜಯಸೂರ್ಯ ರೈ ಮಾದೋಡಿ
ಕಾಣಿಯೂರು: ಸಂಸ್ಥೆಯ ಹೆಸರಿಗೆ ಅನ್ವರ್ಥನಾಮದಂತೆ ಮಕ್ಕಳು ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಹೆಜ್ಜೆ ಹಾಕುತ್ತಾ ಸಾಧನೆಯ ಶಿಖರವನ್ನೇರಬೇಕು ಎಂದು
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಹೇಳಿದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಜೂ.1ರಂದು ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ, ಪೋಷಕ ಬಂಧು ಸುನಿಲ್ ರೈ ಪೆರುವಾಜೆ , ಧನಂಜಯ ಕೇನಾಜೆ , ಶಿಕ್ಷಕಿ ಹೇಮಾ ನಾಗೇಶ್ ರೈ ಮಕ್ಕಳಿಗೆ ಶುಭ ಹಾರೈಸಿದರು. ಶಿಕ್ಷಕಿ ವಿನಯ ವಿ. ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ವೃಂದದವರು , ಸಿಬ್ಬಂದಿ ವೃಂದದವರು, ಪೋಷಕ ಬಂಧುಗಳು ಉಪಸ್ಥಿತರಿದ್ದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ವಾತಾವರಣ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಅದ್ದೂರಿ ಸ್ವಾಗತದೊಂದಿಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು , ಸಿಬ್ಬಂದಿ ವರ್ಗದವರು ಬರಮಾಡಿಕೊಂಡರು. ಬ್ಯಾಂಡ್ ವಾದನದೊಂದಿಗೆ ಸಭಾಂಗಣಕ್ಕೆ ಬಂದ ವಿದ್ಯಾರ್ಥಿ ಬಳಗವನ್ನು ಶಿಕ್ಷಕವೃಂದದವರು ಆರತಿ ಎತ್ತಿ ತಿಲಕವನ್ನು ಇಡುವ ಮೂಲಕ ಈ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು. ವಿದ್ಯಾಸರಸ್ವತಿಯ ಅನುಗ್ರಹವನ್ನು ಪಡೆಯುವ ಮೂಲಕ ಎಲ್ಲಾ ಮಕ್ಕಳು ತರಗತಿಗೆ ಹಾಜರಾದರು.