ಮಕ್ಕಳ ಬ್ಯಾಗ್ ಹೊರೆಯನ್ನು ತಗ್ಗಿಸಲು ಸರಕಾರದ ಆದೇಶ

0

ಬೆಂಗಳೂರು: ರಾಜ್ಯದಲ್ಲಿ ಒಂದರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ತಗ್ಗಿಸುವಂತೆ ಸರಕಾರದಿಂದ ಆದೇಶ ಹೊರಡಿಸಲಾಗಿದೆ. ಡಿಎಸ್‌ಇಆರ್‌ಟಿ ಸಂಸ್ಥೆಯು ಅಧ್ಯಯನವನ್ನು ನಡೆಸಿ ಸಲ್ಲಿಸಿದ್ದ ವರದಿಯಂತೆ ಸರಕಾರ ಈ ಕ್ರಮ ವಹಿಸಿದೆ.

1 ಮತ್ತು 2ನೆ ತರಗತಿಯ ಮಕ್ಕಳ ಶಾಲಾ ಬ್ಯಾಗ್‌ನ ತೂಕ 1.5ರಿಂದ 2ಕೆ.ಜಿ., 3ರಿಂದ 5ನೆ ತರಗತಿಯ ಮಕ್ಕಳ ಶಾಲಾ ಬ್ಯಾಗ್‌ನ ತೂಕ 2ರಿಂದ 3 ಕೆ.ಜೆ., 6ರಿಂದ 8ನೆ ತರಗತಿಯ ಮಕ್ಕಳ ಶಾಲಾ ಬ್ಯಾಗ್‌ನ ತೂಕ 3ರಿಂದ 4 ಕೆ.ಜಿ. ಹಾಗೂ 9 ಮತ್ತು 10ನೆ ತರಗತಿ ಮಕ್ಕಳ ಶಾಲಾ ಬ್ಯಾಗ್‌ನ ತೂಕ 4ರಿಂದ 5 ಕೆ.ಜಿ. ಇರಬೇಕು ಎಂದು ಆದೇಶದಲ್ಲಿ ತಿಳಿಸಿದೆ.

1 ಮತ್ತು 2ನೆ ತರಗತಿಯ ಮಕ್ಕಳಿಗೆ ಯಾವುದೇ ಗೃಹಪಾಠ ಅಥವಾ ಮನೆ ಗೆಲಸವನ್ನು ನೀಡದಂತೆ ಮತ್ತು 1ರಿಂದ 5ನೆ ತರಗತಿ ಮಕ್ಕಳಿಗೆ ಭಾಷೆ, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಇನ್ಯಾವುದೇ ಪಠ್ಯವನ್ನು ನಿಗದಿ ಪಡಿಸದಂತೆಯೂ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here