ಒಟ್ಟು ವ್ಯವಹಾರ 960.46 ಕೋಟಿ ರೂ ವ್ಯವಹಾರ ನಡೆಸಿ , 180.43 ಲಕ್ಷ ರೂ ನಿವ್ವಳ ಲಾಭ
ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022 -23 ನೇ ಸಾಲಿನಲ್ಲಿ ಒಟ್ಟು ವ್ಯವಹಾರ 960.46 ಕೋಟಿ ರೂ. ನಡೆಸಿ 180.43 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಸಂಘದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘವು 2018- 19 ನೇ ಸಾಲಿನಲ್ಲಿ 43.87 ಕೋಟಿ ರೂ. ಠೇವಣಿ ಹೊಂದಿದ್ದು ವರದಿ ವರ್ಷದಲ್ಲಿ 81.17 ಕೋಟಿ ರೂ. ಠೇವಣಿ ಹೊಂದಿದೆ.2018 _19 ರಲ್ಲಿ63.71.ಕೋಟಿ ರೂ. ಸಾಲ ವಿವಿಧ ಉದ್ದೇಶಗಳಿಗೆ ಸಾಲ ವಿತರಿಸಿದ್ದು 2022 – 23ನೇ ವರ್ಷದಲ್ಲಿ 125.35 ಕೋಟಿ ರೂ. ಸಾಲ ವಿತರಿಸಲಾಗಿದೆ. ಶೇಕಡಾವಾರು ಸಾಲ ವಸೂಲಾತಿಯಲ್ಲಿ ಕಳೆದ ವರ್ಷ 98.44 ಆಗಿದ್ದು ಈ ವರ್ಷ ಶೇ. ಸಾಲ 98.70 ವಸೂಲಾತಿ ಆಗಿದೆ. 2018 -19 ರಲ್ಲಿ 112.25 ಲಕ್ಷ ರೂ. ಲಾಭ ಗಳಿಸಿದ್ದು, ಅಡಳಿತ ಮಂಡಳಿ, ಸದಸ್ಯರ ಹಾಗು ಸಿಬ್ಬಂದಿಗಳ ಸಹಕಾರದೊಂದಿಗೆ 2022 – 23 ನೇ ಸಾಲಿನಲ್ಲಿ ಒಟ್ಟು 960.46 ಲಕ್ಷ ವ್ಯವಹಾರ ನಡೆಸಿ 180.43 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದಿಂದ ವಾರ್ಷಿಕ ಕ್ಯಾಲೆಂಡರ್ ಮುದ್ರಿಸಿ ಸದಸ್ಯರ ಮನೆಗಳಿಗೆ ತಲುಪಿಸಲಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಸಂಘದ ಪ್ರಧಾನ ಕಛೇರಿ ಹಾಗು ಶಾಖೆಯಲ್ಲಿ ದೀನಸಿ ಸಾಮಾಗ್ರಿ ಮಾರಾಟ ವ್ಯವಸ್ಥೆಯನ್ನು ಹಿತ ಮಿತ ದರದಲ್ಲಿ ಮಾಡಲಾಗಿತ್ತು ಇದರಿಂದ ಸಂಘದ ಸದಸ್ಯರಿಗೆ ಬಹಳಷ್ಟು ಅನುಕೂಲವಾಗಿದೆ. ಹಳೆನೇರೆಂಕಿಯಲ್ಲಿ ಸಂಘದ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ 40 ಸೆಂಟ್ಸ್ ಜಾಗವನ್ನು ಖರೀದಿಸಿ ಇಲಾಖೆಯ ಅನುಮತಿಯೊಂದಿಗೆ ಅಂದಾಜು 2ಕೋಟಿಗಿಂತಲೂ ಹೆಚ್ಚು ರೂಪಾಯಿಯ ಕಟ್ಟಡ ಕಾಮಗಾರಿಯು ನಡೆಯುತ್ತಿದ್ದು,ಕಾಮಗಾರಿ ಮುಗಿದ ಮೇಲೆ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿ ,ರೈತರ ಅನುಕೂಲಕ್ಕಾಗಿ ಆಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಪ್ರದಾನ ಕಛೇರಿಯ ಮುಂಭಾಗಕ್ಕೆ ಸುಮಾರು 10 ಲಕ್ಷ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಕೆ ಮಾಡಲಾಗಿದೆ .ಕುಂತೂರು ಶಾಖೆಯ ಮುಂಭಾಗಕ್ಕೆ ಇಂಟರ್ ಲಾಕ್ ಅಳವಡಿಕೆ. ಹಳೆನೇರೆಂಕಿಯ ಕಟ್ಟಡದ ಕಾಮಗಾರಿ ಮುಗಿದ ಬಳಿಕ ಕೊಯಿಲದಲ್ಲಿ ಪಾಲು ಬಿದ್ದಿರುವ ಹಳೆಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಮರ್ಷಿಯಲ್ ಕಾಂಪ್ಲೇಕ್ಸ್ ಮಾಡುವ ಉದ್ದೇಶವನ್ನು ಸಂಘವು ಹೊಂದಿದೆ ಎಂದರು .
ಸುವರ್ಣ ಸಹಕಾರಿ ವಿಮಾ ನಿಧಿಯನ್ನು ಸಂಘದ ಸಾಲಗಾರ ಸದಸ್ಯರಿಗೆ ಅಳವಡಿಕೆಯ ಕುರಿತು ತಿಳಿಸಿ ಸಂಘದ ಸದಸ್ಯರಿಗೆ ಜೇನುಕೃಷಿ ಬಗ್ಗೆ ಮಾಹಿತಿ ಹಾಗೂ ತೋಟಗಾರಿಕ ಇಲಾಖಾ ಸಹಯೋಗದೊಂದಿಗೆ ಅಡಕೆ ಎಲೆಚುಕ್ಕಿ ರೋಗ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿದೆ. ಹವಾಮಾನ ನಿಯಂತ್ರಿತ ಬೇಳೆ ವಿಮೆಯನ್ನು 2020- 21 ನೇ ಸಾಲಿನಲ್ಲಿ 1485 ಮಂದಿಗೆ,2021-22 ನೇ ಸಾಲಿನಲ್ಲಿ 1632 ಮಂದಿಗೆ,2022-23 ನೇ ಸಾಲಿನಲ್ಲಿ 1967 ಮಂದಿ ಸದಸ್ಯರಿಗೆ ಬೇಳೆ ವಿಮೆಯನ್ನು ನೊಂದಯಿಸಿ ತಾಲೂಕಿನಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಸಂಘವು ಅಭಿವೃದ್ಧಿ ಫಥದಲ್ಲಿದೆ ಎಂದು ತಿಳಿಸಿ ಜೂ.24 ರಂದು ಬೆಳಿಗ್ಗೆ ಸಂಘದ ದೀನದಯಾಳು ಸಭಾಭವನದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ ಸಂಘದ ಸದಸ್ಯರು ಭಾಗವಹಿಸಬೇಕಾಗಿ ಅಧ್ಯಕ್ಷರು ವಿನಂತಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು. ಪ್ರತಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಸುಧಾಕರ ಪೂಜಾರಿ ಕಲ್ಲೇರಿ, ಅಣ್ಣು ನಾಯ್ಕ ಉಪಸ್ಥಿತರಿದ್ದರು.