ಪೆರಾಬೆ: ಮನೆ ಹಂಚಿನ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬಿದ್ದು ಗಾಯಗೊಂಡ ಭಜನಾ ಮಂಡಳಿಯ ಸಕ್ರಿಯ ಕಾರ್ಯಕರ್ತ ದಾಮೋದರ ಗೌಡ ಬಾಣಬೆಟ್ಟು ಅವರಿಗೆ ಕುಂತೂರು ಶಾರದಾ ಭಜನಾ ಮಂಡಳಿ ವತಿಯಿಂದ 5 ಸಾವಿರ ರೂ.ಧನ ಸಹಾಯ ನೀಡಲಾಯಿತು.
ಶಾರದಾ ಭಜನಾ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅನ್ನಡ್ಕ, ಕಾರ್ಯದರ್ಶಿ ಅಶೋಕ್ ರೈ ಗಾಣಜಾಲು, ಟ್ರಸ್ಟ್‌ನ ಸದಸ್ಯರಾದ ಸುಬ್ರಹ್ಮಣ್ಯ ಗೌಡ ಎರ್ಮಾಳ, ಕಮಲಾಕ್ಷ ಶೆಟ್ಟಿ ಅಂಬರಾಜೆ, ಬಾಲಕ್ಷಷ್ಣ ಪೂಜಾರಿ ಸಾರಕೆರೆ ಉಪಸ್ಥಿತರಿದ್ದರು.