ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ಸಂಸ್ಥೆಯು ಜೂ.11ರಂದು 45ನೇ ಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಸ್ಥಾಪಕರ ದಿನಾಚರಣೆ ಪ್ರಯುಕ್ತ ಸಂಜೆ ಮಾಯಿದೆ ದೇವುಸ್ ಚರ್ಚ್ ನಲ್ಲಿ ದಿವ್ಯ ಬಲಿಪೂಜೆ ಜರಗಲಿದ್ದು, ದಿವ್ಯ ಬಲಿಪೂಜೆಯನ್ನು ಲೈಫ್ ಕಮ್ಯೂನಿಟಿಯ ಮಂಗಳೂರು ಧರ್ಮಪ್ರಾಂತ್ಯದ ಆಧ್ಯಾತ್ಮಿಕ ಸಹಾಯಕ ಅನಿಲ್ ಡಿ’ಮೆಲ್ಲೊ ಎಸ್.ಜೆರವರು ನೆರವೇರಿಸಲಿದ್ದಾರೆ. ಬಳಿಕ ಮಾಯಿದೆ ದೇವುಸ್ ಸಭಾಂಗಣದಲ್ಲಿ ಜರಗುವ ಜರಗುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಹಾಗೂ ಆಧ್ಯಾತ್ಮಿಕ ಸಹಾಯಕರಾದ ಲಾರೆನ್ಸ್ ಮಸ್ಕರೇನ್ಹಸ್ ರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಆರ್.ಎಂ ಅಸೆಟ್ ಮ್ಯಾನೇಜ್ಮೆಂಟ್ ನ ಎಲ್ರೋನ್ ರೊಡ್ರಿಗಸ್ ರವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಿ.ಎಲ್.ಸಿ ಸಂಸ್ಥೆಯ ಪ್ರತಿಭಾವಂತ ಮಕ್ಕಳಿಗೆ ಗೌರವಿಸುವ ಹಾಗೂ ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ(ಶಿಕ್ಷಣ) ಮತ್ತು ಹಣಕಾಸಿನ ನೆರವು ವಿತರಣೆ ನಡೆಯಲಿದೆ ಎಂದು ಸಿ.ಎಲ್.ಸಿ ಅಧ್ಯಕ್ಷ ಮಾರ್ಟಿನ್ ಡಿ’ಸೋಜ, ಕಾರ್ಯದರ್ಶಿ ವಿಲಿಯಂ ನೊರೋನ್ಹಾ, ಸಿ.ಎಲ್.ಸಿ ವಿದ್ಯಾರ್ಥಿ ವೇತನ ಸಮಿತಿಯ ಗೌರವ ಸದಸ್ಯ ಸಿಎ ಆಲ್ವಿನ್ ಹೆನ್ರಿ ರೊಡ್ರಿಗಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.