ಪುತ್ತೂರು: ಕುಂಜೂರು ಪಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಊರವರ ಉತ್ಸಾಹದಲ್ಲಿ ಖಾಸಗಿ ಶಾಲೆಗಳಿಗೆ ಸಾಟಿ ಎನ್ನುವಂತೆ ಮಕ್ಕಳ ಕರೆದೊಯ್ಯಲು ವ್ಯಾನ್ ವ್ಯವಸ್ಥೆ ಪ್ರಾರಂಭಗೊಂಡಿದೆ.
ಆಡಳಿತ ಸಮಿತಿ ಸ್ವಂತ ಹಣದಲ್ಲೇ ವ್ಯಾನ್ ಖರೀದಿ ಮಾಡಲು ವ್ಯವಸ್ಥೆ ಮಾಡಿದ್ದು ,ಕೊನೆಯ ಕ್ಷಣದಲ್ಲಿ ಊರಿನ ಹಿರಿಯ ವಿದ್ಯಾರ್ಥಿಯಾಗಿರುವ ವಿನೋದ ಬಂಗಾರಡ್ಕ, ಅವರು ತನ್ನ ವ್ಯಾನಲ್ಲೇ ಈ ವ್ಯವಸ್ಥೆ ನಿಭಾಯಿಸಿರುವುದು ಹೆಮ್ಮೆಯ ಸಂಗತಿ.. ಮಕ್ಕಳು ಕೊಡುವ ಹಣ ಕಡಿಮೆ ಆದರೂ ವ್ಯಾನ್ ಮಾಲಕರಿಗೆ ಯಾವುದೇ ನಷ್ಟ ಆಗದಂತೆ ಈ ವರ್ಷ ಪೂರ್ತಿ ನಮ್ಮ ಸಂಗ್ರಹದ ಹಣವನ್ನೇ ಕೊಡುವುದು ಎಂದು ತೀರ್ಮಾನಿಸಲಾಗಿದೆ. ಆರಂಭದಲ್ಲಿ ವ್ಯಾನಿಗೆ 15 ಮಕ್ಕಳ ನಿರೀಕ್ಷೆಯಂತೆ ಇದೀಗ 34 ಮಕ್ಕಳು ಹೆಸರು ನೋಂದಾಯಿಸಿದ್ದಾರೆ. ತೆಂಗಿನ ಕಾಯಿ ಒಡೆಯುವ ಮೂಲಕ ವ್ಯಾನ್‌ಗೆ ಚಾಲನೆ ನೀಡಲಾಯಿತು.
ಉದ್ಘಾಟನೆ:
ಊರಿನ ಹಿರಿಯರಾದ ರಾಮ ಭಟ್ ಬಂಗಾರಡ್ಕ, ಹಾಗೂ ಜ್ಯೋತಿಷಿ, ಸುಬ್ರಮಣ್ಯ ಬಲ್ಯಾಯರು ದೀಪ ಬೆಳಗಿಸಿ, ತೆಂಗಿನಕಾಯಿ ಒಡೆಯುವುದರ ಮೂಲಕ ಮಕ್ಕಳ ವ್ಯಾನ್‌ಗೆ ಚಾಲನೆ ನೀಡಿದರು. ವಿಶ್ವೇಶ್ವರ ಭಟ್ ಬಂಗಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಬಲ ರೈರವರು ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಇಂದಿರಾ ವಂದಿಸಿದರು. ಗೋಪಾಲ ಭಟ್ , ಪ್ರಭಾಕರ ಪ್ರಭು, ರಾಕೇಶ ಶರ್ಮ, ಶ್ರೀಧರ ನಾಯಕ್ ಉಪಸ್ಥಿತರಿದ್ದರು.