ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ರಾಜ್ಯ, ದೇಶ ನಮ್ಮದಾಗಲಿ
ಜನರು ಗುಲಾಮರಲ್ಲ – ರಾಜರು. ಜನಪ್ರತಿನಿಧಿ ರಾಜನಲ್ಲ – ಜನಸೇವಕ.
ಅಧಿಕಾರಿಗಳು-ಸಾರ್ವಜನಿಕ ಸೇವಕರು.
ಲಂಚ, ಭ್ರಷ್ಟಾಚಾರ ರಹಿತ ಉತ್ತಮ ಸೇವೆಯ ಆಡಳಿತ- ಜನಪ್ರತಿನಿಧಿಯ ಕರ್ತವ್ಯ.
ಅದನ್ನು ಕೇಳುವುದು, ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ವಾಪಸು ಪಡೆಯುವುದು-ಜನರ ಹಕ್ಕು, ಕರ್ತವ್ಯ.
ಈ ಊರು ನಮ್ಮದು ಇಲ್ಲಿಯ ನೆಲ, ಜಲ, ವಾಯು, ಸಂಪತ್ತು, ಕಟ್ಟಡ, ಶಾಲೆ, ಸೊಸೈಟಿ, ರಸ್ತೆ, ಸಂಕ, ಆಡಳಿತ ಎಲ್ಲವೂ ನಮ್ಮದೇ, ನಮಗಾಗಿ ಇರುವಂತದ್ದು. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮವರು, ನಮ್ಮ ಸೇವೆಗಾಗಿ ಇರುವವರು. ಇದು ಯಾವುದೇ ಪಕ್ಷದ ಸ್ವಾತಂತ್ರ್ಯವಲ್ಲ. ನಮ್ಮ ಜನರ ಸ್ವಾತಂತ್ರ್ಯ.