ನಮ್ಮ ಆರೋಗ್ಯ ಕಾಳಜಿಯೊಂದಿಗೆ ಪರಿಸರವನ್ನು ಕಾಪಾಡಿ – ನ್ಯಾಯಾಧೀಶ ಗೌಡ ಆರ್ ಪಿ
ಪುತ್ತೂರು: ನಮ್ಮ ಆರೋಗ್ಯ ಕಾಳಜಿಯೊಂದಿಗೆ ಪರಿಸರವನ್ನು ಕಾಪಾಡಿ ಎಂದು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಗೌಡ ಆರ್ ಪಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು, ವಲಯ ಅರಣ್ಯ ಇಲಾಖೆ ಪುತ್ತೂರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಜಯನಗರ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೂ.10ರಂದು ಸಂಜಯನಗರ ಶಾಲೆಯಲ್ಲಿ ನಡೆದ ‘ಪರಿಸರದ ಬಗ್ಗೆ ಕಾನೂನು ಅರಿವು’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಕೀಲರ ಸಂಘದ ಖಜಾಂಚಿ ಶ್ಯಾಮಪ್ರಸಾದ್ ಕೈಲಾರ್ ಅಧ್ಯಕ್ಷತೆ ವಹಿಸಿದ್ದರು. ವಲಯಾರಣ್ಯ ಅಧಿಕಾರಿ ಕಿರಣ್ ಬಿ ಎಮ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವಕೀಲರ ಸಂಘದ ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್, ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನಲ್ ವಕೀಲ ವೆಂಕಟೇಶ್ ಸಿ.ಎಸ್, ಮನೋಜ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜಯನಗರ ಶಾಲೆಯ ಮುಖ್ಯಗುರು ರಮೇಶ ಉಳಯ ಸ್ವಾಗತಿಸಿದರು. ಸಹ ಶಿಕ್ಷಕಿ ಸ್ಮೀತಾಶ್ರೀ ಪ್ರಾರ್ಥಿಸಿದರು. ಶಾಲಾ ನಾಯಕಿ ಚಾರಿತ್ರ್ಯ, ಉಪನಾಯಕಿ ಮೇಘಶ್ರೀ, ವಂದನಾ, ಪಾಯಿಝ್, ಸಂತೋಷ್, ಅದ್ವೇತ್, ಸುಹಾ ಜೈನಬಾ ಅತಿಥಿಗಳನ್ನು ಗೌರವಿಸಿದರು. ಕರ್ನಾಟಕ ಸರಕಾರಿ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಅರಣ್ಯ ವೀಕ್ಷಕ ರಾಜುಚಂದ್ರ, ರಕ್ಷಕ ಶೇಖರ್ ಮತ್ತು ಶೇಖರ್, ಶಾಲಾ ವಿದ್ಯಾರ್ಥಿಗಳು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.